ಕಲ್ಪ ಮೀಡಿಯಾ ಹೌಸ್ | ಉಡುಪಿ |
ತಾಯಿಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿರುವ ಘಟನೆ ಕಿನ್ನಿಮುಲ್ಕಿಯಲ್ಲಿ ನಡೆದಿದೆ.
ಮೃತ ಮಗುವನ್ನು ಕೀರ್ತನ ಎಂದು ಗುರುತಿಸಲಾಗಿದೆ.
ತಾಯಿ ಬಾವಿಯಲ್ಲಿ ನೀರು ಸೇದುತ್ತಿದ್ದ ವೇಳೆ ಆಕೆಯ ಕೈಯಲ್ಲಿದ್ದ ಮಗು ಆಕಸ್ಮಿಕವಾಗಿ ಬಾವಿಯೊಳಗೆ ಜಾರಿ ಬಿದ್ದಿದೆ. ಆಕಸ್ಮಿಕವಾಗಿ ಮಗು ಬಾವಿಗೆ ಬಿದ್ದರೂ ಕೂಸಿನ ರಕ್ಷಣೆಗಾಗಿ ತಾಯಿಯೇ ತಕ್ಷಣ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾಳೆ. ಆದರೆ, ಆ ವೇಳೆಗಾಗಲೇ ಮಗು ನೀರಿನಲ್ಲಿ ಮುಳುಗಿ ಉಸಿರು ಚೆಲ್ಲಿತ್ತು.
ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















