No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Saturday, April 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಉಪನಯನ ಎಂದರೇನು? ಲೇಖನ ಸರಣಿ-8: ಗಾಯತ್ರೀ ಮಂತ್ರದ ಮಹತ್ವ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 28, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ, Small Bytes
0
ಉಪನಯನ ಎಂದರೇನು? ಲೇಖನ ಸರಣಿ-4: ಗಾಯತ್ರೀ ಬ್ರಾಹ್ಮಣ್ಯಕ್ಕೆ ಮೂಲ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಮಕ್ಕಳಿಗೆ ಬ್ರಹ್ಮೋಪದೇಶದಲ್ಲಿ ತಂದೆ ಗುರಸ್ಥಾನದಲ್ಲಿ ಗಾಯತ್ರೀ ಮಂತ್ರೋಪದೇಶವನ್ನು ಮಾಡುತ್ತಾರೆ. ಗಾಯತ್ರೀ ಮಂತ್ರೋಪದೇಶ ಪಡೆಯದಿದ್ದರೆ ಯಾವದೇ ಪೂಜೆ ಪುನಸ್ಕಾರ, ಕರ್ಮ ಏನೂ ಮಾಡಲು ಅಧಿಕಾರವಿಲ್ಲ ಅದಕ್ಕಾಗಿಯೇ ಮೊದಲು ಏಂಟು ವರ್ಷಕ್ಕೆ ಮಕ್ಕಳಿಗೆ ಬ್ರಹ್ಮೋಪದೇಶ ಮಾಡುತ್ತಿದ್ದರು. ಆದರೆ ಈಗ ಬರೀ ಆಡಂಬರಕ್ಕೆ ಮಹತ್ವ, ಕೆಲವರಂತೂ ಮದುವೆ ಮುಂದೆ ಮಾಡಿದರಾಯಿತು ಅನ್ನುವವರು ಇದ್ದಾರೆ. ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಏನು ಸಂಸ್ಕಾರ ಕೊಡಬೇಕೊ ಅದನ್ನು ಕೊಡಬೇಕು. ಮಕ್ಕಳಿಗೆ ಸರಿ ವಯಸ್ಸಿಗೆ ಉಪನಯನ ಮಾಡುವುದರಿಂದ ಮತ್ತು ಪ್ರತಿ ದಿನ ಗಾಯತ್ರೀ ಮಂತ್ರ ಪಠಣೆಯಿಂದ ದೈಹಿಕ, ಮಾನಸಿಕ ವಿದ್ಯೆ ಬುದ್ಧಿ ಎಲ್ಲದರಲ್ಲೂ ತೇಜಸ್ಸನ್ನು ಪಡೆಯುತ್ತಾರೆ.

ವಿಶ್ವಾಮಿತ್ರ ಮಹರ್ಷಿಗಳೇ ಹೇಳುವಂತೆ ನಾಲ್ಕು ವೇದಗಳು ಹುಡುಕಿದರೂ ಈ ಮಂತ್ರಕ್ಕೆ ಸರಿ ಹೊಂದುವ ಬೇರೆ ಮಂತ್ರವಿಲ್ಲ , ಸಮಸ್ತ ವೇದಗಳು, ಯಜ್ಞಗಳೂ, ದಾನಗಳೂ, ವಿವಿಧ ತಪಸ್ಸುಗಳು ದಾನಗಳು ಸೇರಿಸಿದರೂ ಈ ಗಾಯತ್ರೀ ಮಂತ್ರದ ಮಹಾತ್ಮೆಗೆ ಸಮವಾಗಲಾರದು. ಸ್ವತಃ ಬ್ರಹ್ಮನೇ ಗಾಯತ್ರೀ ಮಂತ್ರದ ಮಹಾತ್ಮೆಯನ್ನು ಹೀಗೆ ವರ್ಣಿಸಿದ್ದಾನೆ…

ಗಾಯತ್ರ್ಯಾಃ ನ ಪರಂಜಪ್ಯಂ
ಗಾಯತ್ರ್ಯಾಃ ನ ಪರಂ ತಪಃ
ಗಾಯತ್ರ್ಯಾಃ ನ ಪರಂ ದ್ಯೇಯಂ
ಗಾಯತ್ರ್ಯಾಃ ನ ಪರಂ ಹುತಃ

ಅರ್ಥಾತ್ ಗಾಯತ್ರೀ ಮಂತ್ರ ಜಪಕ್ಕಿಂತಲೂ ಹೆಚ್ಚಿನ ಮಂತ್ರ ಜಪ ಮತ್ತೊಂದಿಲ್ಲ, ಅದಕ್ಕಿಂತಲೂ ತಪಸ್ಸೂ ಬೇರೆ ಇಲ್ಲ. ಆ ಮಂತ್ರಕ್ಕಿಂತಲೂ ಧ್ಯೇಯವಾದುದು ಇನ್ನಿಲ್ಲ. ಗಾಯತ್ರೀ ಹೋಮಕ್ಕಿಂತಲೂ ಹಿರಿದಾದ ಬೇರೆ ಹೋಮವೇ ಇಲ್ಲ. ಹಾಗಾದರೆ ಈ ಗಾಯತ್ರೀ ಮಂತ್ರದ ಮಹತ್ವ ಏನು. ಸ್ನೇಹಿತರೇ ಅದನ್ನು ಬಿಡಿಸಿ ಹೇಳುತ್ತೇನೆ.

ಗಾಯತ್ರೀ ಮಹಾ ಮಂತ್ರ
ಓಂ ಭೂರ್ಭುವಸ್ಸುವಃ ತತ್ಸುವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧೀಯೋ ಯೋ ನಃ ಪ್ರಚೋದಯಾತ್

ಇದು ಗಾಯತ್ರೀ ಮಹಾ ಮಂತ್ರ. ಈ ಮಹಾಮಂತ್ರದಲ್ಲಿ ಮಹಾಶಕ್ತಿ ಅಡಗಿದೆ. ಹೇಗೆ ಅಂದರೆ ಆ ಮಂತ್ರದ ಪ್ರತಿಯೊಂದು ಅಕ್ಷರವೂ ಒಂದೊಂದು ದೇವರ ಬೀಜಾಕ್ಷರವೇ ಆಗಿದೆ. ಈ ಇಪ್ಪತ್ತನಾಲ್ಕು ಅಕ್ಷರಗಳ ಸಮಷ್ಟೀ ಗಾಯತ್ರೀ ಮಂತ್ರದಲ್ಲಿ ಗಾಯತ್ರೀ, ಸಾವಿತ್ರೀ, ಸರಸ್ವತೀ ಮತ್ತು ಸಂಧ್ಯಾ ದೇವತೆಗಳಲ್ಲದೇ ಗಣಪತಿಯಿಂದ ಆರಂಭಿಸಿ ತುಳಸಿವರೆಗೆ ಇಪ್ಪತ್ತನಾಲ್ಕು ಪ್ರಮುಖ ದೇವತೆಗಳ ಮತ್ತು ದೈವಿ ಶಕ್ತಿಯ ಉಪಾಸನೆ ಇದೆ. ಆದುದರಿಂದ ಶ್ರದ್ಧಾ ಭಕ್ತಿಯಿಂದ ಮಾಡಿದ ಗಾಯತ್ರೀ ಜಪದ ಪರಿಣಾಮವಾಗಿ ಸಾಧಕನಿಗೆ ಇಪ್ಪತ್ತನಾಲ್ಕು ದೇವತೆಗಳನ್ನು ಆರಾಧಿಸಿದ ಶಕ್ತಿಯು ಸಮನ್ವಯವಾಗುತ್ತದೆ. ಗಾಯತ್ರೀ ಮಂತ್ರದ ಪ್ರತಿಯೊಂದು ಅಕ್ಷರವನ್ನು ಬಿಡಿಸಿ ನೋಡಿದಾಗ.

1ತ 2 ತ್ಸ 3 ವಿ 4 ತು 5 ರ್ವ 6 ರೇ 7 ಣಿ 8 ಯಂ 9 ಭ 10 ರ್ಗೋ 11 ದೇ 12 ವ 13 ಸ್ಯ 14 ಧೀ 15 ಮ 16 ಹೀ 17 ಧೀ 18 ಯೋ 19 ಯೋ 20 ನಃ 21 ಪ್ರ 22ಚೋ 23 ದ 24 ಯಾತ್.

