ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಹೊಸಕೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ದುಸ್ಥಿತಿ ಹೇಳತೀರದಾಗಿದೆ. ಇಲ್ಲಿ ಮಾತ್ರವಲ್ಲ, ಗ್ರಾಮದ ಕೆಲ ಗಲ್ಲಿಗಳು ಕೂಡ ಇದೇ ದುಸ್ಥಿತಿಯಲ್ಲಿವೆ ಎನ್ನುತ್ತಾರೆ ಗ್ರಾಮಸ್ಥರು.
ಇದು ಸುಮಾರು ನಾಲ್ಕು ವರ್ಷದ ಗೋಳಾಗಿದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಾಸಸ್ಥಾನದಲ್ಲಿಯೇ, ಈ ದುರ್ಘತಿ ಎಂದರೆ ಊಹಿಸಿ, ಗ್ರಾಮ ಪಂಚಾಯ್ತಿಯ ಕಾರ್ಯವೈಖರಿ ಎಂತಹದ್ದು ಎಂದು. ಕೆಲ ಗ್ರಾಮಸ್ಥರು ಜನಪ್ರತಿನಿಧಿಗಳ ಪರ ವಕಾಲತ್ತು ವಹಿಸಿದರೆ, ಹಲವರು ಅವರ ನಿರ್ಲಕ್ಷ್ಯ ಧೋರಣೆಗೆ ಕನ್ನಡಿ ಎಂದು ಆರೋಪಸಿದ್ದಾರೆ.
ದಲಿತರ ಕೇರಿ ಎಂಬ ಕಾರಣಕ್ಕೆ ಶೊಷಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಗ್ರಾಪಂ ಆಡಳಿತದ ಮೇಲಿದೆ. ನಾಲ್ಕು ವರ್ಷದಿಂದ ಬಗೆಹರಿಯದೇ ಇರೋ ಈ ಸಮಸ್ಯೆ ಆರೋಪಕ್ಕೆ ಪುಷ್ಠಿ ನೀಡುತ್ತಿದೆ. ಗ್ರಾಮದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಈ ಸಮಸ್ಯೆ ತಲೆದೋರಿರುವುದಾಗಿ ಮೇಲ್ನೊಟಕ್ಕೆ ಸಾಬೀತಾಗಿದೆ.
ಮನೆ ಬಳಕೆಯಿಂದಾಗುವ ತ್ಯಾಜ್ಯನೀರು ರಸ್ಥೆಯನ್ನು ಆಕ್ರಮಿಸಿಕೊಂಡಿದ್ದು, ಕಾಲೋನಿ ಗಬ್ಬೆದ್ದು ನಾರುತ್ತಿದೆ. ತಾವು ವಾರಕ್ಕೊಮ್ಮೆ ಆಸ್ಪತ್ರೆಗೆ ಅಲೆದಾಡೋದು ಸಾಮಾನ್ಯವಾಗಿದ್ದು, ನಿತ್ಯ ನರಳುವಂತಾಗಿದೆ ಎಂದು ಕಾಲೋನಿಯವರು ತಮ್ಮ ಅಳಲುತೋಡಿಕೊಂಡಿದ್ದಾರೆ.
ನಾಗರೀಕ ಸಮಾಜ ನಾಚಿಕೆ ಪಡುವಂತಹ ಮನೋಭಾವದ ಕೆಲ ಜನಪ್ರತಿನಿಧಿಗಳಿಂದಾಗಿ, ತಮ್ಮ ಬದುಕು ನಿತ್ಯ ನರಕದಲ್ಲಿ ನರಳುವಂತಾಗಿದೆ. ಕಾರಣ ಶೀಘ್ರವೇ ಹಗರಿಬೊಮ್ಮನಹಳ್ಳಿ ತಾಪಂ ಕಾರ್ಯನಿರ್ವಹಣಾಧಿಕಾರಿ ಅತೀ ಶೀಘ್ರವಾಗಿ ಸ್ಥಳಕ್ಕಾಗಮಿಸಿ ದುಸ್ಥಿತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.
