No Result
View All Result
SWR to run special trains for Good Friday, Easter rush
English Articles

Regulation, Diversion and Rescheduling of Trains in the Solapur–Wadi Section

by ಕಲ್ಪ ನ್ಯೂಸ್
June 1, 2026
0

Kalpa Media House  |  Hubballi  | Due to technical works being carried out in the Solapur–Wadi section, temporary regulation, diversion...

Read moreDetails
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
  • Advertise With Us
  • Grievances
  • About Us
  • Contact Us
Tuesday, June 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-3 ವಿಷ್ಣು ಪುರಾಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 28, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-3 ವಿಷ್ಣು ಪುರಾಣ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವಿಷ್ಣು ಪ್ರಾಧಾನ್ಯ ನಿರೂಪಣೆ ಇದರ ಉದ್ದೇಶ. ಇದರ ಆರು ಖಂಡಗಳಲ್ಲಿ ವಸಿಷ್ಠನ ಮೊಮ್ಮಗನಾದ ಪರಾಶರ ತನ್ನ ಶಿಷ್ಯನಾದ ಮೈತ್ರೇಯನಿಗೆ ಸೃಷ್ಟ್ಯಾದಿ ವಿವಿಧ ವಿಷಯಗಳನ್ನು ತಿಳಿಸುತ್ತಾನೆ. ಮೊದಲು ವಿಷ್ಣು ಸ್ತುತಿ ಬರುತ್ತದೆ. ಆಮೇಲೆ ಸರ್ವಸಾಧಾರಣವಾದ ಪೌರಾಣಿಕ ರೀತಿಯ ಸೃಷ್ಟಿ ವಿವರಣೆ, ಸಾಂಖ್ಯತತ್ತ್ವ ವಿಚಾರ, ವಿವಿಧ ದೇವದಾನವ ಕಥೆಗಳು, ಹಳೆಯ ರಾಜರ ಮತ್ತು ಋಷಿಗಳ ವೃತ್ತಾಂತಗಳು ಬರುತ್ತದೆ. ಸಮುದ್ರ ಮಥನ, ಲಕ್ಷ್ಮಿಯ ಉದಯ, ಧ್ರುವೋಪಾಖ್ಯಾನ, ಪ್ರಹ್ಲಾದನ ಕತೆ ಮೊದಲಾದುವು ಕತೆಗಳಲ್ಲಿ ಗಣ್ಯ.

ಎರಡನೆಯ ಖಂಡದ ಮೊದಲ ಅಧ್ಯಾಯಗಳಲ್ಲಿ ಭೂವಿವರಣೆಯ ಕಲ್ಪನಾವಿಲಾಸ ಕಾವ್ಯಮಯವಾಗಿ ಬಂದಿವೆ. ನಾಗ, ನಾಕ, ನರಕ ಲೋಕಗಳ ವೈಚಿತ್ರ್ಯವನ್ನೂ ಇಲ್ಲಿ ಕಾಣಬಹುದು. ಕಲ್ಪನಾಭೃಂಗದ ಬೆನ್ನೇರಿ ಗುಹ್ಯ, ನಕ್ಷತ್ರ, ಗ್ರಹಲೋಕಗಳಿಗೂ ಹೋಗಬಹುದು. ಒಂದು ತಾತ್ತ್ವಿಕ ಸಂವಾದಕ್ಕೆ ಉಪೋದ್ಘಾತರೂಪ ವಾಗಿ ಜಡಭರತಮುನಿಯ ಕತೆ, ಋಭು ಮತ್ತು ನಿಠಾಪುರ ಕತೆ ಬಂದಿದೆ. ಮೂರನೆಯ ಖಂಡದಲ್ಲಿ ಮನು, ಮನ್ವಂತರಗಳ ವಿವರಗಳೂ ಚತುರ್ವೇದ ವಿಚಾರವೂ ಅಷ್ಟಾದಶಪುರಾಣಗಳ ಮತ್ತು ವಿವಿಧ ಶಾಸ್ತ್ರಗಳ ಉಲ್ಲೇಖ ತುಂಬಿದೆ.

