No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ಘನತತ್ವದ ಅನುಸಂಧಾನದಿಂದ ಜೀವನ ಪಾವನ: ರಾಘವೇಶ್ವರ ಶ್ರೀ

ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ

kalpa News by kalpa News
September 11, 2024
in ಉತ್ತರ ಕನ್ನಡ
0
ಘನತತ್ವದ ಅನುಸಂಧಾನದಿಂದ ಜೀವನ ಪಾವನ: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp
ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಘನತತ್ವವೊಂದರ ಅನುಸಂಧಾನದಲ್ಲಿ ತೊಡಗಿ ಇಡೀ ಜೀವನವನ್ನು ಅದಕ್ಕೆ ಮುಡಿಪಾಗಿ ಇಡುವುದು ಕೂಡಾ ಒಂದು ಬಗೆಯ ತಪಸ್ಸು. ಇದಕ್ಕೆ ಅದ್ಭುತ ಫಲವಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು, 52ನೇ ದಿನವಾದ ಮಂಗಳವಾರ ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು.
ವಿವಿಯಿಂದ ಕೊಡಮಾಡುವ ವಿಶಿಷ್ಟ ಸನ್ಮಾನ ಇಂದು ಪಾರ್ಥಸಾರಥಿಯವರಿಗೆ ಸಂದಿದೆ. ಒಂದು ಘನತತ್ವಕ್ಕೆ ಮನಸ್ಸು ನೀಡಿದ ಅಪರೂದ ವ್ಯಕ್ತಿತ್ವ ಅರಳುಮಲ್ಲಿಗೆಯವರದ್ದು. ಘನತತ್ವದ ಅನುಸಂಧಾನದಲ್ಲಿ ಎಲ್ಲವನ್ನೂ ಮರೆಯಬೇಕು ಎನ್ನುವುದು ಹನುಮಮತನ ಉಪದೇಶ. ಹಾಗೆ ವಿಷ್ಣುಸಹಸ್ರನಾಮದ ಅನುಸಂಧಾನದಲ್ಲಿ ತನ್ನನ್ನೇ ಮರೆತ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.

ಲಕ್ಷಾಂತರ ಮಂದಿ ವಿಷ್ಣುಸಹಸ್ರನಾಮ ಪಠಣಕ್ಕೆ ಅವರು ಪ್ರೇರಣೆಯಾಗಿದ್ದಾರೆ. ದೇಶ- ವಿದೇಶಗಳಲ್ಲಿ ಇದು ಪಸರಿಸಿದೆ. ಈ ಮೂಲಕ ಭಕ್ತರನ್ನು ಭಗವಂತನ ಜತೆ ಜೋಡಿಸಿದ ಪುಣ್ಯ ಅವರದ್ದು. ಗೋವರ್ಧನಗಿರಿಧಾರಿಯ ಕ್ಷೇತ್ರವನ್ನು ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಪರಿವರ್ತಿಸುವಲ್ಲಿ ಅವರ ಕೊಡುಗೆ ಅಪಾರ. ಇಂಥವರಿಗೆ ಪ್ರಶಸ್ತಿ ನೀಡುವ ಮೂಲಕ ಸಂಸ್ಥೆಗೆ ವಿಶೇಷ ಗೌರವ ಸಂದಿದೆ ಎಂದರು.