ನಿತ್ಯ ಕೊಳೆತ ಕೆಸರು ಗದ್ದೆಯ ಮಧ್ಯದಲ್ಲಿಯೇ ನಿತ್ಯ ವಾಸವಾಗಿದೆ. ಗಲೀಜು ನೀರಿನಲ್ಲಿಯೇ ನಿತ್ಯ ನಡೆದಾಡಬೇಕಿದೆ. ನಾಲ್ಕು ವರ್ಷದಿಂದ ದುರ್ನಾಥ ನೀರಿನಲ್ಲಿಲ್ಲಿಯೇ ನಡೆದಾಡಬೇಕು. ಬಚ್ಚಲ ಮೋರಿ ನೀರಿನೊಂದಿಗೆ ಜೀವನ ಸಾಗಿಸಬೇಕಿದೆ. ರೋಗ ಋಜನಿಗಳಿಂದ ಕಾಲೋನಿ ಜನ ನಿತ್ಯ ಆಸ್ಪತ್ರೆಗೆ ಅಲೆಯದಾಡುವಂತಾಗಿದೆ. ಇದು ಕೆಲ ಮೂರ್ಖ ಹಾಗೂ ಮೂಢ ಜನಪ್ರತಿನಿಧಿಗಳಿಂದ ಹಾಗೂ ಗ್ರಾಪಂ ಭ್ರಷ್ಟ ಅಧಿಕಾರಿಗಳಿಂದ ಗ್ರಾಮಸ್ಥರ ಮೇಲಾಗುತ್ತಿರುವ ಶೋಷಣೆಗೆ ಜೀವಂತ ಸಾಕ್ಷಿಯಾಗಿದೆ ಎಂದು ಕಾಲೋನಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಮೂರ್ಖ ಮುಖಂಡರ ಒಣ ಪ್ರತಿಷ್ಠೆಗೆ ತಮ್ಮ ನೆಮ್ಮದಿ ಹಾಳು ಮಾಡಲಾಗುತ್ತಿದೆ, ಅಧಿಕಾರಿಗಳು ಶೀಘವೇ ಈ ನರಕದಿಂದ ತಮ್ಮನ್ನು ಮುಕ್ತ ಮಾಡಬೇಕಿದೆ ಮತ್ತು ನೈರ್ಮಲ್ಯತೆ ಕಾಪಾಡಬೇಕಿದೆ. ಮೂಲಭೂತ ಸೌಕರ್ಯಗಳನ್ನು ಕೂಡಲೇ ಸಮರ್ಪಕವಾಗಿ ಕಾಲೋನಿಗೆ ಒದಗಿಸಬೇಕೆಂದು ಈ ಮೂಲಕ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಒತ್ತಾಯಿಸಿದ್ದಾರೆ.
ನಿರ್ಲಕ್ಷ್ಯ ತೋರಿದಲ್ಲಿ ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಲ್ಲಿ, ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಲ್ಲಿ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಕೇವಲ ಹೊಸಕೇರಿ ಗ್ರಾಮದಲ್ಲಿನ ದುರವಸ್ಥೆ ಮಾತ್ರವಲ್ಲ ಹಲವೆಡೆಯ ಗ್ರಾಮಗಳಲ್ಲಿನ ದಲಿತ ಕಾಲೋನಿಗಳ ಗೋಳಾಗಿದ್ದು, ಕೆಲ ಗ್ರಾಮ ಪಂಚಾಯ್ತಿ ಆಡಳಿತದಿಂದ ದಲಿತ ಕೇರಿಗಳನ್ನು ಕೆಲ ಜನಪ್ರತಿನಿಧಿಗಳು ಹಾಗೂ ಗ್ರಾಪಂ ಅಧಿಕಾರಿಗಳು ಸಿಬ್ಬಂದಿಯವರು ನಿರ್ಲಕ್ಷಿಸಿದ್ದಾರೆ. ಹಲವೆಡೆ ಮೂಲಭೂತ ಸೌಕರ್ಯಗಳನ್ನು ಈವರೆಗೂ ಒದಗಿಸಿಲ್ಲ. ಅಂತಹವರ ವಿರುದ್ಧ ಶೀಘ್ರವೇ ಕಾನೂನು ಹೋರಾಟ ನಡೆಸಲಾಗುವುದೆಂದು ದಲಿತ ಮುಖಂಡರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಪಂ ಅಧಿಕಾರಿ ಕ್ರಮ ಕೈಗೊಳ್ಳಲಿ:
ಕಳೆದ ನಾಲ್ಕು ವರ್ಷದಿಂದ ದಲಿತ ಕಾಲೋನಿಯ ಜನರ ಜೀವ ಹಿಂಡುತ್ತಿರುವ ಈ ಸಮಸ್ಯೆಯನ್ನು, ತಾಪಂ ಅಧಿಕಾರಿಗಳು ಖುದ್ದಾಗಿ ಪರಿಹರಿಸಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ವಸ್ಥುಸ್ಥಿತಿ ಅರಿತು ನಿರ್ಲಕ್ಷ್ಯ ಧೋರಣೆಯ ಗ್ರಾಪಂ ಅಧಿಕಾರಿಯ ವಿರುದ್ಧ ಶಿಸ್ಥು ಕ್ರಮ ಜರುಗಿಸಬೇಕಿಸಬೇಕು ಎಂದು ಜನತೆ ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.
-ವಿ.ಜಿ. ವೃಷಭೇಂದ್ರ ಕೂಡ್ಲಿಗಿ-9008937428
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post