ಇಷ್ಟಲ್ಲದೆ ಯಮ, ಯಮದೂತರ ಒಂದು ಸುಂದರ ಸಂವಾದ, ವರ್ಣಾಶ್ರಮಧರ್ಮ, ಶ್ರಾದ್ಧಕರ್ಮ, ಜೈನ, ಬೌದ್ಧಮತ ವಿಡಂಬನೆಗಳು ಯಥೇಚ್ಛವಾಗಿವೆ. ನಾಲ್ಕನೆಯ ಖಂಡದಲ್ಲಿ ಪ್ರಸಿದ್ಧ ಪ್ರಾಚೀನ ರಾಜರ ವಂಶಾವಳಿ, ದಕ್ಷ, ಇಳೆ, ಇಕ್ಷ್ವಾಕು, ರೈವತ, ರೇವತಿ, ಯೌವನಾಶ್ವ, ಮಾಂಧಾತೃ, ಸೌಭರಿ, ಪುರೂರವ, ಊರ್ವಶಿ, ಯಯಾತಿ, ರಾಮ, ಪಾಂಡವ, ಕೃಷ್ಣ-ಮುಂತಾದವರ ಕಥೆಗಳು ಮತ್ತು ಮುಂದಿನ ಮಗಧರಾಜರಾದ ಶೈಶುನಾಗ, ನಂದ, ಮೌರ್ಯ, ಸುಂಗ, ಕಾಣ್ವಾಯನ, ಆಂಧಭೃತ್ಯ, ಮ್ಲೇಚ್ಛ, ಕಲ್ಕಿಗಳ ವೃತ್ತಾಂತಗಳು ನಿವೃತವಾಗಿವೆ.

ಐದನೆಯ ಖಂಡದಲ್ಲಿ ಕೃಷ್ಣನ ಜೀವನೇತಿಹಾಸ ವಿಸ್ತಾರವಾಗಿ ವರ್ಣಿತವಾಗಿದೆ. ಕೊನೆಯ ಖಂಡ ಕೃತ, ತ್ರೇತ, ದ್ವಾಪರ, ಕಲಿಯುಗಗಳ ಹಾಗೂ ಪ್ರಳಯದ ವಿವರಗಳಿಂದಲೂ ಸಂಸಾರಚಕ್ರದ ಕ್ಲೇಶಗಳಿಂದಲೂ ಮುಕ್ತಿಯ ಪ್ರಾಶಸ್ತ್ಯದಿಂದಲೂ ಅದಕ್ಕೆ ಅಗತ್ಯವಾದ ಯೋಗದ ವಿವರಣೆಯಿಂದಲೂ ಇಡೀ ಪುರಾಣದ ವಿಷಯಗಳ ಪುನಃಸ್ಮರಣೆ ಮತ್ತು ವಿಷ್ಣುಸ್ತುತಿಗಳಿಂದಲೂ ಕೂಡಿದೆ. ಪುರಾಣದ ಶ್ಲೋಕ ಸಂಖ್ಯೆ 23,000 ಎಂಬ ಹೇಳಿಕೆಯಿದ್ದರೂ ಸದ್ಯ ಕಂಡುಬರುವುದು 7,000 ಶ್ಲೋಕಗಳು ಮಾತ್ರ. ಕಾಲ ಪ್ರ.ಶ. 3ನೆಯ ಶತಮಾನ ಎನ್ನುತ್ತಾರೆ.

ವಿಷ್ಣುಪುರಾಣದ ಸೃಷ್ಟಿಕ್ರಮದ ವಿವರಣೆ ಹೆಚ್ಚು ಸ್ಥೂಲವಾಗಿ ಹೀಗಿದೆ: ವಿಷ್ಣು ಮೊದಲು ಪುರುಷನಾದ. ಅವ್ಯಕ್ತ ವ್ಯಕ್ತ ಮತ್ತು ಕಾಲಗಳು ಅವನ ಆಮೇಲಿನ ಮೂರು ಆವಿರ್ಭಾವಗಳು. ಅವ್ಯಕ್ತ, ಪ್ರಕೃತಿ ಅಥವಾ ಪ್ರಧಾನ ಎಂಬುದು ಸದಸದಾತ್ಮಕ ಮತ್ತು ತ್ರಿಗುಣಯುಕ್ತ. ಪುರುಷ, ಪ್ರಕೃತಿಗಳನ್ನು ಸೃಷ್ಟಿಕಾಲದಲ್ಲಿ ಕೂಡಿಸುವ ಮತ್ತು ಲಯಕಾಲದಲ್ಲಿ ಬಿಡಿಸುವ ಕಾಲದ ಅಸ್ತಿತ್ವ ವಾಸ್ತವಿಕ ಮತ್ತು ಅನಾದಿ. ಬ್ರಹ್ಮನುವಿಷ್ಣುವಿನ ವ್ಯಕ್ತರೂಪ. ಮೂಲಕಾರಣನಾದ ವಿಷ್ಣು ಶುದ್ಧ ಅಸ್ತಿತ್ವದ ರೂಪದಲ್ಲಿರುವುದರಿಂದ ವಾಸುದೇವ ಎನ್ನಿಸುತ್ತಾನೆ.

ಎಲ್ಲವೂ ವಿಷ್ಣುವೇ, ಎಲ್ಲದಕ್ಕೂ ಅವನೇ ಒಡೆಯ. ಸೃಷ್ಟಿಕಾಲದಲ್ಲಿ ಕೋಭ್ಯರೆನ್ನಿಸುವ ಪುರುಷ ಪ್ರಕೃತಿಗಳೂ ಸ್ವಸಂಕಲ್ಪದಿಂದ ಆಗ ಅವರಲ್ಲಿ ಹೋಗುವ ಕ್ಷೋಭನೂ ಅವನೇ ಆಗಿದ್ದಾನೆ. ಪ್ರಕೃತಿಯಿಂದ ಮಹತ್ತು ಹುಟ್ಟಿ ಆವೃತವಾಗುತ್ತದೆ. ಆವರಣ ಬಲದಿಂದ ಅದು ಸಾತ್ತ್ವಿಕ, ರಾಜಸ, ತಾಮಸ ಎಂದು ಮೂರು ವಿಧವಾಗಿ ವಿಂಗಡಗೊಳ್ಳುತ್ತದೆ. ತ್ರಿವಿಧವಾದ ಈ ಮಹತ್ತತ್ತ್ವದಿಂದ ವೈಕಾರಿಕ, ತೈಜಸ ಭೂತಾದಿ ಎಂಬ ಮೂರು ಬಗೆಯ ಅಹಂಕಾರಗಳು ಉದಯಿಸುತ್ತವೆ.

ಮಹತ್ತಿನಿಂದ ಆವೃತವಾದ ಭೂತಾದ್ಯಹಂಕಾರದಿಂದ ಶಬ್ದತನ್ಮಾತ್ರವೂ ಅದರಿಂದ ಆಕಾಶವೂ ಜನಿಸುತ್ತವೆ. ಭೂತಾದಿಯಿಂದ ಆವೃತವಾಗಿ ಆ ಮೂಲಕ ಶಬ್ದತನ್ಮಾತ್ರದಿಂದ ಭಿನ್ನವಾದ ಆಕಾಶ ಸ್ಪರ್ಶತನ್ಮಾತ್ರವನ್ನೂ ಅದು ವಾಯುವನ್ನೂ ಹೊಡೆಯುತ್ತವೆ. ಇದೇ ಮೇರೆಗೆ ವಾಯುವಿನಿಂದ ರೂಪ (ಬಣ್ಣ) ತನ್ಮಾತ್ರ, ಅದರಿಂದ ಜ್ಯೋತಿಯಿ (ಕಾವು, ಬೆಳಕು), ಜ್ಯೋತಿಯಿಂದ ರಸತನ್ಮಾತ್ರ, ಅದರಿಂದ ಜಲ, ಜಲದಿಂದ ಗಂಧತನ್ಮಾತ್ರ, ಗಂಧತನ್ಮಾತ್ರದಿಂದ ಭೂಮಿ (ಮಣ್ಣು) ಉಂಟಾದುವು.

