Wednesday, July 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸಂಕ್ರಾಂತಿ ಸ್ನಾನದ ಮಹತ್ವವೇನು? ಎಳ್ಳು ಹಂಚುವುದರ ಉದ್ದೇಶವೇನು?

January 13, 2021
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0 0
0
Internet Image

Internet Image

Share on facebookShare on TwitterWhatsapp
Read - 7 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಏನೇ ವೈಮನಸ್ಸು ಇದ್ದರೂ, ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ “ಸಂಕ್ರಾಂತಿ’ ಬಂದಿದೆ.

ಪ್ರತ್ಯಕ್ಷ ಭಗವಾನ್ ಸೂರ್ಯದೇವ ರಾಶಿಗತಿಯನ್ನು ಬದಲಿಸಿ ಜನಜೀವನ ರೀತಿ ನಿರ್ದೇಶಿಸುವ ಶುಭಗಳಿಗೆ. ಇದರಿಂದ ಹಗಲು ಹೆಚ್ಚಾಗಿ ಕತ್ತಲಿನ ಸಮಯ ಕಡಿಮೆ. ಕಾಡುವ ಹೇಮಂತ ಶಿಶಿರವ ಹಿಂದಿಕ್ಕಲು ಪ್ರಬಲವಾಗುತ್ತ ವಸುಂಧರೆಗೆ ಪ್ರಿಯನಾದ ಚೈತ್ರನನ್ನು ಕರೆತರಲು ಉದ್ಯುಕ್ತನಾಗುತ್ತಾನೆ ಸೂರ್ಯ. ಕೊಯ್ಲಿಗೆ ಸಿದ್ಧವಾದ ಪೈರಿನ ಕೆಲವು ತೆನೆಗಳನ್ನು ಸಾಂಕೇತಿಕವಾಗಿ ಕೊಯ್ದು ತಂದು ಕೆಲವು ಕಾಳುಗಳನ್ನು ಹಾಕಿ ಪಾಯಸ ಮಾಡಿದರೆ ಉಪಯೋಗಿಸುವ ಮುನ್ನ ಧಾನ್ಯ ಪೂಜೆ ನಡೆದಂತೆ ಎನ್ನುವ ನಂಬಿಕೆ ಇದೆ.

ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ವಿಶೇಷಗಳನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಕೊಳ್ಳುವುದೇ ಹಬ್ಬಗಳ ಪರಮಾರ್ಥ.
ಎಳ್ಳಿನ ಸಾಹಿತ್ಯ
ಸಾಹಿತ್ಯ ಲೋಕದಲ್ಲೂ ಎಳ್ಳಿನ ವ್ಯಾಪ್ತಿ ವಿಸ್ತರಿಸಿದೆ. ಸಾವಿರಾರು ಪದ್ಯ- ಗದ್ಯ- ಗಾದೆ ಗೀತೆಗಳಲ್ಲಿ ಎಳ್ಳು; ಪರಮಾತ್ಮನ ನಿಲುವು ಹೇಳುವ ಶರಣರು, ದಾರ್ಶನಿಕರು, ದಾಸರು, ಎಳ್ಳಿನ ಲಾಭ ಪಡೆದು ಋಣಿಯಾಗಿದ್ದಾರೆ. ಕೆಲವು ಉದಾಹರಣೆಗಳು.

1) ತಿಲದ ಮರೆಯ ತೈಲದಂತೆ ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯ ಬಾರದು॥
-ಅಕ್ಕ ಮಹಾದೇವಿ
2) ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾಯಿತ್ತೆನ್ನ ಭಕ್ತಿ॥
-ಬಸವೇಶ್ವರ
3) ಎಳ್ಳಿಗೆ ಪರಿಮಳ ಕಟ್ಟಿದಲ್ಲದೆ ಎಣ್ಣೆಗೆ – ಪರಿಮಳ ವೇಧಿಸದು
– ಅಲ್ಲಮಪ್ರಭು
4) ಕೈಲಾಸವಾಸ ಗೌರೀಶ ಈಶ – ತ್ಯೆಲಧಾರೆಯಂತೆ ಮನಸು ಕೊಡು ಶಂಭೋ
-ವಿಜಯದಾರಸು
5) ಏಳುತಾಲೆ ಎದ್ದು – ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ
ಎಳ್ಳು ಜೀರಿಗೆ ಬೆಳೆಯೋಳ – ಭೂಮಿತಾಯ
ಎದ್ದೊಂದು ಗಳಿಗೇ ನೆನೆದೇನು ॥

ಈ ಗಾದೆ ಮಾತುಗಳು ಎಷ್ಟು ಶ್ರವಣಾನಂದಕರವೋ ನೋಡಿ. ಎಳ್ಳು ಒಣಗಿದರೆ ಎಣ್ಣೆ ಬಂತು. ನೀ ಒಣಗಿದರೇನು ಬಂತು॥ ಎಂದು ಸಂಕ್ರಾಂತಿಯ ಬೆಳಿಗ್ಗೆ ಉಪವಾಸದಿಂದ ಬಿಸಿಲು ಕಾಯುವ ಪೋರನನ್ನು ಪ್ರಶ್ನಿಸಬಹುದಲ್ಲವೆ? ಎಳ್ಳು ಕಿತ್ತು ಹುಳ್ಳಿ ಹಾಕಿದಂತೆ – ಲಾಭವಿಲ್ಲದ ವ್ಯವಸಾಯದಿಂದ ಉದ್ಧಾರ ಆದೀತೆ? ಎಷ್ಟು ಡಿಗ್ರಿ ಜ್ವರ ಬಂದಿದೆಯೆಂದು ಮನೆಮಾಲೀಕನು ಸ್ವಂತದ ಥರ್ಮಾಮೀಟರ್ ಪ್ರಕಾರ ಪತ್ತೆ ಹಚ್ಚಿ. ಎಳ್ಳು ಹಾಕಿದರೆ ಸಿಡಿಯುವಂತಹ ಜ್ವರ! ಎಂದು ಸಂಶೋಧಿಸಿ ಘೋಷಿಸಿದನಂತೆ! ಸಂಸ್ಕತದ ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದನು ಕನ್ನಡದ ಎಳ್ಳುಕಾಳು ಮುಳ್ಳುಮೊನೆ ಎಲ್ಲೆಲ್ಲೂ ಇದ್ದಾನೆ.

ಹಣೆಯ ಮೇಲಿಡವ ತಿಲಮಾತ್ರದ ಚುಕ್ಕೆ ಅಥವಾ ನಾಮಕ್ಕೆ ತಿಲಕ ಎಂದು ಹೆಸರು. ಈಗ ಕೆಲವು ಹೆಣ್ಣುಮಕ್ಕಳ ಆಸೆಯಂತೆ ಕಂಡೂ ಕಾಣದ ರೀತಿಯಲ್ಲಿ ಹಣೆಯಲ್ಲಿ ಮೆತ್ತಿಕೊಳ್ಳಲು ಅಂಗಡಿಗಳಲ್ಲಿ ತಿಲಾಕಾರದ ಬಿಂದಿಗಳು ಮಾರಾಟಕ್ಕೆ ಸಿಗುತ್ತದೆ. ದೇಹದ ಮೇಲೆ ಕರಿ ಎಳ್ಳಿನಷ್ಟು ಮಚ್ಚೆಯಿದ್ದರೆ ಸಂಸ್ಕತದಲ್ಲಿ ಆ ಮಚ್ಚೆಗೆ ತಿಲಕಾಲಿಕಾ ಎಂದು ಅನ್ನುತ್ತಾರೆ. ಎಳ್ಳು-ಅಕ್ಕಿ ಬೆರೆತಂತೆ ಸಂಸ್ಕತದಲ್ಲಿ ಕೆಲವರು ಪರಸ್ಪರ ತಿಲತುಂಡಲಕ ಆಲಿಂಗನ ಮಾಡಿಕೊಳ್ಳುತ್ತಾರೆ. ಸಂಕ್ರಾಂತಿ ಹಬ್ಬದ ಬಿಳಿಯೆಳ್ಳಿಗೂ ಇದೇ ಹೆಸರು.

