ಕಲ್ಪ ಮೀಡಿಯಾ ಹೌಸ್ | ವಾಷಿಂಗ್ಟನ್ |
ಈ ವರ್ಷಾಂತ್ಯದಲ್ಲಿ ಕೋವಿಡ್‌ನಿಂದ ಮುಕ್ತಿ ಸಿಗಲಿದೆ. ಈ ಸಾಂಕ್ರಾಮಿಕ ಪಿಡುಗು ಸದ್ಯದಲ್ಲೇ ಕೊನೆಗಾಣಲಿದೆ ಎಂದು ವಾಷಿಂಗ್ಟನ್‌ನಲ್ಲಿರುವ ತಜ್ಞವೈದ್ಯ ಕುತುಬ್ ಮೊಹ್ಮದ್ ಸುಳಿವು ನೀಡಿದ್ದಾರೆ.
ಹೌದು… ಪ್ರಪಂಚದಾದ್ಯಂತ ಕೋವಿಡ್ ಅಬ್ಬರ ಆತಂಕ ಸೃಷ್ಟಿಸಿರುವ ಬೆನ್ನಲ್ಲೆ ಈ ಸಾಂಕ್ರಾಮಿಕ ಪಿಡುಗು ಸದ್ಯದಲ್ಲೇ ಕೊನೆಗಾಣಲಿದೆ ಎಂಬ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.
ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಕೋವಿಡ್‌ನಿಂದ ಮುಕ್ತಿ ಪಡೆಯಲು ಲಸಿಕೆಯೊಂದೇ ಬಲಿಷ್ಠ ಅಸ್ತ್ರವಾಗಿದೆ. ಚೆಸ್ ಆಟದಲ್ಲಿ ಯಾರೂ ಕೂಡ ಗೆಲ್ಲುವುದಿಲ್ಲ. ಇದು ಡ್ರಾ ಆಗಲಿದೆ. ಅದೇ ರೀತಿ ಸೋಂಕಿನ ಆರ್ಭಟ ಅಡಗಲಿದೆ. ನಾವು ಮಾಸ್ಕ್‌ನಿಂದ ಹೊರ ಬಂದು ಗೆಲುವು ಸಾಧಿಸುತ್ತೇವೆ. ಹೀಗಾಗಿ, ಆಶಾಭಾವನೆಯಿಂದ ಮುನ್ನುಗ್ಗಬೇಕು. ಸದ್ಯಕ್ಕೆ ಎಲ್ಲವೂ ಮುಗಿಯಲಿದೆ ಎಂದು ಕುತುಬ್ ಮೊಹ್ಮದ್ ಆಶಾಭಾವ ವ್ಯಕ್ತಪಡಿಸಿದ್ದಾರೆ.
ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತಿದ್ದು, ಇದಕ್ಕೆ ಹೊಂದಿಕೊಳ್ಳಲು ಸೋಂಕಿನ ಮೇಲೆ ಒತ್ತಡವಾಗುತ್ತಿದೆ. ಹೀಗಾಗಿ, ರೂಪಾಂತರಿಗಳನ್ನು ಸೃಷ್ಟಿ ಮಾಡುತ್ತದೆ. ಇದೊಂದು ರೀತಿ ಆಟವಾಗಿದ್ದು, ನಾವು ನಮ್ಮ ಹೋರಾಟವನ್ನು ಮುಂದುವರೆಸಬೇಕು ಎಂದು ಹೇಳಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಇದರ ಜತೆಗೆ ಲಸಿಕೆಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಬೇಕು. ಹಾಗೆಂದ ಮಾತ್ರಕ್ಕೆ ರೂಪಾಂತರಿ ಬಂದರೂ ಅಚ್ಚರಿ ಇಲ್ಲ. ಇದಕ್ಕೆಲ್ಲ ಲಸಿಕೆಯೊಂದೇ ದಾರಿ. ಆದ್ದರಿಂದ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತದ ಲಸಿಕೆ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಇದೊಂದು ದೇಶದ ಮತ್ತು ಲಸಿಕೆ ಉತ್ಪಾದಕ ಸಂಸ್ಥೆಯ ಅಭೂತಪೂರ್ವ ಸಾಧನೆಯಾಗಿದೆ. ಭಾರತದಲ್ಲಿ ಈಗಾಗಲೇ ಶೇ.೬೦ರಷ್ಟು ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸಿರುವುದನ್ನು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post