ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸುಮಾರು ವರ್ಷಗಳ ಕನಸು ನನಸಾಗಿದ್ದು, ಇದಕ್ಕೆ ಶಾಸಕರಾದ ಟಿ. ರಘುಮೂರ್ತಿಯವರ ಶ್ರಮ ಫಲಿಸಿದೆ ಎಂದು ನಗರಂಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಸಿ. ಸತೀಶ ಮೂರ್ತಿ ಹೇಳಿದರು.
ನಗರಸಭೆಯ ಸಭಾಂಗಣದಲ್ಲಿ ಶಾಸಕ ಟಿ. ರಘುಮೂರ್ತಿ ಅವರಿಗೆ ಪುಷ್ಪ ಮಾಲೆಯನ್ನು ಹಾಕಿ, ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರಕ್ಕೆ ಕುಡಿಯುವ ನೀರು ಒದಗಿಸುವ ಸಲುವಾಗಿ ವಾಣಿವಿಲಾಸ ಸಾಗರದಿಂದ ಚಳ್ಳಕೆರೆಗೆ 0 2.5 ಟಿಎಂಸಿ ನೀರು ಹರಿಸಲು ಅದೇಶ ನೀಡಲಾಗಿತ್ತು. ಅದರಂತೆ ಎ.23ರಂದು ವೇದವತಿ ನದಿಗೆ ವಿವಿ ಸಾಗರ ಜಲಾಶಯದಿಂದ ನೀರು ಹರಿಸಲಾಗಿದೆ. ಶಾಸಕರು ಈ ವಿಚಾರದಲ್ಲಿ ಉತ್ತಮ ಕಾರ್ಯಮಾಡಿ ಕ್ಷೇತ್ರದ ಜನತೆಗೆ ಅಷ್ಟೆ ಅಲ್ಲದೇ, ವಿವಿ ಜಲಾಶಯದಿಂದ ಹರಿಯುವ ವೇದವತಿ ನದಿಯ 60 ಕಿಲೋ ಮೀಟರ್ ನದಿ ಪಕ್ಕದ ಜನತೆಗೆ ಬರಗಾಲದಲ್ಲಿ ನೀರು ಸಿಕ್ಕಿರುವುದು ಆಕರ್ಷದಾಯಕವಾಗಿದೆ. ಶಾಸಕರು ಸತತ ಪ್ರಯತ್ನಕ್ಕೆ ಇಂದು ಪ್ರತಿಫಲ ಸಿಕ್ಕಿದೆ ನೀರು ತರಲು ಕಾರಣಕರ್ತರಾದ ಶಾಸಕ ಟಿ. ರಘುಮೂರ್ತಿಯವರಿಗೆ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.
ನಗರಸಭೆ ಸದಸ್ಯರಾದ ವೈ. ಪ್ರಕಾಶ, ರಮೇಶ ಗೌಡ, ಪೌರಯುಕ್ತ ಪಾಲಯ್ಯ, ನಗರಂಗೆರೆ ವಿಎಸ್’ಎಸ್’ಎನ್ ಅಧ್ಯಕ್ಷ ಕುಮಾರಸ್ವಾಮಿ, ಸಿದ್ದಾಪುರ ಕಾಂಗ್ರೆಸ್ ಮುಖಂಡರಾದ ಶೇಖರಪ್ಪ, ಕೃಷ್ಣ, ರೈತರು, ಮುಖಂಡರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093















