ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಿಗೆ ವರದಾನವಾಗುವ ಅಟಲ್ ಭೂಜಲ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದು ಅಂತರ್ಜಲ ಹೆಚ್ಚಿಸುವಲ್ಲಿಯೂ ಸಹ ಸಹಕಾರಿಯಾಗುವ ಜೊತೆಗೆ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶ, ಹರಿಯಾಣ ಹಾಗೂ ಉತ್ತರಪ್ರದೇಶಗಳಿಗೆ ವರದಾನವಾಗಲಿದೆ.
ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರಿನ ಮತ್ತೊಂದು ಯೋಜನೆಯ ಬಗ್ಗೆ ಪ್ರಸ್ತಾಪಿಸಿದ ಪಿಎಂ ಮೋದಿ, ಹಿಮಾಚಲ ಪ್ರದೇಶವನ್ನು ಲಡಾಖ್ ಮತ್ತು ಜಮ್ಮು ಕಾಶ್ಮೀರಕ್ಕೆ ಸಂಪರ್ಕಿಸುವ ರೋಹ್ಟಂಗ್ ಸುರಂಗ ಮತ್ತು ಮನಾಲಿಯನ್ನು ಲೇಹ್‌ನೊಂದಿಗೆ ಸಂಪರ್ಕಿಸುವುದನ್ನು ಅಟಲ್ ಸುರಂಗ ಎಂದು ಕರೆಯಲಾಗುವುದು.
-ನರೇಂದ್ರ ಮೋದಿ, ಪ್ರಧಾನಿ
ಪ್ರಧಾನಿಯವರ ಪ್ರಕಾರ ಯೋಜನೆಯ ಪ್ರಯೋಜನಗಳು ಇವು:
- ಅಂತರ್ಜಲ ಸಂಪನ್ಮೂಲ ಈಗಾಗಲೇ ಕಡಿಮೆ ಇರುವ ನಿರ್ದಿಷ್ಟ ಪ್ರದೇಶಗಳು ಅಥವಾ ಪ್ರದೇಶಗಳಿಗೆ ಪ್ರದೇಶಗಳಿಗೆ ಹೆಚ್ಚಿನ ಒತ್ತು
- 2024 ರ ವೇಳೆಗೆ ದೇಶದ ಪ್ರತಿಯೊಂದು ಮನೆಗೂ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಒಂದು ಹೆಜ್ಜೆ
- ಜಲ್ ಜೀವನ್ ಮಿಷನ್ ಪ್ರತಿ ಮನೆಗಳಿಗೆ ಕೊಳವೆಗಳ ಮೂಲಕ ನೀರು ಪೂರೈಕೆಗೆ ಸಹಕಾರ
- ಮಾಜಿ ಪ್ರಧಾನಿ ಮತ್ತು ಬಿಜೆಪಿಯ ವಾಜಪೇಯಿ ಹೆಸರನ್ನು ಹೊಂದಿರುವ ಅಟಲ್ ಭೂ ಜಲ ಯೋಜನೆ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು
- ರೈತರಿಗೆ ನೀರಾವರಿ ನೀಡುವ ಪ್ರಮುಖ ಮೂಲಗಳಲ್ಲಿ ಒಂದಾದ ಅಂತರ್ಜಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ, ಉತ್ತೇಜಿಸುವ ಗುರಿ
- 6 ಸಾವಿರ ಕೋಟಿ ರೂಪಾಯಿಗಳ ಈ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಐದು ವರ್ಷಗಳ ಅವಧಿಯಲ್ಲಿ ಜಾರಿ
Get in Touch With Us info@kalpa.news Whatsapp: 9481252093
Discussion about this post