ತಿಲಾನ್ನ ಎನ್ನುವ ಎಳ್ಳಿನ ಚಿತ್ರಾನ್ನದ ರುಚಿ ವಾಚಾತೀತ. ತಿಲಪ್ರಾಯ ತಿಲಮಾತ್ರ ತಿಲಸದೃಶ ಶಬ್ದಗಳು ಕನ್ನಡ ಭಾಷೆಯಲ್ಲೂ ಬಳಕೆಯಲ್ಲಿವೆ.

ಇಷ್ಟೆ ಅಲ್ಲದೆ ಅಗಸೆಳ್ಳು, ಊರೆಳ್ಳು, ಕರೆಯೆಳ್ಳು, ಹುಚ್ಚೆಳ್ಳು (ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ) ಎಂಬ ಭೇದಗಳಿವೆ. ಬೆಳೆ ಫಲಿಸದಿದ್ದಾಗ ಆಸೆ ಬಿಡುವುದು, ತ್ಯಜಿಸುವುದು, ತಿಲಾಂಜಲಿ ಬಿಡುವುದು ಅಥವಾ ಎಳ್ಳು ನೀರು ಬಿಡುವುದರ ಹೊರತು ಬೇರೆ ದಾರಿಯಿಲ್ಲ.

ಇತರ ಭಾಷೆಗಳಲ್ಲೂ ಎಳ್, ಎಣ್ (ತಮಿಳು), ಎಳ್, ಎಳ್ಳು (ಮಲಯಾಳಂ), ಎಳ್ಳೀ (ಕೊಡಗು), ಎಣ್ಮೆ (ತುಳು) ಎಳ್ಳಿನ ರೂಪಾಂತರಗಳಿವೆ.

ಎಳ್ಳುಂಡೆ ಇಂದಿನದಲ್ಲ – ಶತಮಾನಗಳಷ್ಟು ಹಳೆಯ ತಿನಿಸು – ರಿಸಿಯಂ ನಂದಿಮಿತ್ರಂ ಕಂಡು ಕಾರುಣ್ಯದಿಂ ನೀಸಿನಿ ಎಳ್ಳುಂಡೆಯನಿಕ್ಕಿದೊಡೆ (ವಡ್ಡಾರಾಧನೆ – 157/2) ಎಂದಿರುವುದಲ್ಲದೆ.

ಎಳ್ಳುಂಡೆ ಜೇನುತುಪ್ಪ ಗಣನಾಯ್ಕ ನಮಗೆ
ವಿದ್ಯಯ ಕಲಿಸಯ್ಯ ಗಣನಾಯ್ಕ॥
ಜನಪದಗೀತೆಯ ಸೊಲ್ಲು ಜನಪ್ರಿಯ.

ಎಳ್ಳಷ್ಟು ತಪ್ಪಿದರೆ ಯಮನಾಳು ನರಕಕ್ಕೆ ಎಳೆದೊಯ್ವರೆಚ್ಚರಿಕೆ ಎಂದು ಪುರಂದರದಾಸರು ಎಚ್ಚರಿಸಿದ್ದಾರೆ.
ಮಹಾಭಾರತದ ಸುಂದರೋಪ ಸುಂದರ ಕತೆಯ ಪ್ರಕಾರ – ಶ್ರೇಷ್ಠವಾದ ರತ್ನಗಳ ಸಂಪೂರ್ಣ ಸೌಂದರ‌್ಯವನ್ನು ಚಿಕ್ಕದಾಗುವಂತೆ ಹಿಂಡಿ ತಿಲ ತಿಲವಾಗಿ ಮಾಡಿಕೊಂಡು ಬ್ರಹ್ಮನು ನಿರ್ಮಿಸಿದ ಸುರಾಂಗನೆ ಅಪ್ಸರೆಗೆ ಆತನು ತಿಲೋತ್ತಮೆ ಎಂದು ಕರೆದನು (ಮಹಾಭಾರತ: ಆದಿ: 231/ಚ)


ನವಗ್ರಹಗಳಲ್ಲಿ ತಿಲವು ಶನೈಶ್ಚರನನ್ನು ಪ್ರತಿನಿಧಿಸುತ್ತಿರುವುದು ಮಾತ್ರ ಸ್ವಲ್ಪ ಸೋಜಿಗದ ಸಂಗತಿ. ಏನೇ ದಾನ ಪಡೆದರು ತಿಲವನ್ನು ವರ್ಜಿಸು ಎಂದು ಕೆಲವು ಪುರಾಣಗಳ ಅಭಿಮತ. ಸಂಕ್ರಾತಿಯ ಆಚಾರ ಇದಕ್ಕೆ ತದ್ವಿರುದ್ಧ.

ರವಿ ಪುತ್ರನಿಗೆ ಕರಿಯ ಬ್ಟೆಯಲ್ಲಿ ಕರಿಯೆಳ್ಳನ್ನು ಕರಿದಾರದಿಂದ ಕಟ್ಟಿ, ಎಳ್ಳೆಣ್ಣೆಯಲ್ಲಿ ತೋಯಿಸಿ ದೀಪವಾಗಿ ಉರಿಸಿದರೆ ಅನಿಷ್ಟ ಪರಿಹಾರ!

ಸಂಕ್ರಾಂತಿ ಸ್ನಾನ
ಸಂಕ್ರಾಂತಿಯು ಗ್ರಹಣದಂತೆ ಅತ್ಯಂತ ಪುಣ್ಯಕಾಲವೆಂದು ಪರಿಗಣಿತವಾದುದರಿಂದ ಆ ಪುಣ್ಯಕಾಲದಲ್ಲಿ ಪುಣ್ಯ ತೀರ್ಥದಲ್ಲಿ ಸ್ನಾನ ಮಾಡುವುದು ಪ್ರಶಸ್ತ. ಇದು ಶರೀರದ ಕೊಳೆಯನ್ನು ತೊಳೆಯುವ ಮಲಪಾಕರ್ಷಣ ಸ್ನಾನವಲ್ಲ; ಮಾನಸಿಕ ದೋಷಗಳು ತೊಳೆಯುವ ಪುಣ್ಯಸ್ನಾನ ಎಂಬುದು ನೆನಪಿನಲ್ಲಿಡಬೇಕಾದ ವಿಷಯ. ಉತ್ತರಾಯಣದ ಅಧಿದೇವತೆ ಶಿಂಶುಮಾರರೂಪಿ ಸೂರ‌್ಯನೊಡನೆ ರಾಧಾಕಷ್ಣರನ್ನು, ರತಿಮನ್ಮಥರನ್ನು ಪೂಜಿಸಿ ತುಪ್ಪ – ಕಂಬಳಿಯನ್ನು ದಾನ ಮಾಡುವುದು ಇದೆ.

