ಬಂಡೀಪುರ: ಈಗಾಗಲೇ ಸುಮಾರು 10 ಸಾವಿರ ಎಕರೆ ಅರಣ್ಯವನ್ನು ಆಹುತೆ ತೆಗೆದುಕೊಂಡು ಇನ್ನು, ಸುಮಾರು 40 ಎಕರೆ ಅರಣ್ಯವನ್ನು ಸ್ವಾಹಾ ಮಾಡುವ ಆತಂಕವೊಡ್ಡಿರುವ ಬಂಡೀಪುರ ಕಾಡ್ಗಿಚ್ಚನ್ನು ನಂದಿಸಲು ಹೆಲಿಕಾಪ್ಟರ್ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹುಲಿ ಸಂರಕ್ಷಿತಾರಣ್ಯ ಬಂಡೀಪುರದಲ್ಲಿ ಅಗ್ನಿಯ ರುದ್ರನರ್ತನಕ್ಕೆ ಸಾವಿರಾರು ಎಕರೆ ಅರಣ್ಯ ಈಗಾಗಲೇ ಆಹುತಿಯಾಗಿದೆ. ಇದು, ತಮಿಳುನಾಡಿನ ಮುದುಮಲೈ ಅರಣ್ಯಕ್ಕೂ ಬೆಂಕಿ ಪರರಿಸಿರುವುದರಿಂದ ಸುಮಾರು 40 ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಮಾಡಲು ಸರ್ಕಾರ ಸೂಚನೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅಗ್ನಿ ಕೆನ್ನಾಲಿಗೆಯನ್ನು ಹಾರಿಸಲು ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನದಲ್ಲಿ ತೊಡಗಿದ್ದು ಇದಕ್ಕಾಗಿ 10 ಅಗ್ನಿಶಾಮಕ ವಾಹನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಬೆಂಕಿ ನಂದಿಸುವ ಪ್ರಯತ್ನ ನಿರೀಕ್ಷಿತ ಫಲಕೊಟ್ಟಿಲ್ಲ.
ಈ ಹಿನ್ನೆಲೆಯಲ್ಲಿ ಈಗ ಪಕ್ಕದ ನುಗು ಮತ್ತು ತಾರಕ ಜಲಾಶಗಳಿಂದ ಹೆಲಿಕಾಪ್ಟರ್ ಗಳ ಮೂಲಕ ನೀರು ತಂದು ಬೆಂಕಿಯನ್ನು ನಂದಿಸುವ ಕೆಲಸ ಮಾಡಲು ತೀರ್ಮಾನ ಮಾಡಲಾಗಿದ್ದು, ಇದಕ್ಕಾಗಿ ಸೇನೆ ಹೆಲಿಕಾಪ್ಟರ್ ಬಳಕೆ ಮಾಡಿ ಬೆಂಕಿಯನ್ನು ನಿಯಂತ್ರಣ ಮಾಡುವ ಮಾಡುವ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಅಮೆರಿಕಾದ ನಾಸಾ ಬಾಹ್ಯಾಕಾಶ ಸಂಸ್ಥೆ ಬಂಡಿಪುರ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸೇರಿದಂತೆ 80 ಕಡೆ ಬೆಂಕಿ ಅನಾಹುತ ಸಂಭವಿಸಲಿದೆ ಎಂಬ ಮೂನ್ಸೂಚನೆ ನೀಡಿತ್ತು.
Discussion about this post