ಹಾಗಾದರೆ ಈ ಇಪ್ಪತ್ತನಾಲ್ಕು ಅಕ್ಷಗಳಲ್ಲಿ ಇಪ್ಪತ್ತನಾಲ್ಕು ದೇವತೆಗಳ ಶಕ್ತಿ ಹೇಗೆ ಅಂತ ಬಿಡಿಸಿ ಹೇಳುತ್ತೇನೆ.
ಮೊದಲನೇ ಅಕ್ಷರ ತ ಕಾರ ಇದು ಅಂಧಕಾರವನ್ನು ತೊಲಗಿಸುತ್ತದೆ. ಇದು ಗಣೇಶ ಗಾಯತ್ರೀ.
ಓಂ ಏಕದಂತಾಯವಿದ್ಮಹೇ ವಕ್ರತುಂಡಾಯಧಿಮಹೀ ತನ್ನೋದಂತೀ_ಪ್ರಚೋದಯಾತ್

ಎರಡನೇಯ ಅಕ್ಷರ *ತ್ಸ * ಇದು ಉಪಪಾತಕವನ್ನು ಹೋಗಲಾಡಿಸುತ್ತದೆ. ಇದು ನೃಸಿಂಹ ಗಾಯತ್ರೀ
ಓಂ ಉಗ್ರ ನೃಸಿಂಹಾಯ ವಿದ್ಮಹೇ ವಜ್ರನಖಾಯ_ಧೀಮಹಿ ತನ್ನೋ ನೃಸಿಂಹ_ ಪ್ರಚೋದಯಾತ್

ಮೂರನೇಯ ಅಕ್ಷರ *ವಿ * ಇದು ವಿಕಾರ ವಿಪತ್ತನ್ನು ಹೋಗಲಾಡಿಸುತ್ತದೆ. ವಿಷ್ಣು ಗಾಯತ್ರೀ
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ _ಧೀಮಹಿ ತನ್ನೋ ವಿಷ್ಣುಃ ಪ್ರಚೋದಯಾತ್

ನಾಲ್ಕು * ತು * ಕಾರ ದುಷ್ಟ ಗ್ರಹ ದೋಷವನ್ನು ಹೋಗಲಾಡಿಸುತ್ತದೆ. ಶಿವ ಗಾಯತ್ರೀ
ತತ್ವುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್

ಐದು ಅಕ್ಷರ *ರ್ವ* ಕಾರ ಇದು ಭ್ರೂಣ ಹತ್ಯಾ ದೋಷ ಪರಿಹರಿಸುತ್ತದೆ. ಇದು ಕೃಷ್ಣ ಗಾಯತ್ರೀ.
ದೇವಕಿನಂದಾಯ ವಿದ್ಮಹೇ ವಸುದೇವಾಯ ಧೀಮಹಿ ತನ್ನೋ ಕೃಷ್ಣ ಪ್ರಚೋದಯಾತ್

ಆರು ಅಕ್ಷರ * ರೇ * ಕಾರ ಆಗಮ್ಯಾಗಮನ ದೋಷ ಪರಿಹಾರ ಇದು ರಾಧಾ ಗಾಯತ್ರೀ
ಓಂ ವೃಷಭಾನುಜಾಯ ವಿದ್ಮಹೇ ಕೃಷ್ಣಪ್ರಿಯಾಯ ಧೀಮಹಿ ತನ್ನೋ ರಾಧಾ_ ಪ್ರಚೋದಯಾತ್

ಏಳು ಅಕ್ಷರ * ಣಿ * ಕಾರ ಅಭಕ್ಷ್ಯಾಭಕ್ಷಣ ದೋಷ ಪರಿಹಾರ. ಇದು ಲಕ್ಷೀ ಗಾಯತ್ರೀ.
ಓಂ ಮಹಾಲಕ್ಷೀಚ ವಿದ್ಮಹೇ ವಿಷ್ಣು ಪತ್ನಿಚ ಧೀಮಹಿ ತನ್ನೋ ಲಕ್ಷೀ_ ಪ್ರಚೋದಯಾತ್

ಏಂಟು ಅಕ್ಷರ * ಯಂ* ಕಾರ ಇದು. ಬ್ರಹ್ಮ ಹತ್ಯಾಪಾತಕಗಳನ್ನು ಹೋಗಲಾಡಿಸುತ್ತದೆ ಇದು ಅಗ್ನಿ ಗಾಯತ್ರೀ
ಓಂ ಮಹಾಜ್ವಾಲಾಯ ವಿದ್ಮಹೇ ಅಗ್ನಿಜ್ವಾಲಾಯ ಧೀಮಹಿ ತನ್ನೋ ಅಗ್ನಿ_ ಪ್ರಚೋದಯಾತ್

ಒಂಬತ್ತು ಅಕ್ಷರ * ಭ *ಕಾರ ಇದು ಪುರುಷ ಹತ್ಯಾಪಾತಕವನ್ನು ನಾಶಮಾಡುತ್ತದೆ. ಇದು ಇಂದ್ರ ಗಾಯತ್ರೀ
ಓಂ ಸಹಸ್ರನೇತ್ರಾಯ ವಿದ್ಮಹೇ ವಜ್ರನಖಾಯ ಧೀಮಹಿ ತನ್ನೋ ಇಂದ್ರಃ ಪ್ರಚೋದಯಾತ್

ಹತ್ತು ಅಕ್ಷರ ರ್ಗೋಕಾರ ಗೋಹತ್ಯಾ ದೋಷದಿಂದ ವಿಮುಕ್ತಿಗೊಳಿಸುತ್ತದೆ. ಇದು ಸರಸ್ವತೀ ಗಾಯತ್ರೀ
ಓಂ ಸರಸ್ವತ್ತೈಚ ವಿದ್ಮಹೇ ಬ್ರಹ್ಮಪತ್ನಿಚ ಧೀಮಹಿ ತನ್ನೋ ವಾಣಿ ಪ್ರಚೋದಯಾತ್

ಹನ್ನೊಂದು * ದೇ * ಕಾರ ಇದು ಸ್ತ್ರೀ ಹತ್ಯಾದೋಷವನ್ನು ನಿವಾರಿಸುತ್ತದೆ. ಇದು ದುರ್ಗಾ ಗಾಯತ್ರೀ..
ಓಂ ಗಿರಿಜಾಯೈ ವಿದ್ಮಹೇ ಶಿವಪ್ರಿಯಾಯೈ_ _ಧೀಮಹಿ ತನ್ನೋ ದುರ್ಗಾಪ್ರಚೋದಯಾತ್

ಹನ್ನೆರಡು ಅಕ್ಷರ * ವ *ಕಾರ ಇದು ಕೂಡಾ ಸ್ತ್ರೀ ಹತ್ಯಾದೋಷವನ್ನು ಹೋಗಲಾಡಿಸುತ್ತದೆ. ಇದು ಹನುಮದ್ಗಾಯತ್ರೀ
ಓಂ ಅಂಜನಾಸುತಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ತನ್ನೋ ಆಂಜನೇಯ_ ಪ್ರಚೋದಯಾತ್

ಹದಿಮೂರು ಅಕ್ಷರ * ಸ * ಕಾರ ಇದು ಗುರುಹತ್ಯಾ ದೋಷದಿಂದ ಪಾರುಮಾಡುತ್ತದೆ. ಇದು ಪೃಥ್ವಿ ಗಾಯತ್ರೀ
ಓಂ ಪೃಥ್ವಿದೇವೈ ವಿದ್ಮಹೇ ಸಹಸ್ರಮೂರ್ತೈ_ ಧೀಮಹೆ ತನ್ನೋ ಪೃಥ್ವಿ ಪ್ರಚೋದಯಾತ್

ಹದಿನಾಲ್ಕು ಅಕ್ಷರ *ಧೀ * ಕಾರ ಮಾತೃ ಮತ್ತು ಪಿತೃ ನಿಂದಾ ಪಾಪವನ್ನು ನಾಶ ಮಾಡುತ್ತದೆ. ಇದು ಸೂರ್ಯ ಗಾಯತ್ರೀ
ಓಂ ಭಾಸ್ಕರಾಯ ವಿದ್ಮಹೇ ದಿವಾಕರಾಯ ಧೀಮಹಿ ತನ್ನೋ ಸೂರ್ಯಃ ಪ್ರಚೋದಯಾತ್

