ಶಿವಮೊಗ್ಗ: ಮತದಾನ ಪ್ರಮಾಣದ ಹೆಚ್ಚಳಕ್ಕೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ, ಕೆಲವು ಖಾಸಗೀ ಸಂಸ್ಥೆಗಳೂ ಸಹ ಇದಕ್ಕೆ ಕೈಜೋಡಿಸಿವೆ.
ಇಂತಹುದ್ದೊಂದು ವಿನೂತನ ಪ್ರಯೋಗಕ್ಕೆ ಶಿವಮೊಗ್ಗದ ಶ್ರೀನಿಧಿ ಟೆಕ್ಸ್’ಟೈಲ್ಸ್’ನಲ್ಲಿ ಮುಂದಾಗಿದೆ.
ಚುನಾವಣೆ ದಿನ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿದರೆ, ನಗರದ ಗೋಪಿ ಸರ್ಕಲ್’ನಲ್ಲಿರುವ ಪ್ರತಿಷ್ಠಿತ ಶ್ರೀನಿಧಿ ಸಿಲ್ಕ್‌್ಸ ಅಂಡ್ ಟೆಕ್ಸ್’ಟೈಲ್ಸ್ ರಿಯಾಯ್ತಿ ಪಡೆಯಬಹುದಾಗಿದೆ.
ಇದಕ್ಕಾಗಿ ಮತದಾನ ಜಾಗೃತಿಗಾಗಿ ತೆರೆದ ವಾಹನವೊಂದನ್ನು ಸಂಚಾರಕ್ಕೆ ಬಳಸಿರುವ ಈ ಸಂಸ್ಥೆ ನಾಗರಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.
ಶ್ರೀನಿಧಿ ಸಂಸ್ಥೆಯ ಈ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ, ಮತದಾನ ಸಂವಿಧಾನ ನೀಡಿದ ಪವಿತ್ರವಾದ ಹಕ್ಕು. ಇದನ್ನು ಚಲಾಯಿಸುವುದರ ಮೂಲಕ ಸಂವಿಧಾನವನ್ನು ಗೌರವಿಸುವಂತಾಗಬೇಕು. ದೇಶದ ಸಾರ್ವಭೌಮತೆ ಎತ್ತಿಹಿಡಿಯಬೇಕು ಎಂದರು.
Discussion about this post