ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮದ ಭಾಗವಾಗಿ, ನಗದಾದ್ಯಂತ ತಿಂಡಿ, ತಿನಿಸುಗಳ ವ್ಯಾಪಾರವನ್ನು ರದ್ದುಗೊಳಿಸಲಾಗಿದೆ.
ಈ ಕುರಿತಂತೆ ಸೂಚನೆ ನೀಡಿರುವ ನಗರಸಭೆ ಆಯುಕ್ತರು, ಮಾರ್ಚ್ 25ರವರೆಗೆ ನಗರದಲ್ಲಿ ಪಾನಿಪುರಿ, ಗೋಬಿಮಂಚೂರಿ, ಚಿಕನ್ ಕಬಾಬ್, ಮಟನ್ ಕಬಾಬ್, ಕರಿದ ಮೀನು, ತಿಂಡಿತಿನಿಸುಗಳು, ಐಸ್ ಕ್ರೀಮ್ ಸೇರಿದಂತೆ ಯಾವುದೇ ರೀತಿಯ ಆಹಾರ ತಿನಿಸುಗಳನ್ನು ವ್ಯಾಪಾರ ಮಾಡಬಾರದು ಎಂದು ಆದೇಶಿಸಿದ್ದಾರೆ.
ಒಂದೊಮ್ಮೆ ಸಿಬ್ಬಂದಿಯವರು ಅನಿರೀಕ್ಷಿತವಾಗಿ ಭೇಟಿ ನೀಡಿದ ವೇಳೆ ಈ ರೀತಿ ತಿನಿಸುಗಳ ವ್ಯಾಪಾರ ಮಾಡುವುದು ಕಂಡು ಬಂದಲ್ಲಿ ಪುರಸಭಾ ಕಾಯ್ದೆಯ ಅನ್ವಯ ದಂಡ ವಿಧಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು. ಗ್ರಾಹಕರು ಮತ್ತು ವ್ಯಾಪಾರಸ್ಥರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post