ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಧ್ಯಾಹ್ನ 2 ಗಂಟೆ ನಂತರ ಲಾಕ್ ಡೌನ್ ಜಾರಿಯಲ್ಲಿದ್ದರೂ ಲೆಕ್ಕಿಸಿದೇ ಅನಾವಶ್ಯಕವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂದಿತು.
ನಗರದ ಮಾಧವಾಚಾರ್ ವೃತ್ತ, ಅಂಡರ್ ಬ್ರಿಡ್ಜ್ ಸೇರಿದಂತೆ ಹಲವು ಕಡೆ ಅರ್ಧ ಬ್ಯಾರಿಕೇಟ್ಸ್ ಹಾಕಲಾಗಿತ್ತು.

ಲಾಕ್ ಡೌನ್ ಜಾರಿಯಲ್ಲಿದ್ದರೂ ಮನೆಗಳಿಂದ ಹೊರಕ್ಕೆ ಬಂದು ತಿರುಗಾಡುತ್ತಿದ್ದ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದ ಪೊಲೀಸರು, ಅನಾವಶ್ಯಕವಾಗಿ ತಿರುಗಾಡದಂತೆ ಎಚ್ಚರಿಕೆ ನೀಡುತ್ತಿದ್ದರು.
ಅಗತ್ಯ ಸೇವೆಗಳು ಹಾಗೂ ಸರ್ಕಾರಿ ಬಸ್, ವಾಹನಗಳ ಹೊರತುಪಡಿಸಿ, ಬೇರಾವುದೇ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿರುವುದಿಲ್ಲ. ಆದರೂ ಯಾತಕ್ಕಾಗಿ ತಿರುಗಾಡುತ್ತಿದ್ದೀರಿ. ಕೊರೋನಾ ವೈರಸ್ ಹರಡುತ್ತಿರುವ ಗಂಭೀರತೆಯನ್ನು ಅರಿತುಕೊಳ್ಳಿ. ಲಾಕ್ ಡೌನ್ ಜಾರಿ ಮಾಡಿರುವುದು ನಿಮ್ಮಗಳ ಒಳ್ಳೆಯದಕ್ಕಾಗಿಯೇ ಅರ್ಥ ಮಾಡಿಕೊಳ್ಳಿ ಎಂದು ಮಾಧವಾಚಾರ್ ಸರ್ಕಲ್’ನಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ವಾಹನ ಸವಾರರಿಗೆ ಬುದ್ದಿ ಹೇಳುತ್ತಿದ್ದ ದೃಶ್ಯ ಕಂಡು ಬಂದಿತು.
Get In Touch With Us info@kalpa.news Whatsapp: 9481252093
