ತೈಜಸಾಹಂಕಾರದಿಂದ ಕರ್ಮ, ಜ್ಞಾನೇಂದ್ರಿಯಗಳ ದಶಕವೂ ವೈಕಾರಿಕಾಹಂಕಾರದಿಂದ ಮನಸ್ಸೂ (ಮನ+ಬುದ್ಧಿ+ಅಹಂಕಾರ+ಚಿತ್ತ) ಉದಯಿಸುತ್ತವೆ. ಜಗತ್ತನ್ನು ಹೊರಗಿನಿಂದ ಜಲ, ಅಗ್ನಿ, ವಾಯು, ಆಕಾರ, ಭೂತಾದಿ ಮಹದವ್ಯಕ್ತಗಳು ಅನುಕ್ರಮವಾಗಿ ಸುತ್ತುವರಿದಿವೆ. ಜಗತ್ತು ಅಥವಾ ಪ್ರಪಂಚವೆಂದರೆ ತೈಜಸಾಹಂಕಾರದಿಂದ ಹುಟ್ಟಿದ ದಶೇಂದ್ರಿಯ, ಮನ, ಪಂಚತನ್ಮಾತ್ರ, ಅಹಂಕಾರ ಮತ್ತು ಮಹತ್ತುಗಳ ಏಕೀಕೃತವೂ ಸಮನ್ವಿತವೂ ಆದ ಚರಾಚರಾತ್ಮಕ ಮೊಟ್ಟೆ. ಈ ಮೊಟ್ಟೆಯ ವಿಕಸಿತರೂಪವೇ ವಿಷ್ಣುವಿನ ಶರೀರವೆನ್ನಿಸುವ ಬ್ರಹ್ಮ. ಬ್ರಹ್ಮ-ವಿಷ್ಣು-ರುದ್ರಾತ್ಮಕನಾಗಿ ವಿಷ್ಣು ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುತ್ತಾನೆ. ಅಂದರೆ ಆತ ಆದಿಕಾರಣನಾದ ಪರಬ್ರಹ್ಮ. ಈ ಬಗೆಯ ಸಾಂಖ್ಯವಿಚಾರಗಳು ವಿಷ್ಣುಪುರಾಣದಲ್ಲಿವೆ.


Get in Touch With Us info@kalpa.news Whatsapp: 9481252093

Tags: 18 Puranas18 ಪುರಾಣDr Gururaj PoshettihalliHindu MythologyKannadaNewsWebsiteLatestNewsKannadaLord VishnuVishnu Puranaಡಾ.ಗುರುರಾಜ ಪೋಶೆಟ್ಟಿಹಳ್ಳಿವಿಷ್ಣು ಪುರಾಣ
Share214Tweet123Send
Previous Post

ಮಕರ ಗುರುವಿನ ಜಾಗತಿಕ ಭವಿಷ್ಯದೊಳಗೆ ಭಾರತದ ಪಾತ್ರ ಏನಿರಬಹುದು? ವೈಜ್ಞಾನಿಕ ಜ್ಯೋತಿಷ್ಯ ವಿಶ್ಲೇಷಣೆ

Next Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-4 ವಾಯು ಪುರಾಣ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ? ದಿನಕ್ಕೊಂದರ ಬಗ್ಗೆ ತಿಳಿಯಿರಿ: ಮಾಲಿಕೆ-4 ವಾಯು ಪುರಾಣ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
SWR to run special trains for Good Friday, Easter rush

ಚಿಕ್ಕಮಗಳೂರು-ಯಶವಂತಪುರ, ಬೆಂಗಳೂರು-ಹೊಸಪೇಟೆ ಸೇರಿ ಹಲವು ರೈಲುಗಳ ಬಿಗ್ ಅಪ್ಡೇಟ್

June 2, 2026
ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್

ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್

June 2, 2026
ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

June 2, 2026
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ

June 2, 2026
ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ

ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ

June 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL