No Result
View All Result
Marriott Bonvoy Expands ICC Partnership to Include Women’s T20 World Cup 2026
English Articles

Marriott Bonvoy Expands ICC Partnership to Include Women’s T20 World Cup 2026

by ಕಲ್ಪ ನ್ಯೂಸ್
May 19, 2026
0

Kalpa Media House  |  Special Article | Marriott Bonvoy, the global travel platform by Marriott International, has announced the expansion...

Read moreDetails
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
Amazon India to deploy 1,000 Eicher electric trucks for Amazon Now operations

Amazon India to deploy 1,000 Eicher electric trucks for Amazon Now operations

May 18, 2026
South Western Railway, Mysuru Division Hosts Inter Department Drama Competition

South Western Railway, Mysuru Division Hosts Inter Department Drama Competition

May 16, 2026
  • Advertise With Us
  • Grievances
  • About Us
  • Contact Us
Tuesday, May 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಈಕೆಗೆ ಪ್ರಚಾರದ ಹಂಗಿಲ್ಲ, ಪ್ರಶಸ್ತಿಯ ಅಮಲಿಲ್ಲ: ಯಕ್ಷಲೋಕದಲ್ಲಿ ಮಿನುಗುತ್ತಿರುವ ಉಪನ್ಯಾಸಕಿ ವಿನುತಾ ಗಟ್ಟಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 14, 2020
in Special Articles
0
ಈಕೆಗೆ ಪ್ರಚಾರದ ಹಂಗಿಲ್ಲ, ಪ್ರಶಸ್ತಿಯ ಅಮಲಿಲ್ಲ: ಯಕ್ಷಲೋಕದಲ್ಲಿ ಮಿನುಗುತ್ತಿರುವ ಉಪನ್ಯಾಸಕಿ ವಿನುತಾ ಗಟ್ಟಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸಾಧನೆಯ ಹಾದಿ ಹತ್ತಿಯ ಹಾಸೂ ಅಲ್ಲ ಹೂವಿನ ಹಾಸಿಗೆಯೂ ಅಲ್ಲ. ಅದು ಕಲ್ಲು ಮುಳ್ಳುಗಳು ತುಂಬಿದ ಅಂಕು ಡೊಂಕುಗಳ ಓಣಿ ಕಣಿವೆಗಳು. ಎಲ್ಲ ಏಳುಬೀಳುಗಳನ್ನು ಎತ್ತರ ತಗ್ಗುಗಳನ್ನು ಸಮರ್ಥವಾಗಿ ದಾಟಿ ಬರಿಗಾಲಿನಿಂದ ಬಣ್ಣದ ಪಾದುಕೆಗಳವರೆಗೆ, ಬರಿ ಕೈಯಿಂದ ಚಿನ್ನದ ಪದಕಗಳವರೆಗೆ, ಬರಿ ಹೊಟ್ಟೆಯಿಂದ ಅನ್ನದಾನದವರೆಗೆ ಯಾರು ಮುಟ್ಟುತ್ತಾನೋ ಅವನೇ ಸಾಧಕ. ಸಾಧನೆಯೂ ಸಿರಿವಂತರ ಸೊತ್ತೂ ಅಲ್ಲ. ಯಾರೊಬ್ಬರ ಸ್ವಂತವೂ ಅಲ್ಲ. ತನ್ನ ಗುರಿಯೆಡೆಗೆ ತಾನು ನೆಟ್ಟ ನೋಟದಿಂದ ಎಲ್ಲವನ್ನೂ ಮೀರಿ, ಎಲ್ಲರನ್ನೂ ಮೀರಿಸಿ ಹೋಗಿ ನಿಲ್ಲುವುದೇ ಸಾಧನೆ.

ನಾವಿಲ್ಲಿ ಪರಿಚಯಿಸ ಹೊರಟಿರುವುದು ಅಂತದೇ ಓರ್ವ ಸಾಧಕಿಯನ್ನು. ಪ್ರಚಾರ ಬಯಸದೆ, ಪ್ರಶಸ್ತಿ ಸನ್ಮಾನಗಳ ಹಿಂದೆ ಓಡದೆ, ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೃತ್ತಿ ಪ್ರವೃತ್ತಿಗಳನ್ನು ಸಮವೃತ್ತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಜೀವದ ಸೆಳೆ ಜೀವಶಾಸ್ತ್ರ ಉಪನ್ಯಾಸಕಿ ಕೈರಂಗಳದ ವಿನುತಾ ಕೆ ಗಟ್ಟಿಯವರು ದಿವಂಗತ ಶಿವರಾಮ ಗಟ್ಟಿ ಹಾಗೂ ಜಯಲಕ್ಷ್ಮಿಯವರ ಸುಪುತ್ರಿ. ತನ್ನ ಪ್ರಾಥಮಿಕ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಕನ್ನಡ ಮಾಧ್ಯಮದಲ್ಲಿ ಪೂರೈಸಿದ ವಿನುತಾರವರು ಎಂಎಸ್’ಸಿ ಪದವೀಧರೆಯಾದ್ದಾರೆ. ಜೊತೆಗೆ ಬಿಎಡ್ ಮಾಡಿರುವ ವಿನುತಾ ಜೀವಶಾಸ್ತ್ರ ಪ್ರಾಧ್ಯಾಪಕಿಯಾಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.

ಎಳವೆಯಲ್ಲೇ ಗಂಡುಕಲೆಯಾದ ಯಕ್ಷಗಾನದ ಬಗ್ಗೆ ಅತೀವ ಒಲವು ಹೊಂದಿದ್ದ ವಿನುತಾರವರಿಗೆ ಕಲಿಯುವ ಅವಕಾಶ ದೊರಕಿದ್ದು ಐದನೆಯ ತರಗತಿಯಲ್ಲಿರುವಾಗ ಅವರ ಶಾಲೆಯಲ್ಲಿ ಆರಂಭವಾದ ಯಕ್ಷಗಾನ ನಾಟ್ಯ ತರಗತಿಯಿಂದ ಎಂದು ನೆನಪಿಸಿಕೊಳ್ಳುತ್ತಾರೆ. ಶ್ರೀಯುತ ಕೃಷ್ಣ ಮೂಲ್ಯ ಕೈರಂಗಳ ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳದ ಸದಸ್ಯರು ಅಂದು ಯಕ್ಷಗುರುಗಳಾಗಿದ್ದರು.

2006ರಲ್ಲಿ ಮೊದಲ ಬಾರಿಗೆ ಪಂಜಜನ ಮೋಕ್ಷದ ಶ್ರೀಕೃಷ್ಣನಾಗಿ ಯಕ್ಷರಂಗ ಏರಿದರು. ಆ ಬಳಿಕ ಆನೆಗುಂಡಿ ಗಣಪತಿ ಭಟ್, ನಾಗೇಶ್ ಆಚಾರ್ಯ ಕೈರಂಗಳ, ಭಾಗವತರಾದ ರಾಜಾರಾಮ ಹೊಳ್ಳರಂತ ಹಲವು ದಿಗ್ಗಜರ ಶಿಷ್ಯೆಯಾಗಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು.

ಎಂಎಸ್’ಸಿ ಮಾಡುವಾಗ ಮಂಗಳೂರು ವಿಶ್ವವಿದ್ಯಾನಿಲಯದ ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಹಲವಾರು ವೇಷ ಮಾಡಿರುವ ಇವರು ಅಲ್ಲಿ ಹೆಚ್ಚಿನ ಹೆಜ್ಜೆಗಾರಿಕೆಯನ್ನು ಕಲಿತೆ ಎನ್ನುತ್ತಾರೆ. ಅಲ್ಲಿಯ ಮುಖ್ಯ ಗುರುಗಳಾದ ಸದಾಶಿವ ಶೆಟ್ಟಿಗಾರ್ ಹಾಗೂ ಶರತ್ ಪೂಜಾರಿ ಅವರನ್ನು ಮರೆಯುವಂತಿಲ್ಲ ಎನ್ನುತ್ತಾರೆ.

ವಿನೂತರವರ ಯಕ್ಷಗಾನ ತಂಡವು ಗ್ರಾಮೀಣ ಪ್ರದೇಶದ ತಂಡವಾದ್ದರಿಂದ ಊರಿನ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಇವರ ತಂಡದ ಯಕ್ಷಗಾನಕ್ಕೆ ಬೇಡಿಕೆ ತುಸು ಜಾಸ್ತಿಯೇ ಇತ್ತು ಎನ್ನಬಹುದು. ಆದ್ದರಿಂದ 2006ರಿಂದ ಇಂದಿನವರೆಗೆ ಕಾಲೇಜು ಜೀವನದ ಜೊತೆಜೊತೆಗೆ ಅವಕಾಶ ಸಿಕ್ಕಾಗಲೆಲ್ಲ ಯಕ್ಷಗಾನದಲ್ಲಿ ಬಣ್ಣ ಹಚ್ಚಿದರೂ ನೂರಕ್ಕೂ ಹೆಚ್ಚು ಪಾತ್ರಗಳಿಗೆ ವಿನುತಾರವರು ಜೀವ ನೀಡಿದ್ದಾರೆ.

ನರಕಾಸುರವಧೆ, ಪಂಚಜನ ಮೋಕ್ಷ, ಕೃಷ್ಣಲೀಲೆ ಪ್ರಸಂಗಗಳಲ್ಲಿ ಕೃಷ್ಣನಾಗಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವವರಲ್ಲಿ ವಿನುತಾರದೇ ಮೇಲುಗೈ.
ಇನ್ನು ತರಣಿಸೇನ ಪ್ರಸಂಗದ ತರಣಿಸೇನ, ಗುರುದಕ್ಷಿಣೆಯ ಏಕಲವ್ಯ ಸೇರಿದಂತೆ ಮದಿರಾಕ್ಷ, ರೂಕ್ಷ, ಸತ್ಯಭಾಮೆ, ಮಾಲಿನಿ, ಶಬರಿ, ಸುದರ್ಶನ, ಚಿತ್ರಾಂಗದೆ, ತ್ರಿಲೋಕ ಸುಂದರಿ, ದೇವೇಂದ್ರ ಹೀಗೆ ಹಲವಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿಯೂ ಇವರದು.

ಕಲೆಯನ್ನು ಆರಾಧಿಸುವ ವ್ಯಕ್ತಿಯಾದ ನಾನು ಯಾವುದೇ ಪ್ರಚಾರಕ್ಕಾಗಲಿ, ನೇಮ್ ಫೇಂಗಾಗಿ ಯಕ್ಷಗಾನ ಮಾಡುತ್ತಿರುವವಳಲ್ಲ. ಕೂಡು ಕುಟುಂಬ ಆದ ನಮ್ಮ ಮನೆಯಲ್ಲಿ ಸಂಪೂರ್ಣ ಸಹಕಾರ ಇದ್ದುದರಿಂದ ಇಲ್ಲಿಯವರೆಗೆ ಯಕ್ಷಗಾನ ಸೇವೆ ಮಾಡಿಕೊಂಡು ಬಂದಿದ್ದೇನೆ. ನನ್ನ ಮುಂದಿನ ಜೀವನದಲ್ಲಿ ಅವಕಾಶ ಸಿಕ್ಕರೆ ಖಂಡಿತ ಮುಂದುವರಿಸುತ್ತೇನೆ. ಒಂದು ವೇಳೆ ಅವಕಾಶ ಸಿಗದಿದ್ದರೆ ಯಕ್ಷಗಾನ ನೋಡಿ ಸಂತಸ ಪಡುತ್ತೇನೆ ಎನ್ನುವ ವಿನುತಾ ಗಟ್ಟಿಯವರು ಎಲೆಯ ಮರೆಯ ಕಾಯಿಯಂತೆ ಉಳಿದಿದ್ದಾರೆ. ಯಾವುದೇ ಪ್ರಶಸ್ತಿ ಸನ್ಮಾನಗಳು ಇವರನ್ನು ಅರಸಿ ಬರಲಿಲ್ಲ. ಆದರೆ ಸಂಪಾಜೆ ಯಕ್ಷೋತ್ಸವ ಸ್ಪರ್ಧೆಯಲ್ಲಿ ವಿನುತಾರವರ ವಿಭೀಷಣನ ಪಾತ್ರಕ್ಕೆ ತೃತೀಯ ಬಹುಮಾನ ಲಭಿಸಿದ್ದು, ಇದು ತನ್ನ ಯಕ್ಷಗಾನದ ಜರ್ನಿಯಲ್ಲಿ ಅವಿಸ್ಮರಣೀಯ ಎನ್ನುತ್ತಾರೆ.

ವೃತ್ತಿಯಲ್ಲಿ ಪ್ರಾಧ್ಯಾಪಕಿ, ಪ್ರವೃತ್ತಿಯಲ್ಲಿ ಯಕ್ಷಬಾಲೆಯಾಗಿರುವ ವಿನುತಾರವರ ಹವ್ಯಾಸಗಳೆಂದರೆ ಓದುವುದು, ಯಕ್ಷಗಾನ ವಿಡಿಯೋಗಳನ್ನು ನೋಡುವುದು ಹಾಗೂ ಅಪರೂಪಕ್ಕೊಮ್ಮೊಮ್ಮೆ ಡಾನ್ಸ್‌ ಮಾಡುವುದು.

ಇಂದಿನ ದಿನಮಾನದಲ್ಲಿ ಪ್ರಶಸ್ತಿ, ಪ್ರಚಾರಕ್ಕಾಗಿ ಕಲೆಯನ್ನು ಅಪ್ಪಿಕೊಳ್ಳುವವರ ಮಧ್ಯೆ ಕಲೆಯನ್ನು ಒಪ್ಪಿಕೊಂಡು, ಆರಾಧಿಸುತ್ತಾ, ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನದಲ್ಲಿ ಭಾರವಾದ ಪೋಷಾಕುಗಳೊಂದಿಗೆ ಗಂಡಸರಂತೆಯೇ ಸಲೀಸಾಗಿ ಲೀಲಾಜಾಲವಾಗಿ ಕುಣಿಯುವ ವಿನುತಾರವರ ಸಾಧನೆಯ ಹಾದಿಗೆ ಅವರ ತಾಯಿ, ಕುಟುಂಬ, ಶಿಕ್ಷಕರು ಹಾಗೂ ಸ್ನೇಹವಲಯದ ಸ್ಫೂರ್ತಿ ಹಾಗೂ ಸಪೋರ್ಟ್ ಇದೆ ಎನ್ನುತ್ತಾರೆ. ಪ್ರಶಂಸೆಯನ್ನು ಹೃದಯಕ್ಕೂ, ದೂಷಣೆಯನ್ನು ತಲೆಗೂ ತೆಗೆದುಕೊಳ್ಳುವ ವಿನುತಾರವರು ಇನ್ನೊಬ್ಬರು ತಪ್ಪನ್ನು ಎತ್ತಿ ತೋರಿಸಿದಾಗ ತಮ್ಮನ್ನು ತಾವು ತಿದ್ದಿಕೊಂಡು ಸಾಗಲು ಸುಲಭ ಎನ್ನುವ ವಿನುತಾರವರ ಜೀವನ ಹಾಗೂ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎನ್ನುವ ಆಶಯ ನಮ್ಮದು.


Get in Touch With Us info@kalpa.news Whatsapp: 9481252093

Tags: KannadaNewsWebsiteLatestNewsKannadaMangaloreSpecialArticleVinuta K GattiYakshaganaಉಪನ್ಯಾಸಕಿಕಲೆಮಂಗಳೂರುಯಕ್ಷಗಾನವಿನುತಾ ಕೆ ಗಟ್ಟಿ
Share379Tweet123Send
Previous Post

ಕೋಲಾರಕ್ಕೂ ವಕ್ಕರಿಸಿದ ಕೊರೋನಾ ಮಾರಿ: ರಾಜ್ಯದಲ್ಲಿ ಒಂದೇ ದಿನ 63 ಪಾಸಿಟಿವ್, ಒಟ್ಟು 925ಕ್ಕೇರಿಕೆ

Next Post

ಜಿಲ್ಲೆಯಲ್ಲಿ ಮೂರು ದಿನದಲ್ಲಿ ನಾಲ್ಕು ಬಾಲ್ಯ ವಿವಾಹ ಪತ್ತೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಜಿಲ್ಲೆಯಲ್ಲಿ ಮೂರು ದಿನದಲ್ಲಿ ನಾಲ್ಕು ಬಾಲ್ಯ ವಿವಾಹ ಪತ್ತೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಅರಸೀಕೆರೆಯಲ್ಲಿ RPF ಆಪರೇಷನ್ ಸತರ್ಕ ಕಾರ್ಯಾಚರಣೆ | ಮದ್ಯದ ಬಾಟಲಿಗಳ ವಶ

ಅರಸೀಕೆರೆಯಲ್ಲಿ RPF ಆಪರೇಷನ್ ಸತರ್ಕ ಕಾರ್ಯಾಚರಣೆ | ಮದ್ಯದ ಬಾಟಲಿಗಳ ವಶ

May 19, 2026
ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

ಮೈಸೂರು | ಅಧಿಕ ಮಾಸೋತ್ಸವ | ಮೇ 20ರಂದು ಕೌಸಲ್ಯಾ – ಅಪ್ರಮೇಯ ಗಾಯನ

May 19, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
ಭಾರತದ ಮೊಟ್ಟ ಮೊದಲ ಬುಲೆಟ್ ಟ್ರೈನ್ ಫಸ್ಟ್ ಲುಕ್ ಹೇಗಿದೆ ನೋಡಿ | ಎಲ್ಲಿಂದ ಎಲ್ಲಿಗೆ?

ಬೆಂಗಳೂರಿಗೆ ಬರಲಿದೆ ಬುಲೆಟ್ ಟ್ರೈನ್ | ಎಲ್ಲೆಲ್ಲಿಗೆ? ಬಿಡುಗಡೆಯಾಯ್ತು ನಕ್ಷೆ

May 19, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ರಸಾಯನಶಾಸ್ತ್ರ ತರಗತಿ ಸಂಸ್ಥಾಪಕ ಶಿವರಾಜ್ ಸಿಬಿಐನಿಂದ ಬಂಧನ

May 19, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL