ಬೆಂಗಳೂರು: ಅನಾರೋಗ್ಯದಿಂದ ನಿನ್ನೆ ನಿಧನರಾದ ರಾಜಕಾರಣಿ, ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ರಾಜಕೀಯ ಹಾಗೂ ಚಿತ್ರರಂಗದ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇಂದು ಮುಂಜಾನೆಯಿಂದಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕನ್ನಡ ಮಾತ್ರವಲ್ಲದೇ ದೇಶದ ಹಲವು ಭಾಷೆಗಳ ಚಿತ್ರನಟರು ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಇವರೊಂದಿಗೆ ರಾಜ್ಯದ ರಾಜಕಾರಣಿಗಳ ದಂಡೇ ಹರಿದುಬರುತ್ತಿದೆ.
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಂಠೀರವ ಸ್ಟೇಡಿಯಂ ನಲ್ಲಿ ನಿನ್ನೆ ರಾತ್ರಿ ನಿಧನರಾದ ಖ್ಯಾತ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಚನ್ನಮ್ಮ ಅವರು ಸಹ ಅಂಬರೀಷ್ ಅಂತಿಮ ದರ್ಶನ ಪಡೆದರು.
ಅಂಬರೀಷ್ ಪತ್ನಿ ಸುಮಲತಾ ಹಾಗೂ ಪುತ್ರನನ್ನು ಭೇಟಿಯಾಗಿ ಸಾಂತ್ವನ ಹೇಳಿದರು. pic.twitter.com/Du7Q4xkA6g
— CM of Karnataka (@CMofKarnataka) November 25, 2018
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಸೂಪರ್ ಸ್ಟಾರ್ ರಜನಿಕಾಂತ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್, ಯಡಿಯೂರಪ್ಪ, ಲಕ್ಷ್ಮೀ ವಜ್ರಮುನಿ, ಬಸವರಾಜ್ ಬೊವ್ಮಾಯಿ, ನಿರ್ದೇಶಕ ಎಸ್.ನಾರಾಯಣ್, ನಟಿ ಸುಧಾರಾಣಿ, ಸಚಿವ ಕೆ.ಜೆ. ಜಾರ್ಜ್, ನಿರ್ದೇಶಕ ಟಿ.ಎನ್.ಸೀತಾರಾಮ್, ನಟ ರಾಘವೇಂದ್ರ ರಾಜಕುಮಾರ್, ಅಶೋಕ್ ಖೇಣಿ, ನಟ ಶಿವಕುಮಾರ್, ಪ್ರಕಾಶ್ ರೈ, ನಟಿ ರಶ್ಮಿ, ನಿರ್ದೇಶಕ ಸಾಯಿಪ್ರಕಾಶ್, ನಿರ್ದೇಶಕ ಪ್ರೇಮ್, ಹಿರಿಯ ನಟಿ ಲಕ್ಷ್ಮೀ, ಶಾಸಕ ಗೋಪಾಲಯ್ಯ, ನಟಿ ಶ್ರುತಿ, ರಾಕ್‌ಲೈನ್ ವೆಂಕಟೇಶ್, ನಟ ವಶಿಷ್ಠಸಿಂಹ, ಟಗರು ಖ್ಯಾತಿಯ ಡಾಲಿ ಧನಂಜಯ, ದುನಿಯಾ ವಿಜಯ್, ಮಾಜಿ ಶಾಸಕ ನರೇಂದ್ರಸ್ವಾಮಿ, ನಟಿ ಲೀಲಾವತಿ, ವಿನೋದ್ ರಾಜ್, ಭಾರತಿ ವಿಷ್ಣುವರ್ಧನ್, ನಟ ಅನಿರುದ್ ಸಾ.ರಾ.ಗೋವಿಂದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಚನ್ನಮ್ಮ ದೇವೇಗೌಡ, ನಟಿಯರಾದ ರಾಧಿಕಾ, ಅಂಬಿಕಾ, ನಟ ರಮೇಶ್, ಮಾಳವಿಕ, ಅವಿನಾಶ್, ರಜಿನಿಕಾಂತ್, ಅಭಿನಯ, ಆಶಾಲತಾ, ಶರತ್‌ಕುಮಾರ್, ರವಿಚಂದ್ರನ್, ಪುನೀತ್ ರಾಜಕುಮಾರ್, ಅಜಯ್, ಕೀರ್ತಿರಾಜ್ ಹಾಗೂ ಹಂಸಲೇಖ, ಮೈಸೂರ ರಾಜಮಾತೆ ಪ್ರಮೋದಾದೇವಿ ಒಡೆಯರ್, ನಟ ವಿ. ರವಿಚಂದ್ರನ್ ಸೇರಿದಂತೆ ಗಣ್ಯಾತಿಗಣ್ಯರ ದಂಡು ಕಂಠೀರವ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದೆ.
ದಿವಂಗತ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. pic.twitter.com/PzxxPdMdje
— B.S. Yeddyurappa (@BSYBJP) November 25, 2018
ಇನ್ನು, ತಮಿಳಿನ ಸೂಪರ್ ಸ್ಟಾರ್ ಹಾಗೂ ಅಂಬರೀಶ್ ಅವರ ಆಪ್ತಮಿತ್ರ ರಜನೀಕಾಂತ್ ತಮ್ಮ ಸ್ನೇಹಿತನ ಪಾರ್ಥಿವ ಶರೀರ ಕಂಡು ಭಾವುಕರಾದರು. ಉಮ್ಮಳಿಸಿ ಬಂದ ದುಃಖ ತಡೆಯಲಾಗದೇ ಕಣ್ಣೀರುಗರೆದರು.
ತೆಲುಗಿನ ದಿಗ್ಗಜರಾದ ಮೋಹನ್ ಬಾಬು, ಬಾಲಕೃಷ್ಣ , ಜೂನಿಯರ್ ಎನ್.ಟಿ.ಆರ್. ಹಾಗೂ ಇತರ ಪ್ರಮುಖ ಕಲಾವಿದರು ಇಂದು ಬೆಂಗಳೂರಿಗೆ ಆಗಮಿಸಿ ಅಗಲಿದ ತಮ್ಮ ಮೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸಿದರು.
Discussion about this post