No Result
View All Result
SWR Mysuru Division Excels with Record Passenger Revenue and Strong Commercial Growth
English Articles

SWR Mysuru Division Excels with Record Passenger Revenue and Strong Commercial Growth

by ಕಲ್ಪ ನ್ಯೂಸ್
April 2, 2026
0

Kalpa Media House  |  Mysuru | The Mysuru Division has recorded an exceptional performance during the financial year 2025–26, achieving...

Read moreDetails
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
  • Advertise With Us
  • Grievances
  • About Us
  • Contact Us
Thursday, April 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬಳ್ಳಾರಿ

ನಮ್ಮ ಹೆಮ್ಮೆ: ವಿಜಯನಗರದಲ್ಲಿ ಅನಾವರಣಗೊಂಡು ರಾರಾಜಿಸುತ್ತಿದೆ ದೇಶದ ಅತಿ ಎತ್ತರದ ರಾಷ್ಟ್ರ ಧ್ವಜ

ಪ್ರಾಯೋಗಿಕ ಹಾರಾಟದ ವೇಳೆ ತಾಂತ್ರಿಕ ತೊಂದರೆ-150 ಅಡಿ ಎತ್ತರದಲ್ಲಿ ಸರಿ ಪಡಿಸಿದ್ದು ಯಾರು ಗೊತ್ತಾ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 16, 2022
in ಬಳ್ಳಾರಿ
0
ನಮ್ಮ ಹೆಮ್ಮೆ: ವಿಜಯನಗರದಲ್ಲಿ ಅನಾವರಣಗೊಂಡು ರಾರಾಜಿಸುತ್ತಿದೆ ದೇಶದ ಅತಿ ಎತ್ತರದ ರಾಷ್ಟ್ರ ಧ್ವಜ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ವಿಜಯನಗರ  |

ಜಿಲ್ಲೆಯಲ್ಲಿ ನಿನ್ನೆ ಅನಾವರಣಗೊಂಡು ರಾರಾಜಿಸುತ್ತಿರುವ ದೇಶದ ಅತಿ ಎತ್ತರದ ರಾಷ್ಟ್ರ ಧ್ವಜ ಈಗ ಸಮಸ್ತ ಕರ್ನಾಟಕಕ್ಕೆ ಮುಕುಟಪ್ರಾಯವಾಗಿ ಪರಿಗಣಿತವಾಗಿದೆ.

