ಬೆಂಗಳೂರು: ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡುವ ವೀರಯೋಧರು ನಮಗೆ ಆದರ್ಶರಾಗಿರಬೇಕು ಎಂದು ಬಿಜೆಪಿ ಎಸ್’ಡಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ. ರಾಮು ಅಭಿಪ್ರಾಯಪಟ್ಟರು.
ಮಹೇಶ್ ಲಲಿತಕಲಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಮಲಾ ನರಗದ ಪ್ರಭಾತ್ ರಂಗಮಂದಿರದಲ್ಲಿ ಏರ್ಪಡಿಸಿದ್ದ ‘ಹುತಾತ್ಮ ಯೋಧರ ಸ್ಮರಣೆಗಾಗಿ ಸಂಗೀತ ನೃತ್ಯ ನಮನ’ ಹಾಗೂ ನಾಡಿಗೆ ಕೊಡುಗೆ ನೀಡಿದ ಮಹನೀಯರಿಗೆ ‘ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಗಲು-ರಾತ್ರಿ ಎನ್ನದೇ ನಮ್ಮ ದೇಶ ಕಾಯುವ ವೀರ ಯೋಧರ ಸೇವೆಯ ಸ್ಮರಣೆಗಾಗಿ ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆದು ಮಕ್ಕಳಲ್ಲಿ ಸ್ಫೂರ್ತಿ ತುಂಬುವಂತೆ ಮಾಡಬೇಕು. ಮಕ್ಕಳ ಸಂಗೀತ- ನೃತ್ಯದ ಮೂಲಕ ದೇಶಭಕ್ತಿ ತರುವಂತಹ ಪ್ರಯತ್ನ ಯಶಸ್ವಿಯಾಗಲಿ ಎಂದು ಆಶಿಸಿದರು.
ಸಮಾರಂಭದ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದ ಕುಪ್ಪೂರು ಷ. ಬ್ರ. ಡಾ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಯೋಧರ ಸ್ಮರಣೆಗಾಗಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ವಿಶೇಷ ಹಾಗೂ ವಿಭಿನ್ನ ಎಂದರು.
ಪರಿಸರ ಪ್ರೇಮಿ ಡಾ. ಈಶ್ವರ್ ಎಸ್. ರಾಯುಡು, 515 ಆರ್ಮಿ ದಾಲರ್ ವೆಂಕಟೇಶ್ವರುಲು, ಸಮಾಜ ಸೇವಕ ಎ. ವೆಂಕಟೇಶ್, ಉತ್ತರ ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಿ ಹಿರೇಮಠ್, ವೀರಶ್ಯೆವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರು ಮತ್ತು ಲಯನ್ಸ್ ಕ್ಲಬ್ ಡಿಸ್ಟಿಕ್ ಚೇರ್ ಪರ್ಸನ್ ಲಯನ್ ಡಿ. ಪಿಲಿಪ್ಸ್ ರಾಜು ಅವರಿಗೆ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾರುತಿ ಮೆಡಿಕಲ್ಸ್ ಮಹೇಂದ್ರ ಮುನೋತ್, ಬಿಬಿಎಂಪಿ ಸದಸ್ಯ ಎಂ. ಶಿವರಾಜ್, ಮಹೇಶ್ ಲಲಿತಕಲಾ ಸಂಸ್ಥೆಯ ನಿರ್ದೇಶಕರಾದ ಟಿ. ಮಹೇಶ್ ಕುಮಾರ್ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.
Discussion about this post