ಕಲ್ಪ ಮೀಡಿಯಾ ಹೌಸ್ | ಮೈಸೂರು |
ದೆಹಲಿ ಚುನಾವಣೆಯಲ್ಲಿ ಸೋತ ಅರವಿಂದ ಕೇಜ್ರಿವಾಲ್’ಗೂ, ಮೈಸೂರು #Mysore ಉದಯಗಿರಿಯಲ್ಲಿನ ಪುಂಡರಿಗೂ ಏನು ಸಂಬಂಧ? ಅವರು ಅಲ್ಲಿ ಸೋತರೆ ಇವರಿಗೆ ಇಲ್ಲೇಕೆ ಸಿಟ್ಟು ಎಂದು ಮಾಜಿ ಎಂಪಿ ಪ್ರತಾಪ್ ಸಿಂಹ #PratapSimha ಪ್ರಶ್ನಿಸಿದ್ದಾರೆ.
ಉದಯಗಿರಿಯಲ್ಲಿ #Udayagiri ಪೊಲೀಸ್ ಠಾಣೆಯ ಮೇಲೆ ದೌರ್ಜನ್ಯ ನಡೆಸಿ, ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Also Read>> ಸತತ ಪ್ರಯತ್ನದ ಫಲದಿಂದ ನಿರ್ದಿಷ್ಟವಾದ ಗುರಿ ಮುಟ್ಟಲು ಸಾಧ್ಯ: ಪ್ರಾಚಾರ್ಯ ಡಾ. ಶಿವಕುಮಾರ್ ಅಭಿಮತ
ಮೈಸೂರಿನಲ್ಲಿ ಈ ಹಿಂದೆಯೂ ಸಹ ಪೊಲೀಸರ ಮೇಲೆ ದೌರ್ಜನ್ಯ ನಡೆದಿದೆ. ಟಿಪ್ಪು ಸುಲ್ತಾನ್ #TippuSultan ಸಂತತಿಯ ಪುಂಡರು ಈಗ ಮತ್ತೆ ಅದೇ ರೀತಿಯ ದಾಂಧಲೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ #Siddharamaiah ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲಿಬಾನ್ ಆಡಳಿತದ ಮಾದರಿಯಲ್ಲಿ ಅಧಿಕಾರ ನಡೆಯುತ್ತಿದ್ದು, ಅಧಿಕಾರಿಗಳ ಮೇಲೆ ದೌರ್ಜನ್ಯ ಹೆಚ್ಚಳವಾಗಿದೆ ಎಂದು ದೂರಿದರು.
ದೆಹಲಿಯಲ್ಲಿ ಸೋತ ಅರವಿಂದ ಕೇಜ್ರಿವಾಲ್ #AravindKejriwal ಕುರಿತಾಗಿ ಪೋಸ್ಟ್ ಹಾಕಿದರೆ ಇಲ್ಲಿನ ಉದಯಗಿರಿ ಪುಂಡರಿಗೆ ಏಕೆ ಸಿಟ್ಟು ಬರುತ್ತದೆ? ಹಾಗಾದರೆ ಚುನಾವಣೆಯಲ್ಲಿ ಜನರು ನೀಡಿದ ಆದೇಶಕ್ಕೆ ಬೆಲೆಯೇ ಇಲ್ಲವೇ? ಅಲ್ಲಿ ಅವರು ಸೋತರೆ ನೀವು ಯಾಕೆ ಶೋಕಾಚರಣೆ ಮಾಡುತ್ತೀರಿ? ನಿಮಗಾಕೆ ಇಷ್ಟು ಸಿಟ್ಟು ಬರುತ್ತದೆ. ಹಾಗಾದರೆ, ಕಾಂಗ್ರೆಸ್ #Congress ಗೆದ್ದರೆ ಮಾತ್ರ ನಿಮಗೆ ಖುಷಿಯಾಗುವುದೇ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಮಾಜಘಾತು ಶಕ್ತಿಗಳು ಅಬ್ಬರಿಸುತ್ತಿವೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಅಭಯ ಇವರುಗಳು ಇಂತಹ ಕೃತ್ಯ ಎಸಗಲು ಪ್ರೇರಣೆಯಾಗಿದೆ. ಇದಕ್ಕೆ ಅಧಿಕಾರಿಗಳು ಅದರಲ್ಲೂ ಸಮಾಜದ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯೇ ಅವರ ಗುರಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಒಂದು ಕೂಂಬಿAಗ್ ಆಪರೇಶನ್ ಮಾಡಿ ಮಸೀದಿಗಳನ್ನು ತಲಾಶ್ ಮಾಡಿ. ಅಲ್ಲಿ ಏನೆಲ್ಲಾ ವಸ್ತುಗಳು ಸಿಗುತ್ತವೆ ಎಂಬುದನ್ನು ನೀವುಗಳೇ ನೋಡಿ. ನಿನ್ನೆ ನಡೆದ ಗಲಭೆಯಲ್ಲಿ ಏಕಾಏಕಿ 3-4 ಚೀಲ ಕಲ್ಲುಗಳು ಸಿಗುತ್ತವೆ ಎಂದರೆ ಅದೊಂದು ವ್ಯವಸ್ಥಿತ ಸಂಚು ಎನ್ನುವುದು ತಿಳಿಯವುದಿಲ್ಲವೇ ಎಂದರು.
ಸಿದ್ದರಾಮಯ್ಯನವರೇ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಇಂತಹ ಕಾನೂನು ಬಾಹೀರ ಕೃತ್ಯ ನಡೆಯುತ್ತಿದ್ದರೂ ಸುಮ್ಮನೆ ಇರುವುದೇಕೆ. ನಿಮ್ಮ ಮೂಗಿನ ಕೆಳಗೆ ಇರುವ ಮೈಸೂರು ನಗರದ ಪೊಲೀಸರ ಮೇಲೆಯೇ ದೌರ್ಜನ್ಯ ನಡೆಯುತ್ತಿದ್ದರೂ ಸುಮ್ಮನೆ ಕುಳಿತಿದ್ದೀರಿ. ಇದನ್ನು ತಡೆಯುವುದು ನಿಮ್ಮಿಂದ ಆಗುವುದಿಲ್ಲ. ಪೊಲೀಸರಿಗೆ ಪೂರ್ಣ ಅಧಿಕಾರ ನೀಡಿ. ಆನಂತರ ಕೃತ್ಯಗಳು ಹೇಗೆ ಕಡಿಮೆಯಾಗುತ್ತವೆ ಎನ್ನುವುದನ್ನು ನೋಡಿ ಎಂದರು.
ಇನ್ನು, ನಿನ್ನೆ ನಡೆದ ದಾಂಧಲೆಯನ್ನು ಪೊಲೀಸ್ #Police ಇಲಾಖೆ ಎಚ್ಚರಿಕೆ ಗಂಟೆಯನ್ನಾಗಿ ಪರಿಗಣಿಸಿ ಶೀಘ್ರ ಒಂದು ಕೂಂಬಿAಗ್ ಆಪರೇಶನ್ ಮಾಡಿ ಎಂದು ಆಗ್ರಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post