ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
750 ಜೀವಂತ ಗುಂಡುಗಳನ್ನು ಸಾಗಿಸುತ್ತಿದ್ದ ಯುವತಿಯೋರ್ವಳನ್ನು ಉತ್ತರ ಪ್ರದೇಶದ ಬಲಿಯಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಬಿಹಾರದ ಛಾಪ್ರಾಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ರೈಲಿನ ಸೀಟಿನಲ್ಲಿ ಕುಳಿತಿದ್ದಳು ಮತ್ತು ತನ್ನ ಸೀಟಿನ ಕೆಳಗೆ ಟ್ರಾಲಿ ಚೀಲವನ್ನು ಇಟ್ಟುಕೊಂಡಿದ್ದಳು. ಆ ಟ್ರಾಲಿ ಚೀಲದ ಬಗ್ಗೆ ಪ್ರಶ್ನಿಸಿದಾಗ ಆಕೆ ಗೊಂದಲದ ಉತ್ತರ ನೀಡಿದಳು. ಚೀಲವನ್ನು ಶೋಧಿಸಿದಾಗ ಅದರಲ್ಲಿ 750 ಜೀವಂತ ಕಾರ್ಟ್ರಿಜ್‌ಗಳು ಕಂಡುಬಂದಿವೆ ಎಂದು ಡಿಎಸ್ಪಿ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿತ ಯುವತಿಯು ತಾನು ಗುಂಡುಗಳನ್ನು ಛಾಪ್ರಾಕ್ಕೆ ಕೊಂಡೊಯ್ಯುತ್ತಿದ್ದೆ ಮತ್ತು ಅಲ್ಲಿ ಯಾರಿಗಾದರೂ ಹಸ್ತಾಂತರಿಸಬೇಕಾಗಿತ್ತು ಎಂದು ಬಹಿರಂಗಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Also read: ಕರುನಾಡಿನ ಸಂಸ್ಕೃತಿ ಸಾರುವ ಪ್ರೀ ವೆಡ್ಡಿಂಗ್ ಶೂಟ್ | ಮಾದರಿಯಾದ ಯುವಜೋಡಿ
ಈ ಚೀಲವನ್ನು ಘಾಜಿಪುರ ಜಿಲ್ಲೆಯ ಕರಿಮೂದ್ದೀನ್ಪುರ ಪೊಲೀಸ್ ಠಾಣೆಯ ನಿವಾಸಿ ಅಂಕಿತ್ ಪಾಂಡೆ ತನಗೆ ನೀಡಿದ್ದಾನೆ ಎಂದು ವಿಚಾರಣೆ ವೇಳೆ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಯುವತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಟ್ರಿಜ್ಗಳನ್ನು ನಕ್ಸಲೀಯರಿಗೆ ಮಾರಾಟ ಮಾಡಿರಬಹುದು ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಂಕಿತ್ ಪಾಂಡೆಗಾಗಿ ಹುಡುಕಾಟವೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನಾದಿಹಾರ್ ಗ್ರಾಮದ ನಿವಾಸಿ ಮನಿತಾ ಸಿಂಗ್ ಎಂದು ಗುರುತಿಸಲಾದ ಮಹಿಳೆಯನ್ನು ಬಲ್ಲಿಯಾದ ಜಿಆರ್ಪಿ ಉಸ್ತುವಾರಿ ಸುಭಾಷ್ ಚಂದ್ರ ಯಾದವ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post