ವರ್ಷದ ಎಲ್ಲಾ ಸಂಕ್ರಮಣಗಳಲ್ಲೂ ವ್ರತೋಪವಾಸ ದಾನಗಳುಂಟು. ಆದರೆ ಅದನ್ನು ಆಚರಿಸುವ ಅವಕಾಶ – ಸೌಲಭ್ಯಗಳು ಎಲ್ಲರಿಗೂ ಇರುವುದಿಲ್ಲ. ಅಂತಹವರು ಉತ್ತರಾಯಣಾರಂಭದ ಮಕರ ಸಂಕ್ರಾಂತಿಯಲ್ಲಿ ಆಚರಿಸಿ, ವರ್ಷವಿಡೀ ಆಚರಿಸಿದಷ್ಟು ಪೂರ್ಣಫಲ ಪಡೆಯಬಹುದೆಂದು ಶಾಸ್ತ್ರಗಳ ಹೇಳಿಕೆ. ಈ ಕಾರಣದಿಂದ ಉತ್ತರಾಯಣದ ಮಕರ ಸಂಕ್ರಾಂತಿ ಸರ್ವ ಜನಾದರಣೀಯವಾಗಿದೆ.

ಯುಗಾದಿ, ದೀಪಾವಳಿಯನ್ನು ಬಿಟ್ಟರೆ ಭಾರತೀಯರಿಗೆ ಸಂಕ್ರಾಂತಿಯೇ ಬಹು ದೊಡ್ಡ ಹಬ್ಬ. ಸಂಕ್ರಾಂತಿ ಧಾರ್ಮಿಕವಾಗಿ ದೈವೀಶಕ್ತಿಯ ಉಪಾಸನೆಗೆ ಹೆಬ್ಬಾಗಿಲು ತೆರದಂತೆ. ಅಂದಿನಿಂದ ಮೊದಲಾಗಿ ಜಾತ್ರೆಗಳು, ರಥೋತ್ಸವಗಳು ಪ್ರಾರಂಭವಾಗುತ್ತದೆ.

ಸಂಕ್ರಾಂತಿಯು ಸೌರಮಾನದ ಹಬ್ಬ. ಮಕರ ಮಾಸದ ಪ್ರಾರಂಭದ ದಿವಸದಲ್ಲಿ ಮಕರಸಂಕ್ರಾಂತಿಯ ಆಚರಣೆ, ಚಾಂದ್ರಮಾನದಂತೆ ಪುಷ್ಯಮಾಸದಲ್ಲಿ ಇದು ಬರುತ್ತದೆ. ಜನವರಿ 12, 13 ಅಥವಾ 14 ತಾರೀಖಿನಂದು ಈ ವರ್ಷವು ಇರುತ್ತದೆ.

ಇತರ ಸಂಕ್ರಮಣಗಳು ರಾಶಿಯಿಂದ ರಾಶಿಗಾದರೆ, ಮಕರ ಸಂಕ್ರಮಣ ರಾತ್ರಿಯಿಂದ ಹಗಲಿಗೆ, ದಕ್ಷಿಣದಿಂದ ಉತ್ತರಕ್ಕೆ, ತಗ್ಗಿನಿಂದ ಎತ್ತರಕ್ಕೆ, ಉತ್ತರಾಯಣ – ಎತ್ತರಾಯಣ. ಇಷ್ಟರತನಕ ಸೂರ‌್ಯ ರಾಶಿ ಕುಂಡಲಿಯ ಕೆಳಕೋಣೆಗಳಲ್ಲಿ ಉರುಳಿ ಬರುತ್ತಿದ್ದರೆ ಇನ್ನು ಮುಂದೆ ಮೇಲ್ಛಾವಣಿಯನ್ನು ಹತ್ತುತ್ತಾನೆ.

ಗ್ರಹರಾಜ ರವಿ ಮೇಲೇರುತ್ತಿರುವಾಗ ಶುರು ಮಾಡಿದ ಕಾರ‌್ಯಗಳೆಲ್ಲಾ ಸಹಜವಾಗಿಯೇ ಮೇಲೇರಬೇಕು. ಆದ್ದರಿಂದಲೇ ಎತ್ತರಾಯಣ, ಸರ್ವಕಾರ‌್ಯಗಳಿಗೂ ಪ್ರಶಸ್ತ ಕಾಲ, ಕೊನೆಗೆ ಮರಣಕ್ಕೂ ಕೂಡ. ಆದ್ದರಿಂದಲೇ ಭೀಷ್ಮರು ಅದಕ್ಕಾಗಿ ಕಾದರು. ಮಾನವನು ತನ್ನತನದ ಅರಿವಿನಡೆಗೆ ಸಾಗುವ ಪಥ – ಸರ್ವತೋಮುಖದ ವಿಕಾಸ – ಸಮ್ಯಕ್+ ಕ್ರಾಂತಿ = ಸಂಕ್ರಾಂತಿ.

ಶ್ರೀ ಕಷ್ಣ ಹೇಳುತ್ತಾನೆ, ಸಾಧಕನ ಹೃದಯ ಉತ್ತರ ಶುಕ್ಲ ಹಗಲಿನ ನಸುಕಿನ ಬಯಲಿನಂತಿರಬೇಕು. ಹೊರತು, ದಕ್ಷಿಣ ಕೃಷ್ಣ ರಾತ್ರಿಯ ಉಸುಕ ತುಂಬಿದ ಮಸುಕಿನ ಕೋಣೆಯಂತಿರಬಾರದು.

ಶ್ರೀರಾಮ ಆಯನ, ಪಾಂಡವರ ಪ್ರಸ್ಥಾನ, ಕಿಷ್ಕಿಂಧೆ, ಕಿನ್ನರ ಕಿಂಪುರುಷರ, ಆವಾಸಸ್ಥಾನ, ಉತ್ತರ ಬದರಿ, ಮೇರು ಪರ್ವತ ಎಲ್ಲವೂ ಉತ್ತರ ದಿಕ್ಕಿನಲ್ಲೆ ವರ್ಣಿತವಾಗಿರುವುದರಿಂದ ಅದಕ್ಕೆ ಅಷ್ಟು ಪ್ರಾಶಸ್ತ್ಯ. ಅಂತೂ ಮಕರ ಸಂಕ್ರಮಣ ಅದು ಪರ್ವ ಪರ್ವತವಾಗಿದ್ದು ಬೆಳಕಿನ ಉದ್ಘಾಟನಾ ಸಮಾರಂಭವೆನಿಸಿದೆ.

ಮಕರ ಸಂಕ್ರಾಂತಿ ಚಳಿಗಾಲ ಮುಗಿದು ವಸಂತಾಗಮನಕ್ಕೆ ಮೊದಲು ಸಂಭವಿಸುತ್ತದೆ. ಮಳೆ, ಕೆಸರು, ಮೋಡ ಮುಸುಕಿದ ವಾತಾವರಣ, ಚಳಿಗಾಳಿ ಮೊದಲಾದ ಪ್ರಾಕತಿಕ ವೈಪರೀತ್ಯದಿಂದ ಏನೋ ಮುಜುಗರ, ಅದು ಕಳೆದು ವಾತಾವರಣ ಶುದ್ಧವಾಗಿ ಸುಗ್ಗಿಯ ಆನಂದ, ಭೂಮಿತಾಯಿ ಸಸ್ಯ ಶ್ಯಾಮಲೆಯಾಗಿ ನಲಿಯುವ ಸಂಭ್ರಮ ಕೃತಿಯ ವಿಕಾಸ, ವಿಲಾಸಗಳ ಆರಂಭ ಕಾಲದಲ್ಲಿ ಧಾನ್ಯಲಕ್ಷ್ಮಿ, ಧನಲಕ್ಷ್ಮಿಯರು ಬರುವ ಸಮಯ. ರುಚಿಕರವಾದ ಅವರೆ, ಗೆಣಸು ಮೊದಲಾದವುಗಳು ಸಮದ್ಧಿಯಾಗಿ ದೊರೆಯುವುದು ಈಗಲೇ.

