ಕಲ್ಪ ಮೀಡಿಯಾ ಹೌಸ್ | ಮುಂಬೈ |
ಖ್ಯಾತ ಮಾಡೆಲ್, ಬಾಲಿವುಡ್ ನಟಿ ಮಲೈಕಾ ಅರೋರಾ #Malaika Arora ಅವರ ತಂದೆ ಅನಿಲ್ ಅರೋರಾ #Anil Arora ಅವರು ಇಂದು ತಮ್ಮ ನಿವಾಸದ ಟೆರೇಸ್’ನಿಂದ ಕೆಳಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಮುಂಜಾನೆ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಜಿಗಿದ ರಭಸಕ್ಕೆ ಸ್ಥಳದಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ.
Also read: ಘನತತ್ವದ ಅನುಸಂಧಾನದಿಂದ ಜೀವನ ಪಾವನ: ರಾಘವೇಶ್ವರ ಶ್ರೀ

ತಮ್ಮ ತಂದೆಯ ಆತ್ಮಹತ್ಯೆ ಬಗ್ಗೆ ವಿಷಯ ತಿಳಿದ ಪುಣೆಯಲ್ಲಿದ್ದ ಮಲೈಕಾ ಮುಂಬೈಗೆ ಧಾವಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ, ಮಲೈಕಾ ಅವರ ಮಾಜಿ ಪತಿ, ನಟ ಮತ್ತು ಚಲನಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ ಅವರು ದುಃಖದಲ್ಲಿರುವ ಕುಟುಂಬವನ್ನು ಬೆಂಬಲಿಸಲು ಕುಟುಂಬದ ನಿವಾಸಕ್ಕೆ ಆಗಮಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post