ಹಾವೇರಿ: ಕೆಲವು ಬುದ್ದಿ ಜೀವಿಗಳಿಗೆ ಧರ್ಮದ ಬಗ್ಗೆ ಅರಿವಿಲ್ಲ. ಹೀಗಾಗಿ ಏನೇನೋ ಮಾತನಾಡುತ್ತಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಛಾಟಿ ಬೀಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಶ್ರೀಗಳು, ಬುದ್ಧಿಜೀವಿಗಳಿಗೆ ಭಾರತದ ಸಂಸ್ಕೃತಿ, ಪರಂಪರೆಗಳ ಅರಿವಿಲ್ಲ. ಅವರು ಯಾವುದೋ ಪಕ್ಷದ ನೆರಳಿನಲ್ಲಿ ಮಾತನಾಡುತ್ತಾರೆ ಎಂದರು.
ಉಗ್ರರ ದಾಳಿ ಅಮಾನವೀಯ ಕೃತ್ಯ, ಅದನ್ನ ಖಂಡಿಸುತ್ತೇವೆ. ಉಗ್ರರ ವಿರುದ್ಧ ಕಠಿಣ ಕ್ರಮ ಸದ್ಯದ ಅವಶ್ಯಕತೆ ಇದೆ. ಯುದ್ಧ ಸಧ್ಯ ಬೇಡ, ಇದರಿಂದ ಅಮಾಯಕರ ಜೀವ ಕಳೆದುಕೊಳ್ಳುವುದು ಬೇಡ. ಅವಶ್ಯಕತೆ ಬಂದರೆ ಮಾತ್ರ ಯುದ್ಧ ನಡೆಯಲಿ. ಆದರೆ ಉಗ್ರರನ್ನು ಹುಡುಕಿ ತಕ್ಕ ಪಾಠ ಕಲಿಸಲೇಬೇಕು ಎಂದಿದ್ದಾರೆ.
ನಮ್ಮ ಮಠ ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಭಾಗಿಯಾಗಲ್ಲ. ರಾಮಮಂದಿರ ನಿರ್ಮಾಣ ಎಲ್ಲರಿಂದಲೂ ಸಾಧ್ಯವಿದೆ. ಕೇವಲ ಬಿಜೆಪಿಯಿಂದ ಮಾತ್ರವಲ್ಲ, ಕಾಂಗ್ರೆಸ್ ರಾಮಮಂದಿರ ವಿಚಾರದಲ್ಲಿ ವಿರೋಧಿಸಲ್ಲ. ರಾಮಮಂದಿರ ವಿಚಾರ ಕೇವಲ ಚುನಾವಾಣಾ ಅಸ್ತ್ರವಾಗಬಾರದು. ನಾವು ಚುನಾವಣೆ ಮುಂದೆ ಇರುವಂತೆ ರಾಮಮಂದಿರ ವಿಚಾರವನ್ನು ಎತ್ತಲ್ಲ. ಹಿಂದೂ ಧರ್ಮಕ್ಕೆ ಅನ್ಯಾಯ ವಾಗಬಾರದು. ರಾಮಂದಿರ ಕಟ್ಟುವುದರಿಂದ ಯಾವ ಮುಸ್ಲಿಂಗೂ ಹಾನಿ ಇಲ್ಲ ಎಂದಿದ್ದಾರೆ.

