ಭೋಗಿ
ಸುಗ್ಗಿ ಮುಗಿದು ಹೊಸ ಫಲಸು ಮನೆಗೆ ಬಂದ ಆರಂಭದ ದಿನ ಕೊಟ್ಟು ಉಣ್ಣುವ ಸಂಪ್ರದಾಯಕ್ಕೆ ದೊರೆತ ಸಕ್ರಿಯ ರೂಪವೇ ಭೋಗಿ. ಅಂದು ಮನೆಯನ್ನು ಸ್ವಚ್ಛಗೊಳಿಸಿ, ಹಳೇ ವಸ್ತುಗಳನ್ನು ಸುಟ್ಟು ಹಾಕಲಾಗುವುದು ಮತ್ತು ಅಂದು ಹೊಸದಾಗಿ ಬಂದ ಫಸಲಿನ ಅಕ್ಕಿಯನ್ನು ರುಬ್ಬಿ, ಅದರ ಹಿಟ್ಟಿನಿಂದ ರಂಗೋಲಿಯನ್ನು ಸೂರ‌್ಯದೇವನ ಪ್ರೀತ್ಯರ್ಥವಾಗಿ ಹಾಕಲಾಗುತ್ತದೆ.

ಮಹಾಭಾರತದ ಅನುಶಾಸನ ಪರ್ವದಲ್ಲಿ ಉತ್ತರಾಯಣದ ದೀಪದಾನದ ಕುರಿತು ಶುಕ್ರಾಚಾರ‌್ಯರು ಬಲಿ ಚಕ್ರವರ್ತಿಗೆ ಭೋದಿಸುತ್ತಾ ಹೇಳಿರುವ ತತ್ವ ವಿಚಾರ ಸಾಂದರ್ಭಿಕವಾಗಿ ಸ್ಮರಣೀಯ. ಸಂಕ್ರಾಂತಿಯ ಸಂದರ್ಭಕ್ಕೆ ಸೂರ್ಯೋಪಾಸನೆಯು ಮಾನವನು ಅಗೋಚರ ದಿವ್ಯಸತ್ವಕ್ಕೆ ಸಲ್ಲಿಸುವ ಕೃತಜ್ಞತೆಯ ಸಂಕೇತ.

ವಾಯು-ಜಲ, ಶಬ್ದ ಮಾಲಿನ್ಯಗಳ ಅತಿರೇಕದಿಂದ ಪರಿಸರ ಕುಲಗೆಟ್ಟು ಹೋಗಿ, ಆಯುಷ್ಯಾವಧಿಯನ್ನು ಮೊಟಕುಗೊಳಿಸುವಂತೆ ಆರೋಗ್ಯ ಕ್ಷೀಣಿಸುವ ದೌರ್ಭಾಗ್ಯ ಪರಿಸ್ಥಿತಿಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಇದಕ್ಕೆ ಔಚಿತ್ಯವೂ ಉಂಟು.

ಸೂರ‌್ಯನ ಪಥ ಪರಿವರ್ತನೆಯ ಈ ಸಂಧಿಕಾಲಕ್ಕೆ ಮೂರ್ತರೂಪ ಕೊಟ್ಟು ನಮ್ಮ ಪೂರ್ವಿಕರು. ಸಂಕ್ರಾಂತಿ ಪುರುಷನನ್ನು ಸೃಷ್ಟಿಸಿದ್ದಾರೆ. ಈ ಸಂಕ್ರಾಂತಿ ಪುರುಷ ಕೆಲವೊಮ್ಮೆ ಅರ್ಧ ಪುರುಷ ಅರ್ಧ ಸ್ತ್ರೀಯಾಗಿ ಇರುವುದುಂಟು.

ಒಂದೊಂದು ವರ್ಷ ಒಂದೊಂದು ಪ್ರಾಣಿಯ ವಾಹನ, ಒಂದೊಂದು ಬಣ್ಣದ ಬ್ಟೆ, ಒಂದೊಂದು ದಿಕ್ಕಿಗೆ ಪಯಣ! ಈ ವಿಚಿತ್ರ ದೇವತೆಯ ವಾಹನ, ವಸ್ತ್ರ, ವರ್ಣ, ಸಂಚಾರದ ದಿಕ್ಕನ್ನು ಆಧರಿಸಿ ಆಯಾ ವರ್ಷ ಒಳಿತು ಕೆಡುಕನ್ನು ಪಂಚಾಂಗದಲ್ಲಿ ವಿವರಿಸಿರುವಂತೆ ಜ್ಯೋತಿಷಿಗಳಿಂದ ಓದಿಸಿ ತಿಳಿಯುವ ವಾಡಿಕೆಯೂ ಕೆಲವೆಡೆ ಇದೆ.

ಪೋಂಗು ಎಂಬ ದ್ರಾವಿಡಶಬ್ದದ ಭಾಷಾಂತರವೇ ಭೋಗಿ ಎಂದು, ಇದು ಶೀತಕಾಲವನ್ನು ಹೋಗು ಎಂದು ಬೀಳ್ಕೊಟ್ಟು ವಸಂತಾಗಮನವನ್ನು ಸ್ವಾಗತಿಸುವ ಹಬ್ಬವೆಂದು ಅನ್ನುತ್ತಾರೆ. ರೈತರು ಅಂದು ಹೊಸ ಮಡಿಕೆಯಲ್ಲಿ ಹೊಸ ಫಸಲಿನ ಅಕ್ಕಿಯಿಂದ ತಯಾರಿಸಿದ ಹುಗ್ಗಿ ಮಾಡಿ ತಿನ್ನುತ್ತಾರೆ.

ಪಂಚಭೂತದಲ್ಲಿ ಒಂದಾದ ಮಣ್ಣು (ಭೂಮಿ) ಅದರಿಂದ ತಯಾರಿಸಲ್ಪಟ್ಟಿದ್ದು, ಮಡಿಕೆ ಮಣ್ಣಿನಿಂದಲೇ ಹುಟ್ಟಿ, ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಇಡೀ ಜಗತ್ತಿನ ಸೃಷ್ಟಿ ಮನುಷ್ಯನ ಬಾಳು ಸಹ ಮಡಿಕೆಯಂತೆ. ಸ್ವಲ್ಪ ಅಜಾಗರೂಕತೆಯಿಂದ ಇದ್ದರೂ, ಮಡಿಕೆ ಬಹಳ ಬೇಗ ಒಡೆದು ಹೋಗುತ್ತದೆ. ಆದುದರಿಂದ ನಾವು ಯಾವಾಗಲೂ ಜಾಗರೂಕರಾಗಿರಬೇಕು. ಅಜ್ಞಾನಿಗಳಾಗದೆ ನಿರಂತರ ಮೈ ತಿಳಿವಿನಿಂದ ಇರಬೇಕು. ಈ ದೇಹ ಮಡಿಕೆಯಂತೆ ಯಾವಾಗ ಬೇಕಾದರೂ ಒಡೆದು ಹೋಗಬಹುದು. ಇರುವಷ್ಟು ಕಾಲದಲ್ಲಿಯೇ ಆದಷ್ಟು ಒಳ್ಳೆಯ ಕೆಲಸವನ್ನು ಮಾಡಬೇಕು. ಪೊಂಗಲ್ ಹಬ್ಬದ ದಿನ ಒಬ್ಬರನ್ನೊಬ್ಬರು ನೋಡಿದ ಕೂಡಲೇ, ಮೊದಲು ಪಾಲ್ ಪೊಂಗಿ್ರಾ ಎಂದು ಕೇಳುವರು. ಹಾಲು ಉಕ್ಕಿದಂತೆ ಸಿರಿ ಸಂಪತ್ತು ಉಕ್ಕುವುದೆಂದು ಸೂಚಿಸುವುದಕ್ಕಾಗಿ ಅಂದು ಹಾಲನ್ನು ಉಕ್ಕಿಸಲಾಗುವುದು.

ಎಳ್ಳು ಎಣ್ಣೆಯ ಅಂಶದಿಂದ ಚರ್ಮದ ನಾವೀನ್ಯ, ಕೋಮಲತೆಯನ್ನು ಕಾಪಾಡುತ್ತದೆ. ಎಳ್ಳು ಸೇರಿಕೊಂಡ ಕಡಲೇಬೀಜದಲ್ಲೂ ಎಣ್ಣೆಯ ಎಳೆ ಇದ್ದೇ ಇದೆ. ಕೊಬ್ಬರಿಯ ಚೂರಿನಲ್ಲಿ ಜಿಡ್ಡಿನ ಜಾಡೂ ಇದ್ದೇ ಇದೆ. ಹೀಗಾಗಿ ಅದನ್ನು ತಿಂದಾಗ ಒಳ್ಳೆಯದಾಗಲೇ ಇರಲು ಸಾಧ್ಯವೇ?

ಎಳ್ಳಿನ ಸ್ಪರ್ಶದಿಂದ ಶ್ಯೆಶವಕ್ಕೆ ಸಂಬಂಧಪಟ್ಟ ಪೀಡೆಗಳು ಪರಿಹಾರವಾಗುತ್ತದೆ. ಶಿಶುಗಳ ಬೆಳವಣಿಗೆಗೆ ಬೇಕಾದ ಕೇಂದ್ರಗಳು ವಿಕಾಸಗೊಳ್ಳುತ್ತದೆ. ಆದುದರಿಂದ ಮಕ್ಕಳ ಮೇಲೆ ಎಳ್ಳನ್ನು ಅಂದು ವಿಧಿಪೂರ್ವಕವಾಗಿ ಸುರಿದು ಗುರುಹಿರಿಯರು ಆಶೀರ್ವಾದದಿಂದ ಅವರುಗಳ ಮೇಲೆ ಅನುಗ್ರಹದ ಮಳೆಗರೆಯುವಂತೆ ಮಾಡುತ್ತಾರೆ.

ಸಂಕ್ರಾಂತಿಯ ಮಾರನೆಯದಿನ ಕನೂಹಬ್ಬ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ತಮಿಳುನಾಡಿನ ಸಂಪ್ರದಾಯದವರು ಇದನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಕನೂಹಬ್ಬದ ವಿಧಿಯನ್ನು ಆಚರಿಸುವವರು ಸ್ತ್ರೀಯರು. ಇದು ಭೂತಗಳಿಗೆ ತೃಪ್ತಿಯನ್ನುಂಟು ಮಾಡುವ ವಿಶೇಷ ವಿಧಿ. ಇದರಲ್ಲಿ ಸಂಕ್ರಾಂತಿಯ ದಿವಸ ಮಾಡಿದ ಅಡುಗೆಯ ಮಿಕ್ಕಿರುವ ಭಕ್ಷಭೋಜ್ಯಗಳ ತಂಗಳನ್ನದಿಂದ ತಾಯಾರಿಸಿದ ಕೆಂಪು, ಹಳದಿ ಮುಂತಾದ ಬೇರೆ ಬೇರೆ ಬಣ್ಣದ ಅನ್ನದ ಹಿಡೀ ತುತ್ತನ್ನು ಹಾಗೂ ಹಣ್ಣು, ಕಬ್ಬಿನ ಚೂರುಗಳನ್ನು ಮನೆಯ ಹೊರಗೆ ಎಲೆಯ ಮೇಲೆ ಇರಿಸಿ ಅವುಗಳನ್ನು ಭೂತಗಳಿಗೆ ಸಮರ್ಪಿಸುತ್ತಾರೆ. ಆಗ ಕಾಗೆಗೆ ಕಲ್ಯಾಣ, ಗುಬ್ಬಚ್ಚಿಗೆ ಸೀಮಂತ ಎಂಬ ಇತ್ಯಾದಿ ವಿಚಿತ್ರವಾದ ಹಾರೆಕೆಯ ಹೇಳಿಕೆಗಳನ್ನು ಬಳಸುವುದುಂಟು.

ಜ್ಞಾನ, ಭಕ್ತಿ ವೈರಾಗ್ಯಗಳ ವಿನಿಮಯವೇ ಆಧ್ಯಾತ್ಮಿಕ ಸಂಕ್ರಾಂತಿ. ಕೂಡಲೇ ಕರಗುವ ಸಕ್ಕರೆ ಅಚ್ಚು ಅಶಾಶ್ವತವಾದ ಐಹಿಕಸುಖದ ಸಂಕೇತವಾದರೆ, ಗಟ್ಟಿಯಾದ ಬೆಲ್ಲ ದೃಢವಾದ ಪಾರಮಾರ್ಥಿಕ ಪ್ರಗತಿಯ ಪ್ರತಿರೂಪ.

ಬಿಸಿಲಿನ ಝಳಕ್ಕೆ ಉಂಟಾಗುವ ಚರ್ಮರೋಗಕ್ಕೆ ಎಳ್ಳು ಚಮತ್ಕಾರದ ಔಷಧ. ಎಳ್ಳು ವಾತ ಪರಿಹಾರವಾದರೆ! ಬೆಲ್ಲ ಕಫ ನಿವಾರಕ.

ಗಜೇಂದ್ರ ಮಕರ ಸಂಕ್ರಮಣ
ಮಕರವಿಳಕ್ಕು, ಮಕರ ಜ್ಯೋತಿ, ಮಕರ ಕುಂಡಲ, ಮಕರ ಧ್ವಜ, ಮಕರ ಸಂಕ್ರಮಣ ಎಂದು ಮಕರವು ಅನೇಕ ಕಡೆ ಕೇಳಿಬರುತ್ತೆ. ಇದೆಲ್ಲಾ ಮಕರ ಶಬ್ದವನ್ನು ಕೇಳಿದಾಗ ಥಟ್ಟನೆ ಕಣ್ಣೆದುರು ಬಂದು ನಿಲ್ಲುವುದು ಮಕರ ಆಕ್ರಮಣ. ಮೊಸಳೆಯ ಎಳೆತ ಸೆಳೆತಕ್ಕೆ ಸಿಕ್ಕಿ ಶಕ್ತಿಯೇ ಉಡುಗೆ ಹೋಗಿ ಇನ್ನೇನು ಕರಿ ಮಕರದ ವಶ ಆಯ್ತು ಎಂದಾಗ ಕರಿ ಶ್ರೀಹರಿಯನ್ನೇ ಕರೆಯುತ್ತ ಮೊರೆಹೊಕ್ಕು ಕೆರೆಯಿಂದ ತಾವರೆಯನ್ನು ಎತ್ತಿಕ್ಕಲು ತಕ್ಷಣ ಆದಿಮೂಲನು ಧಾವಿಸಿ ಬಂದು ಸುದರ್ಶನ ಚಕ್ರದಿಂದ ಮಕರದ ಆಕ್ರಮಣದಿಂದ ಗಜೇಂದ್ರನ ಸಂಕಟಹರಣ.

