ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮನುಷ್ಯರಲ್ಲಿ ಕೆಲವರಿಗೆ ಒಂದು ದುರ್ಗುಣ ಇದೆ. ನಾನು ನನ್ನ ಧರ್ಮ ಪಾಲನೆ ಮಾಡುತ್ತಿದ್ದೇನೆ. ಅದನ್ನು ಉಳಿಸಲು ಎಷ್ಟೇ ಮೌಲ್ಯಕೊಡಲು ತಯಾರಿದ್ದೇನೆ. ಏನು ಬೇಕಾದರೂ ಮಾಡುತ್ತೇನೆ ಎಂಬ ಅಹಂ. ಇದು ಈಗಲ್ಲ. ಬಹಳ ಪೂರ್ವದಲ್ಲಿ ರಾಮಾಯಣ, ಮಹಾಭಾರತದಲ್ಲೂ ನಡೆದ ದೊಡ್ಡ ದುರಂತದ ಮೂಲ. ಹಾಗಾದರೆ ಯಾವುದು ಧರ್ಮ?
ದ್ರೋಣಾಚಾರ್ಯರಿಗೆ, ಭೀಷ್ಮಾಚಾರ್ಯರಿಗೆ, ಕೃಪಾಚಾರ್ಯರಿಗೆ(ದುರ್ಯೋಧನನ ವಿಚಾರ ಬಿಡಿ. ಆತ ಒಬ್ಬ ಮೂರ್ಖ)ಕರ್ಣನಿಗೆ ಕೃಷ್ಣ ಹೇಳುತ್ತಾನೆ. ಹೆಚ್ಚೇಕೆ ಸ್ವಯಂ ಬ್ರಹ್ಮನೇ ಅಚಾರ್ಯ ದ್ರೋಣರಿಗೆ ಹೇಳಿದ್ದಾನೆ. ದಿವ್ಯಾಸ್ತ್ರ ಪ್ರಯೋಗಿಸಬೇಡಿ. ಅದು ಧರ್ಮ ರಕ್ಷಣೆಗಾಗಿ ಇರುವಂತದ್ದು ಎಂದು. ಕೃಷ್ಣನೂ ಯುದ್ಧಾತ್ ಪೂರ್ವದಲ್ಲೇ ಹೇಳಿದ್ದ. ಆಗ ಆಚಾರ್ಯರು, ಕರ್ಣನೂ ಕೃಷ್ಣನಲ್ಲಿ ಪ್ರಶ್ನಿಸುತ್ತಾರೆ. ಹೇ ವಾಸುದೇವ ನಾವೂ ನಮ್ಮ ನಮ್ಮ ಧರ್ಮ ಪಾಲನೆ ಮಾಡುತ್ತಿದ್ದೇವೆ. ಹಸ್ತಿನಾಪುರವನ್ನು ಉಳಿಸುವ ರಾಜಧರ್ಮದ ಪಾಲನೆಯ ಧರ್ಮ ನಮ್ಮದಾಗಿದೆ. ಹಾಗಾಗಿ ನಾವೂ ಧರ್ಮದ ಪರವಾಗಿ ವೃತ ನಿಷ್ಠೆಯಲ್ಲಿರುವವರು. ಪಾಂಡವರೂ ಅವರ ಧರ್ಮ ಪಾಲಿಸಲಿ. ಬೇಡ ಎನ್ನಲ್ಲ. ಯುದ್ಧದಲ್ಲಿ ಗೆಲ್ಲುವುದೇ ಅವರವರ ಧರ್ಮ ಎನ್ನುತ್ತಾರೆ.
ನಗುತ್ತಾ ವಾಸುದೇವನು, ’ಹೇ ಆಚಾರ್ಯ ಶ್ರೇಷ್ಟರೇ, ದಾನ ವೀರ ಕರ್ಣನೇ, ನೀವು ತಿಳಿದುಕೊಂಡ ಧರ್ಮವು ಅದು ನಿಮ್ಮ ವೈಯಕ್ತಿಕವಾದ ಕೃತಜ್ಞತೆಯ ಧರ್ಮವೇ ಹೊರತು, ಭಾರತೀಯ ಪರಂಪರೆಯ ಹಿತಾಸಕ್ತಿಯ ಧರ್ಮವಾಗದು. ಹೇ ಭೀಷ್ಮಾಚಾರ್ಯರೇ ನೀವು ಜನಿಸಿದ ನಂತರ, ಅರ್ಜುನನೂ ಜನಿಸಿದ, ಶಿಖಂಡಿಯೂ ಜನಿಸಿದ. ಹಾಗೆಯೇ ದ್ರೋಣಾಚಾರ್ಯರ ನಂತರ ದೃಷ್ಟಧ್ಯುಮ್ನನ ಜನನವೂ ಆಯ್ತು. ಕರ್ಣನ ಬೆನ್ನ ಹಿಂದೆಯೇ ಅರ್ಜುನನ ಜನನವೂ ಆಗಿದೆ. ದುರ್ಯೋಧನನ ಜತೆಗೆ ಭೀಮ ಸೇನನ ಜನನವೂ ಆಗಿದೆ. ನಾನು ಯಾರೆಂಬ ಅರಿವಿದ್ದವನನ್ನು ಭಗವಂತ ಎನ್ನುತ್ತೇವೆ. ಅವನಿಗೆ ತಿಳಿದಿದೆ ಮುಂದೇನು ಎಂಬುದು. ಅದನ್ನು ನಾನು ತಿಳಿದಿರುವುದರಿಂದ ಹೇಳುತ್ತೇನೆಯೇ ಹೊರತು ಯಾರ ಪರವಾಗಿಯೂ ಹೇಳುವುದಲ್ಲ. ಇಲಿ ಹುಟ್ಟಿಸಿದ ದೇವರು ಬೆಕ್ಕನ್ನೂ ಸೃಷ್ಟಿಸಿದೆ. ಹೆಚ್ಚೇಕೆ ಅಗ್ನಿ ಜನನವಾದಾಗ ಜಲವನ್ನೂ ಸೃಷ್ಟಿಸಿದ. ಇದೆಲ್ಲ ಯಾಕೆ ಎಂದು ತಿಳಿಯುವುದೇ ಧರ್ಮವಲ್ಲದೆ, ನಿಮ್ಮ ನಿಮ್ಮ ವೈಯಕ್ತಿಕ ವಿಚಾರಗಳು ಇಲ್ಲಿ ಈ ಕುರುಕ್ಷೇತ್ರದಲ್ಲಿ ಧರ್ಮವಾಗದು. ಎಂದು ಕೃಷ್ಣನು ನಗುತ್ತಾ ರಥವೇರಿದ.
ಜಗತ್ತಿನಲ್ಲಿ ಈಗ ಚೈನಾ ದೇಶವು ತಾನೇ ದೊಡ್ಡಣ್ಣನಾಗಲು ಹೊರಟಿದೆ. ಆದರೆ ಅಡ್ಡದಾರಿ ಹಿಡಿದಿದೆ. ಭಾರತವನ್ನು ನಾಶ ಮಾಡುವ ಒಂದು ಸಂಚು ಇದರದ್ದಾಗಿದೆ. ಭಾರತದ ನಾಶ ಎಂದಾಕ್ಷಣ ಸನಾತನ ವಿರೋಧಿಗಳು ಕೈ ಜೋಡಿಸಿದರು. ಆದರೆ ಅವರಿಗೆ ಚೈನಾ ಪೂರ್ಣ ಸತ್ಯ ಹೇಳಲಿಲ್ಲ. ತಾವು ತಿಳಿದುಕೊಂಡದ್ದೇ ಸರಿ ಎಂದು, ಸನಾತನ ವಿರೋಧಿಗಳು ಈ ಕಾರ್ಯಕ್ಕೆ ಏಜೆಂಟ್’ಗಳಾದರು. ಮುಂದಿನ ಪರಿಣಾಮ ಬೆಳಕಿಗೆ ಬರದೇ ಇರಲಾರದು. ಆಗ ಕೈ ಮೀರಿ ಹೋಗಿಯಾಗಿರುತ್ತದೆ. ಯಾಕೆಂದರೆ ಲಕ್ಷಾಂತರ ವರ್ಷದ ಚರಿತ್ರೆ ಇರುವ ಸನಾತನ ಧರ್ಮಕ್ಕೆ ಅಳಿವಿಲ್ಲ. ಕಾರಣ ಜಗತ್ತಿನ ನೈಜ ಧರ್ಮದ ಪಾಲನೆ ಮಾಡುವಂತದ್ದೇ ಸನಾತನ ಧರ್ಮ. ಸರಿಯಾದ ಧರ್ಮ ಪಾಲನೆ ಮಾಡಿದರೆ ಭಗವಂತನಿಗೂ ದಂಡಿಸುವ ನೈತಿಕ ಬಲ ಇರುತ್ತದೆಯೇ? ಹೇಗೆ ನೈಜ ಧರ್ಮ ಪಾಲಕರಾದ ಪಾಂಡವರ ಜತೆಗೆ ಶ್ರೀಕೃಷ್ಣನು ಸೇರಿದನೋ ಅದೇ ರೀತಿ ಇಲ್ಲಿಯೂ ಭಗವಂತನ ಅನುಗ್ರಹ ಇರುತ್ತದೆ.
Get in Touch With Us info@kalpa.news Whatsapp: 9481252093
Discussion about this post