ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈಗ ಉಪನಯನ ಮಾಡಿದ ಕೆಲವು ಮಕ್ಕಳಿಗೆ ಭೋಜನವಿಧಿ ಗೊತ್ತಿರುವದಿಲ್ಲ ಹೇಗೆ ಚಿತ್ರಾವತಿ ತಿರುಗಬೇಕು, ಏನು ಮಂತ್ರ ಹೇಳಬೇಕು ಎಷ್ಟು ಬಲಿಯನ್ನು ಹಾಕಬೇಕು ಅಂತ ತಂದೆ ತಾಯಿಗೆ ಕೂಡಾ ಅನುಕೂಲವಾಗಲಿ ಅಂತ ತಿಳಿಸಿ ಕೊಡುತ್ತಿದ್ದೇನೆ.
ಪ್ರಪ್ರಥಮವಾಗಿ ಅನ್ನಪೂರ್ಣ ಸ್ವರೂಪವಾದ ಬಡಿಸಿರುವ ಬಾಳೆಎಲೆಗೆ (ಬಡಿಸಿರುವ ತಟ್ಟೆಗೆ)ನಮಸ್ಕಾರ ಮಾಡಿ.
ಓಂ ಭೂರ್ಭುವಸ್ಸುವಃ॥ ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್॥ ಇತಿ ಪ್ರೋಕ್ಷ್ಯ॥ ಈ ಮಂತ್ರ ಹೇಳಿ ಅನ್ನಕ್ಕೆ ನೀರನ್ನು ಚಿಮುಕಿಸುವುದು.
ಸತ್ಯಂತ ವರ್ತೇನ ಪರಿಷಿಂಚಾಮಿ॥ ( ) ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ॥ ಈ ಮಂತ್ರ ಹೇಳಿನೀರಿನಿಂದ ಅನ್ನದ ತಟ್ಟೆ _ ಬಾಳೆ ಎಲೆಯನ್ನು ಪ್ರದಕ್ಷಿಣವಾಗಿ ನೀರನ್ನು ಹಾಕುವದು. ನಂತರ ಬಲ ಭಾಗದಲ್ಲಿ ನೀರಿನಿಂದ ಗೆರೆ ಎಳೆದು-ನಂತರ ಅನ್ನಕ್ಕೆ ಸ್ವಲ್ಪ ತುಪ್ಪ ಕಲಿಸಿ (ಉಪ್ಪು ಹಾಕಿರಬಾರದು) ಓಂ ಚಿತ್ರಾಯ ನಮಃ ಓಂ ಚಿತ್ರ ಗುಪ್ತಾಯ ನಮಃ ಓಂ ಯಮಾಯ ನಮಃ ಓಂ ಯಮಧರ್ಮಾನಮಃ (ಸ್ವಾಹಾ) ಅಂತ ಹೇಳುತ್ತಾ ಇತಿ ಅನ್ನದ ಅಗುಳಿನ ಬಲಿಯನ್ನು ಇಡುವುದು ನಂತರ ಬಲಗೈಯಲ್ಲಿ ನೀರು ಹಾಕಿಕೊಂಡು ಕೆಳಗಿನ ಮಂತ್ರ ಹೇಳಿ…..ಕುಡಿಯಬೇಕು.
ಅಹಂವೈಶ್ವಾನರೋಭೂತ್ವಾ ಪ್ರಾಣೀನಾಂ ದೇಹಮಾಶ್ರಿತಃ ಪ್ರಾಣಾಪಾನ ಸಮಾಯುಕ್ತಂ ಪಚಾಮ್ಯನ್ನಮ್ ಚತುರ್ವಿದಂ… ಅಮೃತಮಸ್ತು ಅಮೃತೋಪಸ್ತರಣಮಸಿ ಸ್ವಾಹಾ ಅಂದು ಬಲಗೈಯಲ್ಲಿ ಹಿಡಿದ ನೀರನ್ನು ಆಪೋಷಣ ಮಾಡಿ ನಂತರ ಒಂದೇ ಸಾರಿ ಅವುಗಳ ಮೇಲೆ ನೀರು ಬಿಟ್ಟು ಎಲ್ಲ ಬಲಿ ಒಟ್ಟು ಸೇರಿಸುವುದು; ಕೈ ತೊಳೆದುಕೊಳ್ಳುವುದು;
ಓಂ ಪ್ರಾಣಾಯ ಸ್ವಾಹಾ ಓಂ ಅಪಾನಯ ಸ್ವಾಹಾ ಓಂ ವ್ಯಾನಾಯ ಸ್ವಾಹಾ ಓಂ ಉದಾನಾಯ ಸ್ವಾಹಾ ಓಂ ಸಮಾನಯ ಸ್ವಾಹಾ ಓಂ ಬ್ರಹ್ಮಣೇ ಸ್ವಾಹಾ॥ ಇತಿ ಷಡ್ವಾರಂ ಪ್ರಾಣಾಹುತಿಂ ಮಖೇ ಜುಹುಯಾತ್॥ ಅಂದರೆ ಆರು ತುತ್ತುಗಳನ್ನು ಮೇಲಿನ ಮಂತ್ರ ಹೇಳುತ್ತಾ (ಜಠರಾಗ್ನಿಗೆ ಬಲಿ) ತುತ್ತನ್ನು ಸ್ವೀಕರಿಸಬೇಕು…. ಹೀಗೆ ತುತ್ತನ್ನು ಸ್ವೀಕರಿಸುವಾಗ ಎಡಗೈಯಿಯ ಅನಾಮಿಕ ಬೆರಳಿನಿಂದ ಬಾಳೆ ಎಲೆಯ ಎಡಗಡೆ ಒತ್ತಿ ಹಿಡಿಯಬೇಕು ತುತ್ತು ಸ್ವೀಕರಿಸಿ ನಂತರ ಆ ಬೆರಳಿಗೆ ನೀರಿನಿಂದ ತೊಳೆದು ಕಣ್ಣಿಗೆ ಹಚ್ಚಿಕೊಂಡು ಊಟವನ್ನು ಮಾಡಬೇಕು. ಊಟವಾದ ಮೇಲೆ ಬಲಗೈಯಲ್ಲಿ ನೀರನ್ನು ಹಾಕಿಕೊಂಡು ಅಮೃತಾ ಪಿ ಧಾನಮಸಿ ಸ್ವಾಹಾ ಅಂತ ಹೇಳಿ ಆಪೋಶನ ಮಾಡಬೇಕು. ನಂತರ ಬಲಗೈ ನಾಲ್ಕು ಬೆರಳುಗಳನ್ನು ನೆಲಕ್ಕೆ ಊರಿ *ಅನ್ನ ದಾತಾ ಸುಖಿ ಭವ* ಅಂತ ಅನ್ನ ಹಾಕಿದವರು ಸುಖವಾಗಿರಲಿ ಅಂತ ಹಾರೈಸಿವುದು. ನಂತರ ಕೈಕಾಲು ತೊಳೆದು ಹೊಟ್ಟೆ ಮುಟ್ಟಿಕೊಂಡು, ಅಗಸ್ತ್ಯೆಂ ಕುಂಭಕರ್ಣಂ ಚ ಶನಿಂ ಚ ವಡವಾನಲಂ ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ॥ ಇತಿ ಜಪೇತ್॥
ನಾಳೆ: ಉಪನಯನ ಎಂದರೇನು? ಲೇಖನ ಸರಣಿ-4: ಗಾಯತ್ರೀ ಬ್ರಾಹ್ಮಣ್ಯಕ್ಕೆ ಮೂಲ
Get in Touch With Us info@kalpa.news Whatsapp: 9481252093
Discussion about this post