ಪುಣ್ಯ ವೃದ್ಧಿಗಾಗಿ ಜನಸಾಮಾನ್ಯರಷ್ಟೇ ಅಲ್ಲ, ರಾಜ ಮಹಾರಾಜರೂ ಸಂಕ್ರಾಂತಿಯಂದು ದಾನ ಮಾಡುತ್ತಿದ್ದರು. ಕನ್ನಡದ ಖ್ಯಾತ ರಾಷ್ಟ್ರಕೂಟ ಅಮೋಘವರ್ಷ ನೃಪತುಂಗ ಚಕ್ರವರ್ತಿ ಭೂದಾನ ಮಾಡಿದ ತಾಮ್ರಪಟಗಳು ಇದನ್ನು ಸಮರ್ಥಿಸುತ್ತದೆ.

ಅಂದು ಗಜೇಂದ್ರನಿಗೆ ಮಕರ ಸಂಕ್ರಮಣವಾಯಿತು. ಇಂದು ಮನುಷ್ಯನಿಗೆ ಮಕರ ಸಂಕ್ರಮಣವಾಗಿದೆ. ನಾನು ನನ್ನದು ಎಂಬ ಮಕಾರ ಮಮಕಾರಗಳು ಮನುಷ್ಯನನ್ನು ಆಕ್ರಮಿಸಿದೆ. ಮನುಷ್ಯ ಈ ಮಕರದ ಪ್ರಖರ ಕರಗಳ ಸೆಳೆತದಿಂದ ಸಂಸಾರ ಸರಸ್ಸಿನಲ್ಲಿ ಮುಳುಗಿ ಹೋಗದಂತಿರಲು ಮಾನವರಿಗಾಗಿ ಇರುವ ಏಕೈಕ ಮಾರ್ಗವಾಗಿ ಕಂಸಾರಿಯಾದ ಶ್ರೀಹರಿ ಹೃದಯ ಕಮಲವನ್ನೇ ಅರ್ಪಿಸುವಾಗ ಹರಿಯ ಸು-ದರ್ಶನವಾಗುತ್ತದೆ. ಭವಬಂಧನದ ಭೇಧವಾಗುತ್ತದೆ. ಸಂಸಾರ ಸಂಕಷ್ಟದ ಛೇದನವಾಗುತ್ತದೆ. ಮಕಾರ ಮಮಕಾರಗಳ ಮರ್ದನವಾಗುತ್ತದೆ. ಇದೇ ಮಕರ ಸಂಕ್ರಮಣದ ನಿಜವಾದ ಸಂದೇಶ ಸಾರ. ಸಾರ ಸಂದೇಶ.

ಎಳ್ಳು ಹಂಚುವುದೇಕೆ?
ಸಂಕ್ರಾಂತಿ ಕುರಿತಾಗಿ ಒಂದು ಪೌರಾಣಿಕ ಹಿನ್ನೆಲೆ ಹೀಗಿದೆ:
ಬ್ರಹ್ಮನ ವರದಿಂದ ಉನ್ಮತ್ತನಾಗಿ ಲೋಕಕಂಟಕನಾಗಿದ್ದ ತಿಲಾಸರುನೆಂಬ ರಾಕ್ಷಸನ ಪೀಡೆಯನ್ನು ಸಹಿಸಲಾರದೇ ಎಲ್ಲರೂ ಸೂರ‌್ಯ ದೇವನಿಗೆ ಮೊರೆ ಇಟ್ಟರು.

ಆಗ ಸೂರ್ಯನು ಕರ್ಕ ಹಾಗೂ ಮಕರ ಎಂಬಿಬ್ಬರು ಸ್ತ್ರೀಯರನ್ನು ಅವರ ಸಹಾಯಕ್ಕಾಗಿ ಪರಿವಾರವನ್ನು ಸೃಷ್ಟಿಸಿ, ಇವರಿಗೂ ತಿಲಾಸುರನಿಗೂ ಭಯಂಕರ ಯುದ್ಧವಾಗಿ ಕೊನೆಗೆ ಮಕರ ದೇವತೆಯು ತನ್ನ ಭಲ್ಲೆಯಿಂದ ರಕ್ಕಸನ ಹೊಟ್ಟೆಗೆ ತಿವಿಯಲು ಅವನ ಹೊಟ್ಟೆಯಲ್ಲಿದ್ದ ಎಳ್ಳಿನ ಸಂಗ್ರಹವು ಕಂಡುಬಂತು.

ಆ ಎಳ್ಳನ್ನು ಹೊರ ತೆಗೆದಾಗ ತಿಲಾಸರ ರಕ್ಕಸನ ಪ್ರಾಣಿ ಹಾರಿ ಹೋಯಿತು. ಆಗ ಸೂರ‌್ಯನು ಸಂತುಷ್ಟನಾಗಿ, ದೇವಿ! ನಿನ್ನನ್ನು ಭಕ್ತಿಯಿಂದ ಪೂಜಿಸಿದವರಿಗೆ ಸರ್ವಾಭೀಷ್ಟ ಸಿದ್ಧಿಸಲಿ. ನೀನು ಶೋಧಿಸಿದ ಎಳ್ಳು ಅಮೃತದಂತೆ ಸವಿಯಾಗಲಿ, ನಾನಿರುವರೆಗೆ ನಿನ್ನ ಕೀರ್ತಿ ಉಳಿಯಲಿ ಎಂದು ಹರಸಿದ. ಅಂದಿನಿಂದ ಪೀಡಾ ಪರಿಹಾರಕ್ಕಾಗಿ ಎಳ್ಳು ಹಂಚುವ ಸಂಪ್ರದಾಯ ಬೆಳೆದು ಬಂತು ಎನ್ನಲಾಗಿದೆ.

