ಯುಎಇ: ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವು ಗೌರವಗಳಿಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರಬ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಅರಸಿ ಬಂದಿದೆ.
ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ರಾಜತಾಂತ್ರಿಕ ನಡೆಗೆ ಯುನೈಟೆಡ್ ಅರಬ್ ಎಮಿರೈಟ್ಸ್ ನೀಡುವ ಈ ಅತ್ಯುನ್ನತ ಪ್ರಶಸ್ತಿಯನ್ನು ಈ ವರ್ಷ ಪ್ರಧಾನಿ ಮೋದಿ ಅವರಿಗೆ ಘೋಷಣೆ ಮಾಡಿರುವುದಾಗಿ ಅಲ್ಲಿನ ಸರ್ಕಾರ ತಿಳಿಸಿದೆ.
We have historical and comprehensive strategic ties with India, reinforced by the pivotal role of my dear friend, Prime Minister Narendra Modi, who gave these relations a big boost. In appreciation of his efforts, the UAE President grants him the Zayed Medal.
— محمد بن زايد (@MohamedBinZayed) April 4, 2019
ಯುಎಇ ಅಧ್ಯಕ್ಷ ಖಲೀಫಾ ಬಿನ್ ಸೈಯ್ಯದ್ ಬಿನ್ ಸುಲ್ತಾನಾ ಅಲ್ ನೈಯನ್ ಅವರ ಆದೇಶದಂತೆ ಅಲ್ಲಿನ ಅಧಿಕೃತ ಟ್ವೀಟರ್‌ನಲ್ಲಿ ಘೋಷಣೆ ಮಾಡಲಾಗಿದ್ದು, ಈ ಪ್ರಶಸ್ತಿ ಜಾಯೇದ್ ಮೆಡಲ್ ಅನ್ನು ಹೊಂದಿದೆ.
भारत के साथ हमारे ऐतिहासिक संबंध हैं, मेरे प्रिय मित्र, प्रधान मंत्री नरेंद्र मोदी की महत्वपूर्ण भूमिका से, जिन्होंने इन संबंधों को बढ़ावा दिया। उनके प्रयासों की सराहना करते हुए, संयुक्त अरब अमीरात के राष्ट्रपति ने उन्हें ज़ायद पदक प्रदान किया
— محمد بن زايد (@MohamedBinZayed) April 4, 2019
ಈ ಕುರಿತಂತೆ ಯುಎಇ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಾರತ ಹಾಗೂ ಯುಎಇ ಐತಿಹಾಸಿಕವಾದ ಬಾಂಧವ್ಯವನ್ನು ಹೊಂದಿದೆ. ಇದನ್ನು ಮತ್ತಷ್ಟು ಉತ್ತಮಗೊಳಿಸುವ ಜೊತೆಯಲ್ಲಿ ಈ ಮೂಲಕ ಉಭಯ ದೇಶಗಳ ಅಭಿವೃದ್ಧಿಗೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಮಹತ್ವದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದೆ.
Discussion about this post