ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #CM Yogi Adithyanath ಅವರ ನಿವಾಸದ ಹೊರಭಾಗದಲ್ಲಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಅಂಜಲಿ ಜಾತ್ ಎಂದು ಗುರುತಿಸಲಾಗಿದ್ದು, ಆಕೆ ಕೌಟುಂಬಿಕ ಕಲಹದಿಂದಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿbದೆ.
ಆದಿತ್ಯನಾಥ್ ಅವರ ಜನತಾ ದಬಾರ್’ಗೆ ತಮ್ಮ ಸಮಸ್ಯೆ ಹೇಳಲು ಬಂದಿದ್ದರು. ಅಲ್ಲಿ ಯಾವುದೇ ಪರಿಹಾರ ಕಂಡುಬAದಿಲ್ಲ. ಇದರಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಜನತಾ ದರ್ಬಾರ್’ನಿಂದ ಹೊರಬಂದ ಕೂಡಲೇ ಮಹಿಳೆಯು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ಕಂಬಳಿ ಬಳಸಿ ಬೆಂಕಿ ಆರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post