ನವದೆಹಲಿ: ರನ್ ವೇನಲ್ಲಿ ಇಳಿಯಬೇಕಿದ್ದ ವಿಮಾನವೊಂದು ಅಚಾನಕ್ ಆಗಿ ಹುಲ್ಲುಗಾವಲಿನಲ್ಲಿ ಇಳಿದಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
180 ಪ್ರಯಾಣಿಕರಿದ್ದ ಗೋ ಏರ್ ಏರೊಪ್ಲೇನ್ಸ್’ಗೆ ಸೇರಿದ ಎ320 ವಿಮಾನವೊಂದು ನಾಗ್ಪುರದಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಪೂರ್ವ ನಿಗದಿಯಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್’ವೇನಲ್ಲಿ ಇಳಿಯುವ ವೇಳೆ ಏರ್’ಸ್ಟ್ರಿಪ್ ಬದಲಾಗಿ ಹುಲ್ಲುಗಾವಲಿನ ಪ್ರದೇಶಕ್ಕೆ ವೇಗವಾಗಿ ನುಗ್ಗಿದೆ. ಇದರಿಂದ ಇದರಿಂದ ಎಚ್ಚೆತ್ತ ಪೈಲಟ್ ತತಕ್ಷಣವೇ ವೇಗವನ್ನು ಹೆಚ್ಚಿಸಿ, ಟೇಕಾಫ್ ಮಾಡಿದ್ದರಿಂದ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಟೇಕಾಫ್ ಆದನಂತರ ವಿಮಾನ ನಿಲ್ದಾಣದ ಸುತ್ತಲೂ ಕೆಲಕಾಲ ಹಾರಾಡಿಸಿ, ರನ್ ವೇನಲ್ಲಿ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಪ್ರತಿಕೂಲ ಹವಾಮಾನದ ಪರಿಣಾಮ ಇಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನವೆಂಬರ್ 11ರಂದು ಈ ಘಟನೆ ನಡೆದಿದೆ.
Yes the flight missed the runway but it didn’t land there … The pilot saved us by taking off and ultimately landing in Hyderabad. I was on that flight. pic.twitter.com/u8ha2HVX1k
— Shafeeq Hamza (@shamza) November 14, 2019
ಇದೇ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಇದರ ವೀಡಿಯೋ ಮಾಡಿ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದು, ಅದೃಷ್ಠವಶಾತ್ ನಾವು ಪಾರಾಗಿದ್ದೇವೆ ಎಂದು ಅನುಭವ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಗೋ ಏರ್ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಘಟನೆಗೆ ಕಾರಣವಾದ ಪೈಲಟನ್ನು ಅಮಾನತು ಮಾಡಲಾಗಿದೆ ಎಂದಿದೆ.
ಇನ್ನು ಸಿವಿಲ್ ಏವಿಯೇಷನ್ ರೆಗ್ಯುಲೇಟರ್, ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದೆ.
Discussion about this post