ಕಲ್ಪ ಮೀಡಿಯಾ ಹೌಸ್ | ವಿಜಯವಾಡ |
ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ಅಲ್ಲಿನ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು #Chandrababu Naidu ಹಾಗೂ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ #Pawan Kalyan ಪ್ರಮಾಣ ವಚನ ಸ್ವೀರಿಸಿದ್ದಾರೆ.
ವಿಜಯವಾಡದ ಹೊರವಲಯದ ಕೇಸರಪಲ್ಲಿಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಬ್ಬರೂ ಗೌಪ್ಯತಾವಿಧಿ ಸ್ವೀಕರಿಸಿದರು.

Also read: ದರ್ಶನ್ ಅಂದರ್ | ಪತಿಯನ್ನು ಇನ್‌ಸ್ಟಾದಲ್ಲಿ ಅನ್ ಫಾಲೋ ಮಾಡಿ, ಡಿಪಿ ಡಿಲೀಟ್ ಮಾಡಿದ ಪತ್ನಿ ವಿಜಯಲಕ್ಷ್ಮಿ
ಇದೇ ವೇಳೆ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಂಧ್ರ ಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ಪ್ರಮಾಣ ವಚನ ಬೋಧಿಸಿದರು.

ನಾಯ್ಡು ಹಾಗೂ ಪವನ್ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, #PM Narendra Modi ಅವರ ಸಂಪುಟದ ಸಹೋದ್ಯೋಗಿಗಳಾದ ಅಮಿತ್ ಶಾ, ನಿತಿನ್ ಗಡ್ಕರಿ, ಜೆಪಿ ನಡ್ಡಾ, ಮಾಜಿ ಉಪರಾಷ್ಟçಪತಿ ಎಂ. ವೆಂಕಯ್ಯ ನಾಯ್ಡು, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಸೂಪರ್ ಸ್ಟಾರ್’ಗಳಾದ ರಜನಿಕಾಂತ್ ಮತ್ತು ಚಿರಂಜೀವಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post