Read - < 1 minute
ಉಡುಪಿ, ಸೆ.28: ಬ್ರಹ್ಮಾವರ: ಇಲ್ಲಿನ ಉಪ್ಪೂರು ಗ್ರಾಮದ ಕೆ.ಜಿ. ರೋಡ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯಿಂದ ಯುವತಿಯೊಬ್ಬಳು ನದಿಗೆ ಹಾರಿದ ಘಟನೆ ಬುಧವಾರ ಸಂಜೆ ನಡೆದಿದೆ. ಯುವತಿಯನ್ನು ಸಂತೆಕಟ್ಟೆಯ ನಿವಾಸಿ ಚಂದ್ರಶೇಖರ್ ಎಂಬವರ ಮಗಳು ಚೈತ್ರಾ (18) ಎಂದು ಗುರುತಿಸಲಾಗಿದೆ.
ಈಕೆ ಸಂಜೆ 6 ಗಂಟೆಗೆ ಮೊಬೈಲ್ ನಲ್ಲಿ ಸೇತುವೆ ಮೇಲೆ ಯಾರೊಂದಿಗೋ ಮಾತನಾಡುತ್ತಾ ಅಳುತ್ತಿದ್ದುದನ್ನು ನೋಡಿದವರಿದ್ದಾರೆ. ಅದಾಗಿ ಕೆಲವೇ ಕ್ಷಣದಲ್ಲಿ ಜನರು ನೋಡುತ್ತಿದಂತೆ ಮೊಬೈಲ್ ನಂದಿಗೆ ಸೇತುವೆ ಮೇಲಿನಿಂದ ನದಿಗೆ ಹಾರಿದ್ದಾಳೆ. ನದಿಯಲ್ಲಿ ನೀರು ತುಂಬಿದ್ದರಿಂದ ಆಕೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ, ಅಲ್ಲದೇ ಆಕೆ ಏನಾಗಿದ್ದಾಳೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ.
ತಕ್ಷಣ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಬಂದು ಹುಡುಕಾಡಿದರೂ ಕತ್ತಲೆಯಾದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ.
ಚೈತ್ರೆ ಉಡುಪಿಯ ಅಂಬಲಪಾಡಿಯ ನೆಟ್ ಜಿ ಎಂಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಎಂದಿನಂತೆ ಸಂಜೆ ಕೆಲಸ ಮುಗಿಸಿ ಸಂತೆಕಟ್ಟೆಗೆ ಬಸ್‌ನಲ್ಲಿ ಬಂದು ಇಳಿದು, ಮನೆಗೆ ತೆರಳುವ ದಾರಿಯಲ್ಲಿ ಈ ಕೃತ್ಯ ಎಸಗಿದ್ದಾಳೆ. ತಾನು ಧರಿಸಿದ್ದ ಚಪ್ಪಲಿ ಮತ್ತು ಬ್ಯಾಗನ್ನು ಸೇತುವೆಯ ಮೇಲೆ ಬಿಟ್ಟಿದ್ದಾಳೆ. ಬ್ಯಾಂಗಿನಲ್ಲಿದ್ದ ದಾಖಲೆಗಳಿಂದ ಅವಳ ಹೆಸರು ಗುರುತು ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಸ್ಥಳಕ್ಕೆ ಧಾವಿಸಿದ್ದು, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Discussion about this post