405 ಅಡಿ ಎತ್ತರದ ಧ್ವಜ ಸ್ತಂಭದ ನಿರ್ಮಾಣದಿಂದ ವಿಜಯನಗರ ಹೊಸ ಇತಿಹಾಸ ಸೃಷ್ಟಿಸಿದೆ. ಆ.15ರಂದು ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಹಟ ಹಿಡಿದು ನಿಂತ ಹಿನ್ನೆಲೆಯಲ್ಲಿ ಇಂದು ದೇಶದ ಇತಿಹಾಸದಲ್ಲೇ ವಿಜಯನಗರ ಜಿಲ್ಲೇಯಲ್ಲಿ ಅತೀ ಎತ್ತರದ ಧ್ವಜ ಸ್ಥಂಭ ನಿರ್ಮಾಣ ದಾಖಲೆಯಾಗಿ ರಾರಾಜಿಸುತ್ತಿದೆ. ನೂತನ ವಿಜಯನಗರ ಜಿಲ್ಲೇಹೊಸಪೇಟೆಯ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ದೇಶದ ಧ್ವಜಸ್ತಂಭದಲ್ಲಿ ದೇಶದಲ್ಲೇ ಅತೀ ದೊಡ್ಡ ತ್ರಿವರ್ಣ ಧ್ವಜ ಹಾರಾಡುತ್ತಿದೆ.
405 ಅಡಿ ಎತ್ತರದ ಧ್ವಜಸ್ತಂಭದಲ್ಲಿ 120×80 ಅಡಿಯ ರಾಷ್ಟ್ರಧ್ವಜ ರಾರಾಜಿಸುತ್ತಿದೆ. 6 ಕೋಟಿ ರೂ. ವೆಚ್ಚದಲ್ಲಿ ಬಜಾಜ್ ಕಂಪನಿಯವರು 405 ಅಡಿ ಎತ್ತರದ ನೂತನ ಧ್ವಜಸ್ತಂಭ ನಿರ್ಮಾಣ ಮಾಡಲಾಗಿದೆ. ತಾಂತ್ರಿಕ ತಜ್ಞರು ಸೇರಿ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ನಡುರಾತ್ರಿ ಧ್ವಜ ಹಾರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಅತೀ ಎತ್ತರದ ಧ್ವಜಸ್ತಂಭದಲ್ಲಿ ಆಗಸ್ಟ್ 15ರಂದೇ ರಾಷ್ಟ್ರ ಧ್ವಜವನ್ನು ಹಾರಾಟ ಮಾಡಲು ನಿರ್ಧರಿಸಲಾಗಿತ್ತು. ಸೋಮವಾರ ಸಚಿವ ಆನಂದ ಸಿಂಗ್ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ತಡರಾತ್ರಿಯೇ ತಜ್ಞರು ಧ್ವಜ ಹಾರಿಸಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೆ ಬೆಳಗಾವಿಯಲ್ಲಿರುವ 361 ಅಡಿ ಧ್ವಜಸ್ತಂಭ ಅತ್ಯಂತ ಎತ್ತರದ ಧ್ವಜಸ್ತಂಭ ಎಂಬ ದಾಖಲೆ ಹೊಂದಿತ್ತು. ಇದೀಗ ಹೊಸಪೇಟೆಯಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ 405 ಅಡಿ ಎತ್ತರದ ಧ್ವಜಸ್ತಂಭ ದೇಶದಲ್ಲಿಯೇ ಅತ್ಯಂತ ಎತ್ತರದ ದಾಖಲೆಯಾಗಿ ಮೆರೆಯುತ್ತಿದೆ. ಬೆಳಗಾವಿಯಲ್ಲಿ 361 ಅಡಿ, ಅಮೃರ್ತ್ಸ 360, ಭಕ್ತಿಶಕ್ತಿ ಪ್ರಾಣ್ 351, ಗುವಾಹಟಿ 319.5, ಕೊಲ್ಹಾಪುರ 303, ರಾಂಚಿ 293, ಹೈದರಾಬಾದ್ 291, ರಾಯಪುರ 269, ಫರೀದಾಬಾದ್ 257, ಪುಣೆ 237, ಭೂಪಾಲ್ 235, ಮುಂಬಯಿ 222, ಕಟಕ್ 215, ಹೊಸದಿಲ್ಲಿ 207, ಜೈಪುರದಲ್ಲಿ 206 ಅಡಿ ಎತ್ತರದ ಧ್ವಜಸ್ತಂಭ ಹೊಂದಿವೆ.

Also read: ಮುದ್ರಣ ಮಾಧ್ಯಮದ ಘನತೆ ಉಳಿಸಲು ಕಲ್ಲೆ ಶಿವೋತ್ತಮ ರಾವ್ ಕರೆ

405 ಅಡಿ ಎತ್ತರದ ಈ ಧ್ವಜ ಸ್ತಂಭದಲ್ಲಿ 80 ಅಡಿ ಉದ್ದ 120 ಅಡಿ ಅಗಲದ ದ್ವಜವನ್ನ ಹೊಂದಿದ್ದು, ಈ ಬೃಹತ್ ಧ್ವಜ ಹಾರಾಡಲು ಶ್ರಮವಹಿಸಿ ಯಶಸ್ವಿಯಾಗಿದ್ದಾರೆ.

ಸಚಿವ ಆನಂದ್ ಸಿಂಗ್ ಆಗಸ್ಟ್ 15 ಧ್ವಜಾರೋಹಣ ನೆರವೇರಿಸಿದರು. ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧಿಕಾರಿಗಳಾದ ಅನಿರುದ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಕುಮಾರ್ ಸಮಾರಂಭದಲ್ಲಿ ಭಾಗಿಯಾಗಿ ಸಚಿವರಾದ ಆನಂದ್ ಸಿಂಗ್ ಅವರಿಗೆ ಸಾಥ್ ನೀಡಿದರು.
ನಿನ್ನೆ ರಾತ್ರಿ ಧ್ವಜಾರೋಹಣದ ಪ್ರಯೋಗಿಕ ಪರೀಕ್ಷೆ ನಡೆದ ಸಂದರ್ಭದಲ್ಲಿ ಧ್ವಜ ಸ್ಥಂಭ 150 ಅಡಿಯಲ್ಲಿ ತಾಂತ್ರಿಕ ತೊಂದರೆ ಎದುರಾಗಿ ಕಷ್ಟಪಡುವ ಪರಿಸ್ಥಿತಿ ಎದುರಾಯಿತು. ಕೂಡಲೆ ಚಿತ್ರದುರ್ಗದ ಕೋತಿ ರಾಜವರನ್ನು ಕರೆಸಿ ಅವರನ್ನ ಮೇಲೇರಿಸಿ ತಾಂತ್ರಿಕ ತೊಂದರೆ ಸರಿಪಡಿಸಿ ಧ್ವಜ ಹಾರಾಟಕ್ಕೆ ಹರ ಸಾಹಸ ಪಡಬೇಕಾಯಿತು.

ಸಚಿವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆರೋಗ್ಯದ ದೃಷ್ಟಿಯಿಂದ ಹಾಗೂ ದೇಶದ ಅತಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣಕ್ಕೆ ಅನುವು ಮಾಡಿಕೊಡಬೇಕೆಂದು ಅನಂದ್ ಸಿಂಗ್ ಮುಖ್ಯಮಂತ್ರಿಯವರಿಗೆ ಮಾಡಲಾದ ಮನವಿಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ಸಹ ಈ ಬಾರಿ ಸಚಿವರ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ.
ಯಾವುದೇ ಪಕ್ಷ ಯಾರಿಗೂ ಸ್ವಂತ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ಅದು ಪಕ್ಷದ ತೀರ್ಮಾನವಾಗಿರುತ್ತದೆ ಎಲ್ಲರೂ ಗೌರವಿಸಬೇಕು. ನನಗೆ ನೆರೆಯ ಕೊಪ್ಪಳ ಜಿಲ್ಲೆಯ ಜವಾಬ್ದಾರಿ ವಹಿಸಿದ್ದಾರೆ. ಸಮೀಪದಲ್ಲಿ ಇರುವುದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುವುದಿಲ್ಲ. ಎರಡೂ ಜಿಲ್ಲೆಗಳ ನಡುವೆ ಸಂಚರಿಸುತ್ತ ಇರುತ್ತೇನೆ. ಆದರೂ ಆರೋಗ್ಯದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ನನ್ನ ಮನವಿ ಸ್ವೀಕರಿಸಿ ಅವಕಾಶ ಮಾಡಿಕೂಟ್ಟಿರುತ್ತಾರೆ. ಅವರಿಗೆ ಅಭಿನಂದನೆ ಸಲ್ಲಿಸಿದರು.

ವಿಶ್ವ ಪ್ರಸಿದ್ಧ ಹಂಪಿ ಇರುವುದರಿಂದ ದೇಶ-ವಿದೇಶದ ಪ್ರವಾಸಿಗರು ಬಂದು ಹೋಗುತ್ತಿರುತ್ತಾರೆ. ದೇಶದ ಅತಿ ಎತ್ತರದ ಧ್ವಜ ಸ್ತಂಭಕ್ಕೂ ಭೇಟಿ ಕೊಡುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಆಗಸ್ಟ್ 15 ರಂದು ವಿಜಯನಗರದಲ್ಲಿ ಇತಿಹಾಸ ಸೃಷ್ಟಿಯಾಗದೆ. ವಿಜಯನಗರ ಜಿಲ್ಲೆಯ ಪ್ರತಿಯೊಬ್ಬರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನಗೆ ಸಂತಸ ತಂದಿದೆ ಎಂದು ಸಚಿವರು ತಮ್ಮ ಹರ್ಷ ವ್ಯಕ್ತಪಡಿಸಿದರು.

ಆಗಸ್ಟ್ 15 ರ ಸಂಜೆ ಭವ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರಿನ ನಿರುಪಮ ರಾಜೇಶ್ ಕಲಾತಂಡದವರು ಸುಮಾರು 90 ನಿಮಿಷಗಳ ವಿಜಯನಗರ ವೈಭವ ಎಂಬ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು. ಸುಮಾರು 6 ಕಾರ್ಯಕ್ರಮಗಳನ್ನು ಸ್ಥಳೀಯ ಕಲಾವಿದರು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮುಂದಿನ ದಿನದಲ್ಲಿ ಜೋಳದ ರಾಶಿ ಗುಡ್ಡದ ಮೇಲೆ 25 ಕೋಟಿ ವೆಚ್ಚದಲ್ಲಿ ಶ್ರೀ ಕೃಷ್ಣದೇವರಾಯ ಕಂಚಿನ ಪ್ರತಿಮೆಯನ್ನು ಸ್ವಲ್ಪ ದಿನದಲ್ಲಿ ಅನಾವರಣ ಮಾಡಲಾಗುತ್ತಿದೆ ಎಂದಿ ತಿಳಿಸಿದರು. ಸಭೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಬಂದು ಕಾರ್ಯಕ್ರಮ ನಿರೀಕ್ಷಿಸಿದರು.

