ಕಲ್ಪ ಮೀಡಿಯಾ ಹೌಸ್ | ಲಕ್ನೋ |
ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ಅಲ್ಲಿನ ಮುಸ್ಲೀಮರೇ ಜೆಸಿಬಿ ಬಳಸಿ ಕೆಡವಿರುವ ಘಟನೆ ನಡೆದಿದೆ.
ಸಂಭಾಲ್ ಜಿಲ್ಲೆಯ ಅಸ್ಮೋಲಿ ಬಳಿಯ ರಾಯ ಬುಜುರ್ಗ್ ಗ್ರಾಮದಲ್ಲಿ ಮುಸ್ಲೀಮರೇ ನಿನ್ನೆ ಭಾನುವಾರ ಗೌಸುಲ್ಬರಾ ಮಸೀದಿಯನ್ನು ಕೆಡವಿ ಹಾಕಿದ್ದಾರೆ.
ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಮಸೀದಿಯನ್ನು ಗುರುತಿಸಿದ್ದ ಜಿಲ್ಲಾಡಳಿತ ಅದನ್ನು ತೆರವುಗೊಳಿಸುವಂತೆ 4 ದಿನಗಳ ಗಡುವನ್ನು ನೀಡಿತ್ತು. ಈ ಗಡುವ ಮುಗಿಯುತ್ತಿದ್ದಂತೆಯೇ ಮುಸ್ಲೀಮರೇ ಜೆಸಿಬಿ ಬಳಸಿ ಮಸೀದಿಯನ್ನು ಕೆಡವಿದ್ದಾರೆ.

ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post