ಹದಿನೈದು ಅಕ್ಷರ * ಮ* ಕಾರ ಇದು ಪೂರ್ವ ಜನ್ಮಾರ್ಜಿತ ಪಾಪವನ್ನು ನಾಶ ಮಾಡುತ್ತದೆ. ಇದು ರಾಮ ಗಾಯತ್ರೀ….
ಓಂ ದಾಶರಥಾಯ ವಿದ್ಮಹೇ ಸೀತಾವಲ್ಲಭಾಯ ಧೀಮಹಿ ತನ್ನೋ ರಾಮಃ ಪ್ರಚೋದಯಾತ್

ಹದಿನಾರು ಅಕ್ಷರ * ಹಿ* ಕಾರ ಇದು ಅಶೇಷ ಪಾಪ ಸಮೂಹವನ್ನು ನಾಶಪಡಿಸುತ್ತದೆ. ಇದು ಸೀತಾ ಗಾಯತ್ರೀ
ಓಂ ಜನಕನಂದಿನ್ನೈ ವಿದ್ಮಹೇ ಭೂಮಿಜಾಯೈ ಧೀಮಹಿ ತನ್ನೋ ಸೀತಾ ಪ್ರಚೋದಯಾತ್

ಹದಿನೇಳು ಅಕ್ಷರ * ಧೀ* ಕಾರ . ಪ್ರಾಣಿ ವಧಾಪಾಪವನ್ನು ನಾಶ ಮಾಡುತ್ತದೆ. ಇದು ಚಂದ್ರ ಗಾಯತ್ರೀ
ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತತತ್ವಾಯ ಧೀಮಹಿ ತನ್ನೋ ಚಂದ್ರಃ ಪ್ರಚೋದಯಾತ್

ಹದಿನೆಂಟನೇಯ ಅಕ್ಷರ * ಯೋ* ಕಾರ ಇದು ಪ್ರತಿಗ್ರಹ ಪಾಪವನ್ನು ನಾಶ ಮಾಡುತ್ತದೆ. ಇದು ಯಮ ಗಾಯತ್ರೀ..
ಓಂ ಸೂರ್ಯಪುತ್ರಾಯ ವಿದ್ಮಹೇ ಮಹಾಕಾಲಾಯ ಧೀಮಹಿ ತನ್ನೋ ಯಮಃ_ ಪ್ರಚೋದಯಾತ್

ಹತ್ತೊಂಬತ್ತು ಅಕ್ಷರ * ಯೋ* ಕಾರ ಸರ್ವಪಾಪ ನಿವಾರಕ. ಇದು ಬ್ರಹ್ಮ ಗಾಯತ್ರೀ
ಓಂ ಚತುರ್ಮುಖಾಯ ವಿದ್ಮಹೇ ಹಂಸರೂಢಾಯ ಧೀಮಹಿ ತನ್ನೋ ಬ್ರಹ್ಮ ಪ್ರಚೋದಯಾತ್

ಇಪ್ಪತ್ತನೆಯ ಅಕ್ಷರ * ನ *ಕಾರ , ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ್ ಗಾಯತ್ರೀ
ಓಂ ಜಲಬಿಂಬಾಯ ವಿದ್ಮಹೇ ನೀಲಪುರುಷಾಯ ಧೀಮಹಿ ತನ್ನೋ ವರುಣ ಪ್ರಚೋದಯಾತ್

ಇಪ್ಪತ್ತೊಂದು ಅಕ್ಷರ * ಪ್ರ * ಕಾರ. ವಿಷ್ಣುಲೋಕ ಪ್ರಾಪ್ತಿಯಾಗುತ್ತದೆ. ಇದು ನಾರಾಯಣ ಗಾಯತ್ರೀ
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ನಾರಾಯಣ ಪ್ರಚೋದಯಾತ್

ಇಪ್ಪತ್ತೆರಡು ಅಕ್ಷರ ಚೋ ಕಾರ ಹಯಗ್ರೀವ ಗಾಯತ್ರಿ
ಓಂ ವಾಗೀಶ್ವರಾಯ ವಿದ್ಮಹೇ ಹಯಗ್ರೀವಾಯ ಧೀಮಹಿ ತನ್ನೋ ಹಯಗ್ರೀವಃ_ ಪ್ರಚೋದಯಾತ್

ಇಪ್ಪತ್ತಮೂರು ಅಕ್ಷರ * ದ * ಕಾರ ಬ್ರಹ್ಮ ಪದ ಪ್ರಾಪ್ತಿಗೆ ಸಹಾಯಕ. ಇದು ಹಂಸ ಗಾಯತ್ರೀ
ಓಂ ಪರಮಹಂಸಾಯ ವಿದ್ಮಹೇ ಮಹಾಹಂಸಾಯ ಧೀಮಹಿ ತನ್ನೋ ಹಂಸಃ ಪ್ರಚೋದಯಾತ್

ಇಪ್ಪತ್ತನಾಲ್ಕು ಅಕ್ಷರ * ಯಾತ್* ಕಾರ ತ್ರಿಮೂರ್ತಿಗಳ ಪ್ರಸಾರ ಸಿದ್ಧಿಯಾಗಲು ಇದು ಉಪಯುಕ್ತ. ಇದು ತುಲಸೀ ಗಾಯತ್ರೀ.
ಓಂ ತುಲಸ್ಮೈ ವಿದ್ಮಹೇ ವಿಷ್ಣುಪ್ರಿಯಾಯೈ _ಧೀಮಹಿ ತನ್ನೋ ಬೃಂದಾ _ಪ್ರಚೋದಯಾತ್

ಇವು ಇಪ್ಪತ್ತನಾಲ್ಕು ಅಕ್ಷರ ಗಾಯತ್ರೀ ಮಂತ್ರದಲ್ಲಿ ಇಡೀ ದೇವ ಸಮೂಹವನ್ನೇ ಆರಾದಿಸಿದ ಪುಣ್ಯ ಪ್ರಾಪ್ತಿ ಈ ಒಂದು ಗಾಯತ್ರೀ ಮಂತ್ರದಿಂದ ಇಪ್ಪತ್ತನಾಲ್ಕು ದೇವತೆಗಳು ಅನುಗ್ರಹಿಸುವ ಶಕ್ತಿ ಯ ಪ್ರಾಪ್ತಿ ಗಾಯತ್ರೀ ಮಂತ್ರ ಜಪ ಮಾಡುವವನಿಗೆ ಲಭ್ಯವಾಗುತ್ತದೆ.

(ನಾಳೆ: ಉಪನಯನ ಎಂದರೇನು? ಲೇಖನ ಸರಣಿ-9: ಸಂಧ್ಯಾವಂದನೆ ಸಮಯ ಮತ್ತು ಮಹತ್ವ

Get in Touch With Us info@kalpa.news Whatsapp: 9481252093

Tags: Dr Gururaj PoshettihalliGayatri MantraKannadaNewsWebsiteLatestNewsKannadaUpanayanaಉಪನಯನಗಾಯತ್ರೀ ಮಂತ್ರ ಜಪಡಾ.ಗುರುರಾಜ ಪೋಶೆಟ್ಟಿಹಳ್ಳಿ
Share221Tweet123Send
Previous Post

ಮಹಿಳಾ ಅರ್ಚಕರು ಪೂಜಿಸುವ ಸಿಲಿಕಾನ್ ಸಿಟಿಯ ಅಭಯ ಆಂಜನೇಯ ಸ್ವಾಮಿಯ ದೇವಾಲಯವಿದು

Next Post

ದುಬ್ಲಿನ್’ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 136 ಪ್ರಯಾಣಿಕರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದುಬ್ಲಿನ್'ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ 136 ಪ್ರಯಾಣಿಕರು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ – ಆವೃತ್ತಿ ಎರಡು ಪುಸ್ತಕ ಬಿಡುಗಡೆ

ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ – ಆವೃತ್ತಿ ಎರಡು ಪುಸ್ತಕ ಬಿಡುಗಡೆ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL