ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಜಯನಗರ: ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾದ ಆನಂದ್ ಸಿಂಗ್ ಪರವಾಗಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪ್ರಮುಖ ಬಿಜೆಪಿ ಮುಖಂಡರುಗಳು ಹೊಸಪೇಟೆ ನಗರದಲ್ಲಿ ಪ್ರಚಾರಕಾರ್ಯ ನಡೆಸಿ, ಅವರಿಗೆ ಮತ ನೀಡುವುದರ ಮೂಲಕ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಯಡಿಯೂರಪ್ಪನವರು, ತಮ್ಮ ಸರ್ಕಾರ ಈವರೆಗೆ ಮಾಡಿರುವ ಅನೇಕ ಸಾಧನೆಯ ಕೆಲಸ-ಕಾರ್ಯಗಳ ಬಗ್ಗೆ ವಿವರವಾಗಿ ತಮ್ಮ ಭಾಷಣದಲ್ಲಿ ತಿಳಿಸಿದರು. ಹೊಸಪೇಟೆ ನಗರವನ್ನುಜಿಲ್ಲಾ ಕೇಂದ್ರವಾಗಿ ಮಾರ್ಪಾಟು ಮಾಡುವುದರ ಬಗ್ಗೆ ಈಗಾಗಲೇ ಸದನ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವಾಗಿದೆ ಮಾಡುವುದು ನಿಶ್ಚಿತ ಎಂದರು.
ಈ ಬಾರಿ ಹೊಸಪೇಟೆ ವಿಜಯನಗರ ಕ್ಷೇತ್ರದಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಹೆಚ್ಚಾಗಿದ್ದು, ಆನಂದ್ ಸಿಂಗ್ ಅವರು ಜಯ ಸಾಧಿಸಲು ಹರಸಾಹಸ ಮಾಡಬೇಕಾಗಿರುತ್ತದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ ಹಾಗೂ ಸಮಾಜ ಸೇವಕರಾದ ನಬೀ ಅವರು ಚುನಾವಣಾ ಕಣದಲ್ಲಿದ್ದು, ಮುಸ್ಲಿಂ ಸಮುದಾಯದ ಅಧಿಕ ಮತಗಳು ಕಾಂಗ್ರೆಸ್ ಪಕ್ಷದ ಕಡೆ ಒಲವು ಹೆಚ್ಚಾಗಿದೆ. ಆದರೂ ಆನಂದ್ ಸಿಂಗ್ ರವರು ವಿಜಯನಗರ ಕ್ಷೇತ್ರದಲ್ಲಿ ಮಾಡಿರುವಂತಹ ಜನಪರ ಕಾರ್ಯಗಳಿಗೆ ಹಾಗೂ ವಿಜಯನಗರ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿರುವ ಕಾರಣ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಗೆದ್ದು ಕಾಂಗ್ರೆಸ್ ಕೆಲಸಕಾರ್ಯಗಳಲ್ಲಿ ಸರಿಯಾದ ಒಮ್ಮತ ಇಲ್ಲದ ಕಾರಣ ಬಿಜೆಪಿಗೆ ಮತ್ತೆ ಮರಳಿದ್ದಾರೆ.
ವಿಜಯನಗರ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವುದು ಕೆಲವು ಮುಖಂಡರಿಗೆ ಕಷ್ಟಕರವಾಗಿದ್ದು, ಹೇಗಾದರೂ ಮಾಡಿ ಆನಂದ್ ಸಿಂಗ್ ಅವರನ್ನು ಸೋಲಿಸಬೇಕೆಂಬ ಒಂದು ಗುಂಪು ಒಂದು ಕಡೆಯಾದರೆ, ಬಿಜೆಪಿಯ ಮುಖಂಡರುಗಳಲ್ಲಿ ಕೆಲವೊಬ್ಬರು ಬಂಡಾಯ ಅಭ್ಯರ್ಥಿ ಕಡೆ ಹೋಗಿರುವುದು ಒಂದು ಕಡೆಯಾಗಿದೆ.
ಜಾತಿ ಲೆಕ್ಕಾಚಾರ ಮತ್ತು ಅನಂದ್ ಸಿಂಗ್ ಅವರ ಜನಪರ ಕಾರ್ಯದ ಮೇಲೆ ಹೊಸಪೇಟೆ ನಾಗರಿಕರ ಬೆಂಬಲದಿಂದ ಆನಂದ್ ಸಿಂಗ್ ಅವರು ಚುನಾವಣೆಯಲ್ಲಿ ಗೆಲ್ಲಲು ಹರಸಾಹಸ ಮಾಡುತ್ತಿರುತ್ತಾರೆ. ಅದರಂತೆ ಶ್ರೀರಾಮುಲು ಅವರೂ ಸಹ ಕಳೆದ ಎರಡು ದಿನಗಳು ಹೊಸಪೇಟೆ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಚುನಾವಣಾ ಪ್ರಚಾರವನ್ನು ಮಾಡಿದ್ದಾರೆ.
ಪ್ರತಿದಿನ ಬಿಜೆಪಿಯ ಅನೇಕ ಮುಖಂಡರುಗಳು ಪ್ರಚಾರದ ಸಮಯವನ್ನು ವಿಜಯನಗರ ಕ್ಷೇತ್ರದಲ್ಲಿ ನಡೆಸುತ್ತಿರುವುದು ನೋಡಿದರೆ, ಆನಂದ್ ಸಿಂಗ್ ಅವರ ಗೆಲುವು ನಿಶ್ಚಿತ ಎಂದು ಗೊತ್ತಾಗುತ್ತದೆ.
ವರದಿ: ಮುರಳೀಧರ್ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post