ಸುಗ್ಗಿ ಹುಗ್ಗಿ
ಸುಗ್ಗಿಯ ಕಾಲವೆಂದರೆ ಮಾರ್ಗಶಿರ ಮಾಸದಿಂದ ಪುಷ್ಯದವರೆಗೆ. (ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಿಂದ ಜನವರಿ ಮಧ್ಯಕ್ಕೆ ಮುಗಿಯುತ್ತದೆ) ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದೇ ಕರೆಯಲಾಗುತ್ತದೆ. ರವಿಯು ಧನುರಾಶಿಯನ್ನು ಪ್ರವೇಶ ಮಾಡಿದ ದಿನದಿಂದ ಮಕರ ರಾಶಿಗೆ ಪ್ರವೇಶ ಮಾಡುವವರೆಗೆ ಇದನ್ನು ಧನುರ್ಮಾಸವೆಂದು ಹೇಳುತ್ತಾರೆ. ಚಳಿಯು ವಿಪರೀತವಾಗಿ ವ್ಯಾಪಕವಾಗಿರುತ್ತದೆ. ಈ ಚಳಿಗಾಲದಲ್ಲಿ ಶರೀರದ ಚರ್ಮ ಸುಕ್ಕುಗಟ್ಟಿ, ಮುಖ ಕೈಕಾಲುಗಳಲ್ಲಿ ಬಿರಿಯುವುದುಂಟು. ಇದಕ್ಕೆ ಚಳಿಗಾಲದಲ್ಲಿ ಶರೀರದಲ್ಲಿರುವ ಉಷ್ಟಾಂಶವು ಹೆಚ್ಚು ಖರ್ಚಾಗಿ ಇದನ್ನು ಸರಿದೂಗಿಸಲು ವಾತಾವರಣ ಸರಿಯಾಗಿರದೆ ಚರ್ಮ ಸುಕ್ಕುಗಟ್ಟುತ್ತದೆ. ಶರೀರದೊಳಗಿನ ಅಗ್ನಿಯು ಮಂದವಾಗಿ ಮಲಬದ್ಧತೆಯೂ ಆಗುತ್ತದೆ. ಇದಕ್ಕೆ ಹುಗ್ಗಿಯನ್ನು ಸೇವಿಸಿದರೆ ಮೇಲೆ ಹೇಳಿದ ಶರೀರದ ಕೊರತೆಯನ್ನು ನಿವಾರಿಸಿಕೊಳ್ಳಬಹುದು. ಹುಗ್ಗಿಯನ್ನು ತಯಾರು ಮಾಡಬೇಕಾದರೆ ಅದಕ್ಕೆ ತಕ್ಕ ಪ್ರಮಾಣವನ್ನು ಹೇಳಿದ್ದಾರೆ. ಎರಡು ಭಾಗ ಹೆಸರುಬೇಳೆ, ಒಂದು ಭಾಗ ಅಕ್ಕಿ ಮತ್ತು ಮೆಣಸು, ಲವಂಗ, ಕೊಬ್ಬರಿ, ಬೆಣ್ಣೆ ಅಥವಾ ತುಪ್ಪ ಇಷ್ಟು ಸೇರಿಸಿ ಮಾಡಿದರೆ ಶಾಸ್ತ್ರೀಯವಾದ ಹುಗ್ಗಿಯಾಗುತ್ತದೆ. ಹೆಸರು ಬೇಳೆ ತಂಪು ಮತ್ತು ರೋಚಕ, ವಿರೇಚಕ, ತುಪ್ಪ ಅಥವಾ ಬೆಣ್ಣೆ ಉಷ್ಣವನ್ನು ಅಭಿವೃದ್ಧಿ ಮಾಡುವ ವಸ್ತುಗಳು. ಮೆಣಸು, ಲವಂಗ ಉಷ್ಣ ಪದಾರ್ಥಗಳು. ಇವುಗಳು ಸೇರಿದ ಆಹಾರವನ್ನು ತೆಗೆದುಕೊಂಡರೆ ಶರೀರದ ಉಷ್ಣಾಂಶವು ಸಮಧಾತುವಾಗುತ್ತದೆ. “ಸುಗ್ಗಿಯಲ್ಲಿ ಹುಗ್ಗಿ’ ಎಂಬ ಮಾತು ಇದಕ್ಕೆ ಬಂದಿದೆ.

ಮರೆಯಾದ ಸಂಭ್ರಮ
ಈಗ ಇವೆಲ್ಲಾ ಸಂಭ್ರಮಾಚರಣೆಗಳು ಉಳಿದಿವೆಯೇ? ಹೌದೆಂದರೆ ಸುಳ್ಳಾಗುತ್ತದೆ. ಏಕೆಂದರೆ ಈಗ ಯಾವುದೇ ಆಚರಣೆಗಳಾಗಲೀ ಕೇವಲ ಮಾಡಬೇಕಲ್ಲ ಎಂಬ ಕಾರಣಕ್ಕಾಗಿ ಮಾತ್ರ ಆಚರಿಸಲ್ಪಡುತ್ತಿವೆ. ಇದಕ್ಕೆ ಕಾರಣಗಳು ಮೊದಲನೆಯದಾಗಿ ಗಗನಕ್ಕೇರುತ್ತಿರುವ ಬೆಲೆಗಳು, ಸಮಯದ ಅಭಾವ, ಕಳೆದುಕೊಳ್ಳುತ್ತಿರುವ ಆಸಕ್ತಿ ಮತ್ತು ಎಲ್ಲರೂ ಟಿ.ವಿ. ಎಂಬ ಮಾಯಾಪೆಟ್ಟಿಗೆಯತ್ತ ಆಕರ್ಷಿತರಾಗಿರುವುದು ಕಾರಣವಾಗಿರಬಹುದು.

ಅಂಗಡಿಗಳಲ್ಲಿ ಸಿಗುವ ಜಂಕ್‌ಫುಡ್‌ಗಳು ಮನೆ ತಿಂಡಿಗಳಲ್ಲಿನ ಮಕ್ಕಳ ಆಸಕ್ತಿಯನ್ನು ಕಸಿದುಕೊಂಡಿರುವುದಂತೂ ನಿಜ. ಹಿಂದೆ ಹಬ್ಬ ಮುಗಿದು ಎಷ್ಟೋ ದಿನಗಳು ಕಳೆದರೂ ಮನೆಯಲ್ಲಿನ ಎಳ್ಳುಬೆಲ್ಲ ಖಾಲಿಯಾಗುತ್ತಿರಲಿಲ್ಲ. ದೂರದ ಊರುಗಳಲ್ಲಿನ ನೆಂಟರಿಷ್ಟರಿಗೆ ಅದರ ರವಾನೆಯಾಗುತ್ತಿತ್ತು. ಮನೆಗೆ ಯಾರೇ ಬಂದರೂ ಅವರಿಗೆ ಎಳ್ಳನ್ನು ತಿನ್ನಿಸದೆ ಕಳುಹಿಸುತ್ತಿರಲಿಲ್ಲ.


ಇತ್ತೀಚೆಗೆ ಕೇವಲ ಕೆಲವೇ ಮನೆಗಳಲ್ಲಿ ಸಂಕ್ರಾಂತಿಯ ಆಚರಣೆಗಳು ಕಂಡುಬರುತ್ತಿವೆ. ಅವರು ಮನೆಯಲ್ಲಿ ಎಳ್ಳು, ಸಕ್ಕರೆ ಅಚ್ಚುಗಳನ್ನು ತಯಾರಿಸುವ ಗೋಜಿಗೇ ಹೋಗುತ್ತಿಲ್ಲ. ದುಡ್ಡು ಕೊಟ್ಟರೆ ಸಾಕು ಎಲ್ಲವೂ ಅಂಗಡಿಗಳಲ್ಲಿ ಸಿಗುತ್ತವೆ. ತಂತಮ್ಮ ಆದಾಯಕ್ಕೆ ತಕ್ಕಂತೆ ತಂದು ನಾಲ್ಕಾರು ಮನೆಗಳಿಗೆ ಕೊಟ್ಟಶಾಸ್ತ್ರ ಮಾಡಿ ಹಬ್ಬದ ಸಂಪ್ರದಾಯಕ್ಕೆ ಮುಕ್ತಾಯ ಹಾಡುತ್ತಾರೆ. ಮಧ್ಯಮ ವರ್ಗದವರಿಗಂತೂ ಹಬ್ಬ ಬಂತೆಂದರೆ ಸಾಕು ತಲೆಬಿಸಿ ಶುರುವಾಗುತ್ತದೆ. ಹಣದುಬ್ಬರದ ಕಾವಿನಿಂದ ದಿನನಿತ್ಯದ ಖರ್ಚುಗಳನ್ನು ತೂಗಿಸುವುದೇ ಕಷ್ಟವಾಗಿರುವಾಗ ಹಬ್ಬಗಳ ಆಗಮನ ಅವರಿಗೆ ಕಹಿಯಾಗಿಯೇ ಇರುತ್ತದೆ.

