ಕಲ್ಪ ಮೀಡಿಯಾ ಹೌಸ್ | ಉಡುಪಿ |
ಭಗವಗ್ದೀತೆಯಲ್ಲಿ ಶ್ರೀಕೃಷ್ಣ #Shri Krishna in Bhagawathgeetha ಹೇಳಿದಂತೆ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ #PM Narendra Modi ಕುರಿತಾಗಿ ವ್ಯಾಖ್ಯಾನ ಬರೆದ ಪುತ್ತಿಗೆ ಪರ್ಯಾಯ ಶ್ರೀಗಳು, #Puttige Shri `ಮೋದಿ ರಕ್ಷತಿ ರಕ್ಷಿತ: ಎಂದಿದ್ದಾರೆ.
ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಪ್ರಧಾನಿಯವರನ್ನು ಹಾಡಿ ಹೊಗಳಿದ ಪುತ್ತಿಗೆ ಶ್ರೀಗಳು, ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆಯೇ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯರನ್ನು ಪಡೆದ ದೇಶ ಧನ್ಯ ಎಂದರು.
ನರೇಂದ್ರ ಎಂದರೆ ಸಾಕ್ಷಾತ್ ಅರ್ಜುನ. ಇಂತಹ ವಿಶ್ವ ನಾಯಕ ಇಂದು ಉಡುಪಿಗೆ ಆಗಮಿಸಿರುವುದು ಸಂತೋಷದ ಸಂಗತಿ. ಮೋದಿಯವರ ರಕ್ಷಣೆಯಾದರೆ ಧರ್ಮ ರಕ್ಷಣೆಯಾಗುತ್ತದೆ. ಇಂತಹ ಮೋದಿಯವರಿಗೆ ಶ್ರೀಕೃಷ್ಣ ಆಯಸ್ಸು, ಆರೋಗ್ಯ, ರಕ್ಷಣೆ ಕೊಟ್ಟು ಕಾಪಾಡಲಿ ಎಂದು ಆರ್ಶೀವದಿಸಿದರು. ಪುತ್ತಿಗೆ ಮಠ ಇಂದ್ರ ಪರಂಪರೆಯನ್ನು ಆಚರಿಸುವ ಮಠವಾಗಿದೆ. ಇಂತಹ ಪುತ್ತಿಗೆ ಮಠದ ಪರ್ಯಾಯದ ಸಂದರ್ಭದಲ್ಲಿ ಪ್ರಧಾನಿಯವರು ಆಗಮಿಸಿದ್ದಾರೆ ಎಂದರು.
ಒಂದು ವಾರದ ಹಿಂದೆ ಅಯೋಧ್ಯೆಯಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಿ, ಅದರ ಕಾರ್ಯ ಪೂರ್ಣವನ್ನು ಇಂದು ಕೃಷ್ಣಾರ್ಪಣೆ ಮಾಡಲು ಉಡುಪಿಗೆ ನರೇಂದ್ರ ಮೋದಿಯವರು ಆಗಮಿಸಿರುವುದು ಸಂತೋಷದ ಸಂಗತಿ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















