ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸುಮಾರು 250 ಚಿತ್ರಗಳಲ್ಲಿ ನಟಿಸಿರುವ ಕಲಾವಿದ ಕಿಲ್ಲರ್ ವೆಂಕಟೇಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೂ ಸಹ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ವಿಷಯ ತಿಳಿದ ನಟ ಜಗ್ಗೇಶ್ ಇವರ ಸಹಾಯಕ್ಕೆ ಧಾವಿಸಿದ್ದು, ಇವರ ಮನವಿಗೆ ಸರ್ಕಾರವೂ ಸಹ ಸ್ಪಂದಿಸಿದೆ.
ಇದರ ನಡುವೆಯೇ, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವೆಂಕಟೇಶ್ ನೆರವಿಗೆ ಬಂದಿದ್ದು, ವಿಷಯ ತಿಳಿದಾಕ್ಷಣ 1 ಲಕ್ಷ ರೂ. ಹಣವನ್ನು ಕಳುಹಿದ್ದು, ಡಿ ಬಾಸ್ ಹೃದಯ ವೈಶಾಲ್ಯತೆ ಮತ್ತೊಮ್ಮೆ ಅನಾವರಣಗೊಂಡಿದೆ.
ಕಿಲ್ಲರ್ ವೆಂಕಟೇಶ್ ವಿಚಾರವನ್ನು ನಟ ಜಗ್ಗೇಶ್ ಅವರು ಕರೆ ಮಾಡಿ ದರ್ಶನ್ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕೇವಲ ಒಂದು ಗಂಟೆಯಲ್ಲಿಯೇ ಚಿಕಿತ್ಸೆಗಾಗಿ 1 ಲಕ್ಷ ರೂ. ಹಣವನ್ನು ಕಳುಹಿಸಿದ್ದಾರೆ.
ಈ ವಿಚಾರವನ್ನು ಸ್ವತಃ ಜಗ್ಗೇಶ್ ಅವರು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದು, ದರ್ಶನ್ ಅವರ ಈ ಮಾದರಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post