ಇಂದಿನ ಅನಾವರಣದ ಬಗ್ಗೆ ಉಲ್ಲೇಖಿಸಿ, ಕೃಷ್ಣಭಕ್ತಿಯ ಸಂಚಾರವಾಗಿ ನಮ್ಮ ಪೂರ್ವಾಚಾರ್ಯರು ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಪ್ರತಿಷ್ಠಾಪನೆ ಮಾಡಿದ್ದು, ನಿರ್ಮಿಸಿದ ಅಪೂರ್ವ ದೇವಾಲಯದ ಅನಾವರಣ ಇಂದು ನಡೆದಿದೆ. ಮಠದ ಎದುರಿನ ಗುಡ್ಡದ ಮೇಲೆ ಗೋವುಗಳ ಮಧ್ಯೆ ಇದನ್ನು ವೈಭವೋಪೇತವಾಗಿ ನಿರ್ಮಿಸಲಾಯಿತು. ನೂರೆಂಟು ಸೋಪಾನಮಾಲಿಕೆ. ವಿಷ್ಣು ಸಹಸ್ರನಾಮದ 108 ಶ್ಲೋಕಗಳನ್ನು ಹೇಳುತ್ತಾ ಈ ಮೆಟ್ಟಲುಗಳನ್ನು ಏರಿದಾಗ ಕೃಷ್ಣನ ದರ್ಶನವಾಗುತ್ತದೆ. ಅದು ಪಂಚ ಪರಿಕ್ರಮ ಕ್ಷೇತ್ರವಾಗಿ ಪರಿವರ್ತನೆಯಾಗುತ್ತಿದೆ ಎಂದು ವಿವರಿಸಿದರು.
ಸೃಷ್ಟಿಯಲ್ಲಿ ನಾರಾಯಣನಿಲ್ಲದ ಸ್ಥಳವಿಲ್ಲ. ಅವನು ಸರ್ವತ್ರ ವ್ಯಾಪ್ತಿಯುಳ್ಳವನು. ಕೆಲವೊಮ್ಮೆ ಆತನ ಅಭಿವ್ಯಕ್ತಿ ವಿಶೇಷವಾಗಿ ಆಗುತ್ತದೆ. ಅಂಥ ವಿಶೇಷ ಅಭಿವ್ಯಕ್ತಿ ಇಂದು ಆಗಿದೆ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರಳುಮಲ್ಲಿಗೆ ಪಾರ್ಥಸಾರಥಿಯವರು ಮಾತನಾಡಿ, “ಏಳೆಂಟು ವರ್ಷಗಳಿಂದ ಕಲ್ಲುಮುಳ್ಳುಗಳಿಂದ ಕೂಡಿದ್ದ ನೆಲದಲ್ಲಿ ಇಡೀ ಜಗತ್ತೇ ಬೆರಗಿನಿಂದ ನೋಡುವಂತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಕಟ್ಟಿ ಬೆಳೆಸಿರುವುದು ನಾವೆಲ್ಲರೂ ಸಾಕ್ಷಿಗಳಾಗಿರುವ ಪವಾಡ. ನೈಮಿಷಾರಣ್ಯದ ಮರುಸೃಷ್ಟಿ ಅಶೋಕೆಯಲ್ಲಿ ಆಗಿದೆ. ಶಂಕರರು ಮೂರು ಬಾರಿ ಇಲ್ಲಿ ಓಡಾಡಿದ ಪರಮ ಪವಿತ್ರ ಸ್ಥಳ ಇದು. ಪ್ರಾಚೀನ ಕಾಲದಿಂದ ಇದ್ದ ಮಲ್ಲಿಕಾರ್ಜುನ ಇಲ್ಲಿಗೆ ಸಾಧು ಸಂತರು, ಸಾಧಕರನ್ನು ಅನುಗ್ರಹಿಸುತ್ತಿದ್ದ. ಇಂದು ಇಡೀ ಜಗತ್ತು ಅಚ್ಚರಿಪಡುತ್ತಿದೆ. ಜ್ಞಾನ, ಚಿಂತನೆ, ವಿದ್ಯಾ ಬುದ್ಧಿ ದಾನದ ಕೇಂದ್ರವಾಗಿ ರೂಪುಗೊಂಡಿದೆ” ಎಂದು ಬಣ್ಣಿಸಿದರು.

Also read: ಸಕಾರಾತ್ಮಕ ಮನೋಭಾವ, ಚಿಂತನೆಗಳನ್ನು ಅನುಸರಿಸಿ ಜೀವಿಸಿ: ಕ್ಯಾಥರೀನ್ ಜೆನ್ನಿಫರ್ ಸಲಹೆ

ಬೇಲೂರು, ಹಳೆಬೀಡನ್ನು ಮೀರಿಸುವಂಥ ಚಂದ್ರಮೌಳೀಶ್ವರ ದೇಗುಲವನ್ನು ಹೊಸನಗರ ರಾಮಚಂದ್ರಾಪುರ ಮಠದ ಆವರಣದಲ್ಲಿ ನಿರ್ಮಿಸಿದ್ದಾರೆ. ದೇಶದ ಎಲ್ಲ ತಳಿಯ ಗೋವುಗಳನ್ನು ಸಂರಕ್ಷಿಸುವ ಅಪೂರ್ವ ಕಾಮಧೇನು ಆಲಯ, ಅದರ ನಡುವೆ ಗೋವರ್ಧನಗಿರಿಧಾರಿ ಕ್ಷೇತ್ರವಿದೆ. ಇದನ್ನು ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಪರಿವರ್ತಿಸಲು ಕೇಳಿಕೊಂಡೆ. 100 ಬಿಲಿಯನ್ ಡಾಲರ್ ಕೊಟ್ಟರೂ ಇಂಥ ಪರಿಸರ ನಿರ್ಮಿಸಲು ಸಾಧ್ಯವಿಲ್ಲ; ಇಂಥ ದೈವೀಶಕ್ತಿಯ ಕ್ಷೇತ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

https://kalpa.news/wp-content/uploads/2024/04/VID-20240426-WA0008.mp4

ವಿಷ್ಣು ಸಹಸ್ರನಾಮ ಬಿಟ್ಟರೆ ಕಲಿಯುಗದಲ್ಲಿ ಜನಸಾಮಾನ್ಯರಿಗೆ ಆತ್ಮೋದ್ಧಾರಕ್ಕೆ ಅನ್ಯಮಾರ್ಗಗಳಿಲ್ಲ. ಅಂಥ ಪವಿತ್ರಕ್ಷೇತ್ರವನ್ನು ಅಭಿವೃದ್ಧಿಪಡಿಸಿ, ಲಕ್ಷಾಂತರ ಮಂದಿಯ ಉದ್ಧಾರಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು. ತೀರ್ಥಕ್ಷೇತ್ರಗಳಲ್ಲಿ, ನದಿತೀರದಲ್ಲಿ, ದೈವೀಸನ್ನಿಧಿಯಲ್ಲಿ ಪಠಿಸಿದರೆ ಅಪಾರ ಪುಣ್ಯ ಸಂಪಾದನೆಯಾಗುತ್ತದೆ ಎಂದರು.

