ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
ಕಳೆದ ತಿಂಗಳು ರೈಲಿನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅನೀಸ್ ಖಾನ್ Anees Khan ಎಂಬ ಪ್ರಮುಖ ಆರೋಪಿಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ಎನ್ ಕೌಂಟರ್ ಮಾಡಿದೆ.
ಕಳೆದ ತಿಂಗಳು, ಅಯೋಧ್ಯೆಯ Ayodhya ಬಳಿ ಸರಯೂ ಎಕ್ಸ್;ಪ್ರೆಸ್’ನಲ್ಲಿ ಮಹಿಳಾ ಕಾನ್ಸ್‌ಸ್ಟೆಬಲ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಆಕೆಯ ತಲೆಯ ಮೇಲೆ ತೀವ್ರ ಗಾಯಗಳಾಗಿತ್ತು. ಆಕೆ ಇನ್ನೂ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ ಮೇಲೆ ಅನೀಸ್ ಖಾನ್ ಮಾರಣಾಂತಿಕ ಹಲ್ಲೆ ನಡೆಸಿದ್ದನು.
ದಾಳಿಯ ಪ್ರಮುಖ ಆರೋಪಿ ಅನೀಸ್ ಖಾನ್’ನನ್ನು ಪೊಲೀಸರು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಅನಿವಾರ್ಯವಾಗಿ ಪೊಲೀಸರು ಗನ್ ತೆಗೆಯಬೇಕಾಗಿ ಬಂದಿದೆ. ಈ ವೇಳೆ ಗುಂಡಿನ ದಾಳಿಗೆ ಅನೀಸ್ ಖಾನ್ ಸಾವನ್ನಪ್ಪಿದ್ದಾನೆ. ಈ ಸಂದರ್ಭದಲ್ಲಿ ಆತನ ಸಹಾಯಕರಾದ ಆಜಾದ್ ಮತ್ತು ವಿಷಂರ್ಭ ದಯಾಳ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Also read: ಅಂತರ ಶಾಲೆ ಗಣಪ ಚಿತ್ರಾ ಸ್ಪರ್ಧೆ ವಿಜೇತರಿಗೆ 24ರಂದು ಬಹುಮಾನ ವಿತರಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post