ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿರುವ ಕೆ.ಎಸ್. ಗುರುಮೂರ್ತಿ ಅವರಿಗೆ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಪತ್ರ ಬರೆದು ಶುಭ ಕೋರಿದ್ದಾರೆ.
ನಿನ್ನೆ ಗುರುಮೂರ್ತಿ ಅವರು ಅಧಿಕಾರ ವಹಿಸಿಕೊಂಡ ನಂತರ ಸಭಾ ಕಾರ್ಯಕ್ರಮ ನಡೆಯಿತು. ಈ ವೇಳೆಯಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರು ಬರೆದ ಪತ್ರ ಅಲ್ಲಿಗೆ ತಲುಪಿತು. ಗುರುಮೂರ್ತಿ ಅವರಿಗೆ ಶುಭ ಕೋರಿ ತಿಮ್ಮಪ್ಪ ಬರೆದ ಪತ್ರ ಅದಾಗಿದ್ದು, ಅಲ್ಲಿಯೇ ಪತ್ರವನ್ನು ಓದಲಾಯಿತು.

ಖದ್ದಾಗಿ ಆಗಮಿಸಿ, ಶುಭ ಕೋರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪತ್ರದ ಬರೆದು ಹಾರೈಸಿದ್ದಾರೆ. ವಿಭಿನ್ನ ಪಕ್ಷದ ನಾಯಕರಾಗಿದ್ದರೂ, ಶುಭ ಹಾರೈಸುವ ಮೂಲಕ ತಮ್ಮ ರಾಜಕೀಯ ಪ್ರಬುದ್ಧತೆಯನ್ನು ಅವರು ಮೆರೆದಿದ್ದಾರೆ.
Get In Touch With Us info@kalpa.news Whatsapp: 9481252093
