ಸಂಪ್ರದಾಯವನ್ನು ಬಿಡಬಾರದೆಂದು ಆಚರಣೆಗಳಿಗೆ ಅಂಟಿಕೊಂಡು ಎಲ್ಲವನ್ನೂ ಸಿದ್ಧಪಡಿಸಿದ್ದರೂ ಅವುಗಳನ್ನು ಆಚರಿಸುವ ಆಸಕ್ತಿ ಮಕ್ಕಳಿಗೇ ಇಲ್ಲವಾಗಿದೆ. ಅವರನ್ನು ಟೆಲಿವಿಷನ್‌ನ ಎದುರಿನಿಂದ ಏಳಿಸುವುದೇ ಒಂದು ಅಸಾಧ್ಯವಾದ ಕೆಲಸವಾಗಿದೆ. ಜೀನ್ಸ್‌ ಪ್ಯಾಂಟ್, ಟೀಷರ್ಟ್, ಚೂಡಿದಾರ್‌ಗಳು ಜರತಾರಿ ಲಂಗಗಳನ್ನು ಒಂದು ಮೂಲೆಗೆ ದೂಡಿಬಿಟ್ಟಿವೆ. ಆದರೂ ಹಿಂದಿನ ಉಡುಗೆಗಳ ಸೊಗಡು ಇಂದಿನ ಡ್ರೆಸ್‌ಗಳಿಗೆಲ್ಲಾ ಹೇಗೆ ಬಂದೀತು ?

ಒಟ್ಟಿನಲ್ಲಿ ಹೇಳುವುದಾದರೆ ಎಲ್ಲ ಆಚರಣೆಗಳು ಕೇವಲ ಕಾಟಾಚಾರದಂತೆ ಆಗಿಬಿಟ್ಟಿವೆ. ಯಾರೂ ಮನಃಪೂರ್ವಕವಾಗಿ ಆಚರಿಸುತ್ತಿಲ್ಲ. ಯಾವುದೇ ಆಚರಣೆಗಳಾಗಲಿ, ನಾವು ಅದರತ್ತ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಂಡರೆ ಮಾತ್ರ ಅದಕ್ಕೊಂದು ಅರ್ಥವಿರುತ್ತದೆ.

“ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ’ಯಂತೆ ಬೆರೆಸಿದಾಗ ಮಾತ್ರ ನಾವು ಸಂಪೂರ್ಣವಾಗಿ ಆನಂದಾನುಭವವನ್ನು ಪಡೆಯಬಹುದು. ಜೀವನದ ಏಕತಾನತೆಯಿಂದ ಹೊರಬರಬೇಕಾದರೆ ನಾವು ಕೊಂಚಕಾಲವಾದರೂ ಈ ಆಚರಣೆಗಳಲ್ಲಿ ತೊಡಗಿಕೊಳ್ಳಬೇಕು.

ಸಂಪ್ರದಾಯಗಳು ಬಂದ ಬಗೆ ಹೇಗೆ ? ಅದರ ಹಿಂದಿನ ಉದ್ದೇಶ ಎಂತಹುದು ? ಎಂಬುದನ್ನು ನಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕು, ಹಬ್ಬಗಳನ್ನು ಶತ್ರುವಿನಂತೆ ಕಾಣದೆ ಮಿತ್ರರಂತೆ ಸ್ವಾಗತಿಸಬೇಕು. ನಮ್ಮ ಸಂಸ್ಕೃತಿ, ಧರ್ಮಗಳ ಆಗರವೇ ಈ ಹಬ್ಬಗಳು ಎಂಬುದನ್ನು ನಾವು ಮರೆಯಬಾರದು. ಯಾವುದೋ ಕಾರ್ಯ ನಿಮಿತ್ತ ದೂರದೂರಿನಲ್ಲಿರುವ ಮನೆಯ ಸದಸ್ಯರನ್ನು ಒಟ್ಟುಗೂಡಿಸುವುದೂ ಕೂಡ ಈ ನಮ್ಮ ಸಂಪ್ರದಾಯಗಳು.

(ವಿವಿಧ ಮೂಲಗಳಿಂದ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Dr Gururaj PoshettihalliEclipseEllundeKannada News WebsiteLatest News KannadaMakara SankrantiSankranti FestivalSesameಎಳ್ಳುಎಳ್ಳುಂಡೆಗ್ರಹಣಡಾ.ಗುರುರಾಜ ಪೋಶೆಟ್ಟಿಹಳ್ಳಿತಿಲಮಕರ ಸಂಕ್ರಮಣಸಂಕ್ರಾಂತಿಸಂಪ್ರದಾಯ
Previous Post

ಭದ್ರಾವತಿ ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ನಿಧನ

Next Post

ಹೊಸದುರ್ಗ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಎಸಿಬಿ ಬಲೆಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹೊಸದುರ್ಗ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಎಸಿಬಿ ಬಲೆಗೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶಿವಮೊಗ್ಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಮಲೆನಾಡಿನ ಮೆಡಿಕಲ್ ಹಬ್ ಆಗಲಿದೆ ಸಿಹಿಮೊಗೆ

July 23, 2025

ಪಾಂಡವಪುರ | ಭೀಮನ ಅಮಾವಾಸ್ಯೆಗೆ ಉಕ್ಕಡಮ್ಮ ದೇಗುಲಕ್ಕೆ ತೆರಳುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

July 23, 2025
File Image

ಶಿವಮೊಗ್ಗ | ಮನೆಯಲ್ಲಿ ಸಿಲಿಂಡರ್ ಸ್ಫೋಟ | ಮೂವರಿಗೆ ಗಾಯ

July 23, 2025

ಭದ್ರಾವತಿ ಪೌರಾಯುಕ್ತ ಚನ್ನಪ್ಪನವರ್ ವರ್ಗಾವಣೆ | ನೂತನ ಕಮಿಷನರ್ ನಿಯೋಜಿಸದ ಸರ್ಕಾರ

July 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶಿವಮೊಗ್ಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಮಲೆನಾಡಿನ ಮೆಡಿಕಲ್ ಹಬ್ ಆಗಲಿದೆ ಸಿಹಿಮೊಗೆ

July 23, 2025

ಪಾಂಡವಪುರ | ಭೀಮನ ಅಮಾವಾಸ್ಯೆಗೆ ಉಕ್ಕಡಮ್ಮ ದೇಗುಲಕ್ಕೆ ತೆರಳುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

July 23, 2025
File Image

ಶಿವಮೊಗ್ಗ | ಮನೆಯಲ್ಲಿ ಸಿಲಿಂಡರ್ ಸ್ಫೋಟ | ಮೂವರಿಗೆ ಗಾಯ

July 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!