ಕಲ್ಪ ಮೀಡಿಯಾ ಹೌಸ್ | ಕೊಲ್ಲೂರು |
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮ್ಮ ಪತಿ, ನಟ ದರ್ಶನ್ ಅವರ ಬಂಧ ಮುಕ್ತಿಗಾಗಿ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯ ಮೊರೆ ಹೋಗಿದ್ದಾರೆ.
ಉಡುಪಿ ಜಿಲ್ಲೆ, ಬೈಂದೂರು ತಾಲೂಕಿನಲ್ಲಿರುವ ಸುಪ್ರಸಿದ್ದ ಶಕ್ತಿ ಕ್ಷೇತ್ರ ಕೊಲ್ಲೂರಿಗೆ ನಿನ್ನೆ ರಾತ್ರಿಯೇ ತಮ್ಮ ಆಪ್ತರೊಂದಿಗೆ ಆಗಮಿಸಿರುವ ಅವರು, ತಾಯಿ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಕ್ಷೇತ್ರದಲ್ಲಿ ಋತ್ವಿಜರ ಮೂಲಕ ನವಚಂಡಿಕಾ ಹೋಮ ನಡೆಸಿರುವ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಂದು ಅಥವಾ ನಾಳೆ ಮತ್ತೆ ಚಂಡಿಕಾ ಹೋಮವನ್ನೂ ಸಹ ಅವರು ಮಾಡಿಸಲಿದ್ದಾರೆ ಎಂದು ತಿಳಿದುಬಂದಿದೆ.
Also read: ಭಾರೀ ಮಳೆ | ನೀರಿನ ಹರಿವು ಹೆಚ್ಚಳ | ಹೇಮಾವತಿ ನದಿಪಾತ್ರದ ಜನರು ಮುಂಜಾಗ್ರತೆ ವಹಿಸಲು ಸೂಚನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















