ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲೂಕಿನ ವಿದುರಾಶ್ವತ್ಥದ ವಿದುರನಾರಾಯಣ ಸ್ವಾಮಿ ದೇವಾಲಯದಲ್ಲಿ ಕರ್ತವ್ಯ ಲೋಪ ಹಾಗೂ ಹಣಕಾಸಿನ ಅವ್ಯವಹಾರ ನಡೆಸಿದ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಕೆ.ವಿ. ವೆಂಕಟರಮಣ ಗುರುಪ್ರಸಾದ್ ಅವರನ್ನು ಕಂದಾಯ ಇಲಾಖೆಯ ಅದೀನ ಕಾರ್ಯದರ್ಶಿ ಎಂ.ಎಲ್. ವರಲಕ್ಷ್ಮಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ತಹಶೀಲ್ದಾರ್ ಎಚ್. ಶ್ರೀನಿವಾಸ್ ಸ್ಥಳ ಪರಿಶೀಲನೆ ನಡೆಸಿ ಮೇಲಧಿಕಾರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇರೆಗೆ ಅಮಾನತು ಮಾಡಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093







Discussion about this post