ಶಿವಮೊಗ್ಗ: ಇಲ್ಲಿನ ಹೊಸಮನೆ ಬಡಾವಣೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸಾರ್ವಜನಿಕರು ದಿಗ್ಭಂದನ ವಿಧಿಸಿ, ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಶಿವಮೊಗ್ಗ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರನ್ನು ಮಹಾನಗರ ಪಾಲಿಕೆ ಎಲ್ಲ ಬಡಾವಣೆಯಲ್ಲೂ ನೀಡುತ್ತಿದೆ. ಆದರೆ ನೀರು ಸರಬರಾಜು ಮಾಡುವ ಸಿಬ್ಬಂದಿಗಳೇ ಇಂದು ಹೊಸಮನೆ ಬಡಾವಣೆಯಲ್ಲಿ ತಮಗೆ ಬೇಕಾದವರಿಗೆ ಲೋಡುಗಟ್ಟಲೆ ನೀರನ್ನು ಒಂದೇ ಮನೆಗೆ ಸರಬರಾಜನ್ನು ಮಾಡಿದ್ದಾರೆ.
ಎಂದು ಆರೋಪಿಸಿರುವ ಸ್ಥಳೀಯರು, ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಹಾಗೂ ಕಾಂಗ್ರೆಸ್ ಮುಖಂಡ ಕೆ. ರಂಗನಾಥ್ ನೇತೃತ್ವದಲ್ಲಿ ಪ್ರತಿಭಟಿಸಿ ವಾಟರ್ ಟ್ಯಾಂಕರ್ ಲಾರಿಯನ್ನು ತಡೆದು ಹಾಗೂ ಅಧಿಕಾರಿಗಳಾದ ಸಿದ್ದಪ್ಪ ಹಾಗೂ ಬಲರಾಮ ಅವರನ್ನು ತರಾಟೆಗೆ ತೆಗೆದುಕೊಂಡರು.
ಕುಡಿಯಲಿಕ್ಕೆ ಎರಡು ಕೊಡಪಾನ ನೀರು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನೀವು ನಿಮಗೆ ಬೇಕಾದವರಿಗೆ ಟ್ಯಾಂಕರ್’ಗಳಲ್ಲಿ ಮನೆಗಳಿಗೆ ನೀರು ಕಲ್ಪಿಸಿ ಕೊಡುವುದು ಎಷ್ಟರ ಮಟ್ಟಿಗೆ ಸರಿ? ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಿಗೂ ಗಮನಕ್ಕೆ ಬಾರದೆ ತಾವೇ ತಮಗೆ ಬೇಕಾದವರಿಗೆ ನೀರನ್ನು ಕೊಡುತ್ತಾ ಮಹಾನಗರ ಪಾಲಿಕೆಯ ಸದಸ್ಯರಿಗೆ ಅವಮಾನಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆಯಾದರೆ ಆಗುವಂತಹ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಭಾಗ್ಯಮ್ಮ, ಪುಟ್ಟಮ್ಮ, ನಾಗರತ್ನ, ಲಕ್ಷ್ಮೀ ನಾಗರಾಜ್, ಮಂಜುನಾಥ್, ನಾರಾಯಣ, ಪ್ರಜ್ವಲ್, ಪವನ್, ವಿನಯ್ ಕಿರಣ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಗಿರೀಶ್ ಇತರರು ಇದ್ದರು.
Discussion about this post