ಧರ್ಮದೇವತೆ ಸಾಕ್ಷಾತ್ ಅವತಾರವೆತ್ತಿದಂತೆ ರಾಘವೇಶ್ವರರು ಸಮಾಜದ ಉದ್ಧಾರಕ್ಕೆ ಪಣ ತೊಟ್ಟಿದ್ದಾರೆ. ಸಮಸ್ತ ಸಮಾಜ ಇದರ ಪ್ರಯೋಜನ ಪಡೆಯಬೇಕು ಎಂದು ಸೂಚಿಸಿದರು. ಪ್ರಪಂಚದ ವಿಶ್ವದ ಎಲ್ಲ ಮೇಧಾವಿಗಳು ಇಲ್ಲಿಗೆ ಬಂದು ಜ್ಞಾನಪಡೆಯುವ ಕೇಂದ್ರವಾಗಿ ವಿವಿವಿ ಸದ್ಯದಲ್ಲೇ ರೂಪುಗೊಳ್ಳಲಿದೆ. ವಿದ್ಯಾರಣ್ಯರ ಅತಿಮಾನುಷ ಶಕ್ತಿಯಿಂದ ವಿಜಯ ನಗರ ಸಾಮ್ರಾಜ್ಯ ರೂಪುಗೊಂಡಂತೆ, ರಾಘವೇಶ್ವರರ ಕರ್ತೃತ್ವ ಶಕ್ತಿಯಿಂದ ಧರ್ಮಸಾಮ್ರಾಜ್ಯ ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಲ ಸರಣಿಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಜ್ಯೋತಿಷ್ಯದಲ್ಲಿ ತಾಂಬೂಲದ ಮಹತ್ವವನ್ನು ಮತ್ತು ತಾಂಬೂಲದ ಔಷಧೀಯ ಗುಣಗಳನ್ನು ವಿವರಿಸಿದರು. ನೇತ್ರರೋಗಿಗಳು, ರಕ್ತಪಿತ್ತ ಇರುವವರು, ಮೂರ್ಛೆ ರೋಗ ಇರುವವರು, ಶ್ವಾಸಕೋಶ ಸಮಸ್ಯೆ ಇರುವವರು ತಾಂಬೂಲ ಸೇವಿಸಬಾರದು. ತಾಂಬೂಲದ ಜತೆಗೆ ತಂಬಾಕು ಸೇವನೆಯಿಂದ ತಾಂಬೂಲಕ್ಕೂ ಕಳಂಕ ಬಂದಿದೆ. ಶಾಸ್ತ್ರವಿಧಿಸಿದ ಕ್ರಮದಂತೆ ತಾಂಬೂಲ ಸೇವಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ವಿಷ್ಣುಸಹಸ್ರನಾಮ ಗ್ಲೋಬಲ್ ಫೌಂಡೇಷನ್‍ನ ಮುಖ್ಯಸ್ಥರಾದ ಮಂಗಳಾ ಭಾಸ್ಕರ್, ವಿವಿವಿ ಗೌರವಾಧ್ಯಕ್ಷ ಡಾ.ಡಿ.ಡಿ.ಶರ್ಮಾ, ವಿವಿವಿ ಕೇಂದ್ರೀಯ ಸಮಿತಿ ಗೌರವಾಧ್ಯಕ್ಷ ಡಾ.ಆರ್.ಎಸ್.ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್.ಹೆಗಡೆ, ಉದ್ಯಮಿ ಜಿ.ಎಂ.ಹೆಗಡೆ,  ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುರ್ವಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು, ದೈವಜ್ಞರಾದ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaUttara Kannadaಗೋಕರ್ಣ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವೀರಪ್ಪನ್ ಮೋಸಕ್ಕೆ ಬಲಿಯಾದ ದಾರ್ಶನಿಕ ಡಿಸಿಎಫ್ ಶ್ರೀನಿವಾಸ್ ಅವರಿಗೊಂದು ಸೆಲ್ಯೂಟ್

Next Post

ಕಟ್ಟಡದಿಂದ ಜಿಗಿದ ನಟಿ ಮಲೈಕಾ ಅರೋರಾ ತಂದೆ | ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ

kalpa News

kalpa News

Next Post
ಕಟ್ಟಡದಿಂದ ಜಿಗಿದ ನಟಿ ಮಲೈಕಾ ಅರೋರಾ ತಂದೆ | ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ

ಕಟ್ಟಡದಿಂದ ಜಿಗಿದ ನಟಿ ಮಲೈಕಾ ಅರೋರಾ ತಂದೆ | ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ

Leave a Reply Cancel reply

Your email address will not be published. Required fields are marked *

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL