ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಂಬಳದಿಂದಲೇ ತುಳುನಾಡಿನಲ್ಲಿ ಮನೆಮಾತಾಗಿರುವ ಯಾರೂ ಮರೆಯದ ಹೆಸರು ಕಾಂತಾವರ ಗುರುಪ್ರಸಾದ್ ಕೋಟ್ಯಾನ್.
ಪಿಯುಸಿ ವಿದ್ಯಾಭ್ಯಾಸ ಪೂರೈಸಿದ ನಂತರ ಐಟಿಐ ಮಾಡಿದ ನಂತರ ಮನೆಯಲ್ಲಿ ಕೃಷಿ ಕೆಲಸ ಕಾರ್ಯದ ಒಟ್ಟಿಗೆ ತಂದೆಯೊಂದಿಗೆ ವ್ಯವಹಾರಕ್ಕಾಗಿ ತನ್ನ ಸ್ವಂತ ಅಂಗಡಿಯಲ್ಲಿ ಇದ್ದು ಸಮಯದಲ್ಲಿ ಕಡಂದಲೆ ಮೂಡಾಯಿ ಬೆಟ್ಟು ಕಾಳು ಪಾಣಾರ ಕೋಣಗಳ ಒಟ್ಟಿಗೆ ನಡೆದುಕೊಂಡು ಬಾರಾಡಿ ಕಂಬಳ ಕುದಿಗೆ ಹೋಗಿ, ಮೊದಲಿಗೆ ಕಾಲು ಪಾಣಾರು ತನ್ನ ಕೋಣಗಳೊಂದಿಗೆ ಓಟ ಆರಂಭಿಸಲು ಅನುವು ಮಾಡಿ ಕೊಟ್ಟರು.
ಹೀಗೆ ಬಾರಾಡಿಯಲ್ಲಿ ಕಂಬಳ ಓಟವನ್ನು ಪ್ರಾರಂಭಿಸಿದಾಗ ಡಾ. ಜೀವಂದರ ಬಲ್ಲಾಳ್ ಉದ್ದ ಕೊಂಬಿನ ಕೋಣಗಳನ್ನು ಕುದಿಯಲ್ಲಿ ಓಡಲು ಕೊಟ್ಟು ಪ್ರೋತ್ಸಾಹಿಸಿದರು.ಸುಧೀರ್ ಅರಿಗರ ಕೊಳಕೆ ಅನಂದರು ಹಾಗೂ ಊರಿನ ಹಿರಿಯರು ಕಂಬಳ ಹಿತೈಷಿಗಳು ಕಂಬಳದಲ್ಲಿ ಓಡುವ ಕಲೆಯನ್ನು ಕಳಿಸಿಕೊಟ್ಟರು. ಇವರು ನಂದಿಕೂರು ಕಂಬಳದ ದಶಮಾನೋತ್ಸವದ ಕಂಬಳದಲ್ಲಿ ಮೊದಲ ಕಾಳು ಪಾಣಾರ ಕೋಣಗಳನ್ನು ಓಡಿಸುವ ಮೂಲಕ ಕಂಬಳ ಕ್ಷೇತ್ರಕ್ಕೆ ಪರಿಚಯವಾದರು.
ನಂತರ ಬಾರಾಡಿ ಬೀಡಿನ ಹಗ್ಗ ಹಿರಿಯ ಹಗ್ಗ ಕಿರಿಯ ಅನೇಕ ವರ್ಷಗಳವರೆಗೆ ಓಡಿಸುತ್ತಿದ್ದ ಸಮಯದಲ್ಲಿ ಡಾ. ಬಲ್ಲಾಳರು ತನ್ನ ಬಾರಾಡಿ ಕಂಬಳದಲ್ಲಿ ಸನ್ಮಾನ ಮಾಡಿ ಬಂಗಾರದ ಉಂಗುರ ಕೈಗೆ ತೊಡಿಸಿದರು. ಇವರಿಗೆ ಕೆರ್ವಸೆ ದೇವರ ಕಂಬಳದಲ್ಲಿ ಪ್ರಪ್ರಥಮವಾಗಿ ಕೆರ್ವಸೆ ಮನೋಲಿ ಬೆಟ್ಟು ಉದಯ ಪೂಜಾರಿಯವರ ಕೋಣದಲ್ಲಿ ಮೊದಲ ಬಹುಮಾನವನ್ನು ಪಡೆದಿದ್ದಾರೆ.
ಆಧುನಿಕ ವೇಣೂರು ಕಂಬಳದಲ್ಲಿ 2004ರ ಫೆಬ್ರವರಿ 15ರಂದು ಕಾಂತಾವರ ಭಾಂದೊಟ್ಟು ಅವರ ಕೋಣಗಳನ್ನು ಮಾರ್ನಾಡು ತ್ರಿಬಲ ಬೆಟ್ಟು ಚಂದ್ರಪ್ರಭು ಜೈನರ ಹೆಸರಿನಲ್ಲಿ ದ್ವಿತೀಯ ಬಹುಮಾನವಾಗಿ ಪಡೆದರು.ನಂತರ ಅನೇಕ ಪ್ರಸಿದ್ಧ ಕಂಬಳದಲ್ಲಿ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ಈ ಭಾಗದಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. 2008ರಲ್ಲಿ ನೇಗಿಲು ಸಬ್ ಜೂನಿಯರ್ ವಿಭಾಗದ 5 ಪ್ರಥಮ ಬಹುಮಾನ ಕಾಂತಾವರ ಕೆ.ಜೆ. ಶಂಕರ ದೇವಾಡಿಗರ ಕೋಣಗಳೊಂದಿಗೆ ಕಾಂತಾವರ ಭಾಂದೊಟ್ಟು ಅವರ ಕೋಣಗಳೊಂದಿಗೆ ಓಟವನ್ನು ಆರಂಭಿಸಿ ಅನೇಕ ವರ್ಷಗಳವರೆಗೆ ಶಿಸ್ತುಬದ್ಧವಾಗಿ ಸಜ್ಜನಿಕವಾಗಿ ಪ್ರಾರಂಭಿಸಿದರು.
ಮೊದಲ ವರ್ಷದಲ್ಲಿ 5 ಬಹುಮಾನ, ನಂತರ ವರ್ಷದಲ್ಲಿ 6 ಬಹುಮಾನ ಪಡೆದಿದ್ದು, ನಂತರ 2013-14-15-16 ರಲ್ಲಿ ತಂಡದಲ್ಲಿ ಬಹುಮಾನಗಳನ್ನು ತಂದು ಕಾಂತಾವರ ಗ್ರಾಮಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.ಕೊಳಕೆ ಇರ್ವತ್ತೂರು ಅವರಿಗೆ ಭಾಂದೊಟ್ಟುನ ಕುಟ್ಟಿ ಕೋಣಕ್ಕೆ ಜೂನಿಯರ್ ವಿಭಾಗದಲ್ಲಿ 27 ಬಹುಮಾನವನ್ನು ಪಡೆದಿದ್ದಾರೆ. ಇದೇ ಸಮಯದಲ್ಲಿ ವಿಭಾಗದಲ್ಲಿ ವೈಯಕ್ತಿಕ ಸರಣಿ ಪ್ರಶಸ್ತಿ ಹಾಗೂ ಹ್ಯಾಟ್ರಿಕ್ ಹಗ್ಗ ಕಿರಿಯ ನೇಗಿಲು ಹಿರಿಯ ಭಾಗದಲ್ಲಿ ಪಡೆದಿದ್ದಾರೆ.
ನಂತರ ಹಗ್ಗ ಹಿರಿಯ ವಿಭಾಗದಲ್ಲಿ ಮುಲ್ಕಿಯ ಕಾರ್ಕಳದ ಮುಲ್ಕಿಯ ಕೋಣವನ್ನು ಓಡಿಸುತ್ತಾತರ. ಮೂಡಿಬಿದ್ರೆ ಪಡಿವಾಲ್ಸ್ ನೇಗಿಲು ಕಿರಿಯ ಹಾಗೂ ಮೂಡಬಿದ್ರೆ ಚಂದ್ರಹಾಸ ಸನಿಲ್ ಹಗ್ಗ ಕಿರಿಯ ಕೋಣವನ್ನು ಓಡಿಸುತ್ತಾರೆ. ನಂತರ ಪ್ರಸ್ತುತ ಸಿದ್ದಕಟ್ಟೆ ಪೋಡುಂಬ ಇವರ ಕೋಣವನ್ನು ಓಡಿಸುತ್ತಿದ್ದಾರೆ.
ಪ್ರಸ್ತುತ 50ಕ್ಕೂ ಹೆಚ್ಚು ಬಹುಮಾನ ಗಳಿಸಿದ್ದು, ಈಗ ಹಲವು ಯುವಕರಿಗೆ ಪ್ರೋತ್ಸಾಹಿಸಿ ಯುವಕರಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಇನ್ನಷ್ಟು ಇವರಿಗೆ ಅವಕಾಶ ಸಿಗಲಿ ಹಾಗೂ ಕಾಂತಾವರ ಗ್ರಾಮಕ್ಕೆ ಕೀರ್ತಿ ತಂದು ಕೊಡಲಿ ಎಂದು ಶ್ರೀ ಕ್ಷೇತ್ರ ಕಾಂತಾವರ ಶ್ರೀ ಕಾಂತೇಶ್ವರ ದೇವರಲ್ಲಿ ಪ್ರಾರ್ಥಿಸುತ್ತೇನೆ.
Get in Touch With Us info@kalpa.news Whatsapp: 9481252093
Discussion about this post