ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಇಲ್ಲಿನ ಜ್ಞಾನವ್ಯಾಪಿ ಮಸೀದಿಯಲ್ಲಿರುವ ದೇವರುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವ ಕುರಿತಾಗಿ ದೆಹಲಿಯ ಐವರು ಹಿಂದೂ ಮಹಿಳೆಯರಿಗೆ ಅತಿ ದೊಡ್ಡ ವಿಜಯ ಸಂದಿದೆ.
ಈ ಕುರಿತಂತೆ ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿರುವ ಹಿಂದೂ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ದೆಹಲಿ ಮೂಲದ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ, ಸರ್ವೇ ವರದಿ ಸೇರಿದಂತೆ ವಿವಿಧ ಸಾಕ್ಷಿಗಳ ಆಧಾರದಲ್ಲಿ ವಾರಣಾಸಿ ಜಿಲ್ಲಾ ಕೋರ್ಟ್ ನ್ಯಾಯಾಧೀಶರಾದ ಎ.ಕೆ. ವಿಶ್ವೇಶ್ ಇಂದು ತೀರ್ಪು ನೀಡಿದ್ದಾರೆ.

ಮಸೀದಿ ಆವರಣದಲ್ಲಿ ಶೃಂಗಾರ ಗೌರಿ, ಗಣೇಶ, ಆಂಜನೇಯ ಸೇರಿ ಐವರು ದೇವರ ಮೂರ್ತಿಯಿದೆ. ಇದಕ್ಕೆ ಪೂಜೆ ಸಲ್ಲಿಸುವುದು ನಮ್ಮ ಹಕ್ಕು. ಹೀಗಾಗಿ, ಪೂಜೆಗೆ ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ಕೋರಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರು ಹೇಳುವ ರೀತಿಯಲ್ಲಿ ದೇವರ ಮೂರ್ತಿಗಳು ಇವೆಯೇ ಎಂದು ಸರ್ವೆ ನಡೆಸಿ, ವೀಡಿಯೋ ಹಾಗೂ ಫೋಟೋ ಸಹಿತ ವರದಿ ನೀಡುವಂತೆ ಸೂಚಿಸಿತ್ತು. ಆದರೆ, ಆರಂಭದಲ್ಲಿ ಮಸೀದಿಯ ಕಮಿಟಿ ಇದನ್ನು ವಿರೋಧಿಸಿತ್ತು. ಆನಂತರ ಪೊಲೀಸ್ ಭದ್ರತೆಯಲ್ಲಿ ಮೇ 16ರಂದು ಸರ್ವೇ ನಡೆಸಲೇಬೇಕು ಎಂದು ಸೂಚಿಸಿತ್ತು. ಇದರಂತೆ ಸರ್ವೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಕಮಿಷನರ್ ನೇತೃತ್ವದ ತಂಡ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಇನ್ನು, ಇದು ಅತ್ಯಂತ ಸೂಕ್ಷö್ಮ ವಿಚಾರದ ತೀರ್ಪಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಕೊಠಡಿ ಆವರಣದಲ್ಲಿ ವಕೀಲರು, ಎರಡೂ ಕಡೆಯ ವಾದಿ ಪ್ರತಿವಾದಿಗಳು ಸೇರಿದಂತೆ ಕೇವಲ 62 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.
Also read: ಹಿಂದೂಗಳಿಗೆ ಅತಿದೊಡ್ಡ ವಿಜಯ: ಮಹಿಳೆಯರ ಅರ್ಜಿ ವಿಚಾರಣೆಗೆ ಅರ್ಹ, ಮುಸ್ಲಿಂ ಅರ್ಜಿದಾರರಿಗೆ ಹಿನ್ನಡೆ
ಹನುಮಾನ್ ಚಾಲೀಸಾ ಪಠಣ
ಇನ್ನು, ಜ್ಞಾನವ್ಯಾಪಿ ಮಸೀದಿ ಪ್ರಕರಣದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ವಾರಣಾಸಿಯಲ್ಲಿ ಹಿಂದೂ ಸಂಘಟನೆಗಳು ಹಾಗೂ ಕಾರ್ಯಕರ್ತರು ನಿರಂತರವಾಗಿ ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದರು.

ಕೋರ್ಟ್ ನೀಡಿರುವ ತೀರ್ಪನ್ನು ಹಿಂದೂ ಮಹಿಳೆಯರು ಪರ ವಕೀಲರು ನ್ಯಾಯಾಲಯದ ಹೊರಕ್ಕೆ ಬಂದು ತಿಳಿಸಿದಾಕ್ಷಣ ಸಂಭ್ರಮ ಮನೆ ಮಾಡಿತ್ತು. ಇಡಿಯ ವಾರಣಾಸಿಯ ಹಿಂದೂಗಳಲ್ಲಿ ವಿಜಯದ ಸಂಭ್ರಮಾಚರಣೆ ನಡೆಯುತ್ತಿದೆ.











Discussion about this post