ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ದಾಖಲಾಗಿರುವ ಅಪರಾಧದ ವಿವರಗಳನ್ನು ಸಂಬಂಧಪಟ್ಟ ವೆಬ್’ಸೈಟ್’ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಈ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿರುವ ನ್ಯಾಯಾಲಯ, ತಮ್ಮ ಪಕ್ಷಕ್ಕೆ ಸೇರಿರುವ ಅಭ್ಯರ್ಥಿಗಳ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳನ್ನು ಆಯಾ ಪಕ್ಷದ ವೆಬ್’ಸೈಟ್’ನಲ್ಲಿ ಪ್ರಕಟಿಸತಕ್ಕದ್ದು ಎಂದು ಸೂಚಿಸಿದೆ.
ಇದೇ ವಿಚಾರದ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ 2018ರಲ್ಲಿಯೇ ಅಪೆಕ್ಸ್ ಕೋರ್ಟ್ ಆದೇಶ ನೀಡಿತ್ತು. ಆದರೆ, ಯಾವ ರಾಜಕೀಯ ಪಕ್ಷಗಳೂ ಸಹ ಇದನ್ನು ಪಾಲಿಸಿಲ್ಲ ಎಂಬ ಮೇಲ್ಮನವಿ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಇಂದು ಈ ತೀರ್ಪು ನೀಡಿದೆ.
ರಾಜಕೀಯ ಪಕ್ಷಗಳು ತಮ್ಮ ವೆಬ್’ಸೈಟ್’ನಲ್ಲಿ ಈ ವಿವರಗಳನ್ನು ದಾಖಲಿಸುವ ಜೊತೆಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲೂ ಸಹ ಪ್ರಕಟಿಸಬೇಕು ಎಂದು ಸೂಚಿಸಿದೆ.
Get in Touch With Us info@kalpa.news Whatsapp: 9481252093







Discussion about this post