ಈ ಸಂದರ್ಭದಲ್ಲಿ ಹೊಸಪೇಟೆ ನಗರವನ್ನು ಸ್ವಚ್ಚವಾಗಿ ಇಟ್ಟುಕೊಂಡು ಮಾದರಿ ಜಿಲ್ಲೆಯಾಗಿ ಮಾಡಲು ಸಚಿವರ ಮನವಿ ಮಾಡಿದರು
(ವರದಿ: ಮುರುಳೀಧರ್ ನಾಡಿಗೇರ್, ವಿಜಯನಗರ)      

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaVijayanagaraವಿಜಯನಗರ
Share197Tweet123Send
Previous Post

ಮುದ್ರಣ ಮಾಧ್ಯಮದ ಘನತೆ ಉಳಿಸಲು ಕಲ್ಲೆ ಶಿವೋತ್ತಮ ರಾವ್ ಕರೆ

Next Post

ಸಾವರ್ಕರ್ ವಿರುದ್ಧ ಹೀನಾಯವಾಗಿ ಮಾತನಾಡುತ್ತಿರುವ ಸಿದ್ಧರಾಮಯ್ಯ ರಾಷ್ಟ್ರದ್ರೋಹಿ: ಶಾಸಕ ಈಶ್ವರಪ್ಪ ಹೇಳಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಾವರ್ಕರ್ ವಿರುದ್ಧ ಹೀನಾಯವಾಗಿ ಮಾತನಾಡುತ್ತಿರುವ ಸಿದ್ಧರಾಮಯ್ಯ ರಾಷ್ಟ್ರದ್ರೋಹಿ: ಶಾಸಕ ಈಶ್ವರಪ್ಪ ಹೇಳಿಕೆ

ಸಾವರ್ಕರ್ ವಿರುದ್ಧ ಹೀನಾಯವಾಗಿ ಮಾತನಾಡುತ್ತಿರುವ ಸಿದ್ಧರಾಮಯ್ಯ ರಾಷ್ಟ್ರದ್ರೋಹಿ: ಶಾಸಕ ಈಶ್ವರಪ್ಪ ಹೇಳಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಸಾಗರ | ಹೊಟೇಲ್ ಓನರ್ ಕಾರಲ್ಲಿ ಪತ್ತೆಯಾಯ್ತು ಬಿಹಾರಿ ಯುವಕನ ಶವ | ಎಸ್ಪಿ ನಿಖಿಲ್ ಹೇಳಿದ್ದೇನು?

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
ಭದ್ರಾವತಿಯ ಇಬ್ಬರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಏನಿದು ಪ್ರಕರಣ?

ಭದ್ರಾವತಿಯ ಇಬ್ಬರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಏನಿದು ಪ್ರಕರಣ?

April 2, 2026
ಜೀವ ಒತ್ತೆಯಿಟ್ಟು ವ್ಯಕ್ತಿಯ ಪ್ರಾಣ ಉಳಿಸಿದ ಹೆಡ್ ಕಾನ್‌ಸ್ಟೇಬಲ್’ಗೆ ಹೊಸ್ಮತ್ ಆಸ್ಪತ್ರೆಯಿಂದ ಪ್ರಶಸ್ತಿ

ಜೀವ ಒತ್ತೆಯಿಟ್ಟು ವ್ಯಕ್ತಿಯ ಪ್ರಾಣ ಉಳಿಸಿದ ಹೆಡ್ ಕಾನ್‌ಸ್ಟೇಬಲ್’ಗೆ ಹೊಸ್ಮತ್ ಆಸ್ಪತ್ರೆಯಿಂದ ಪ್ರಶಸ್ತಿ

April 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL