ಇಂಧೋರ್: ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ ದೇವಾಲಗಳಿಗೆ ಎಡತಾಕುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಗೋತ್ರ ಯಾವುದು ಎಂದು ಹೇಳಲಿ ಎಂದು ಬಿಜೆಪಿ ಸವಾಲು ಎಸೆದಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಅವರು ಹಿಂದೂ ದೇವಸ್ತಾನಕೆಕ ಹೋಗುತ್ತಾರೆ, ಅವರು ಜನಿವಾರ ಧರಿಸುತ್ತಿದ್ದರೆ, ಯಾವ ವಿಧದ ಜನಿವಾರವನ್ನು ಅವರು ಧರಿಸುತ್ತಿದ್ದಾರೆ ಹಾಗೂ ಅವರ ಗೋತ್ರ ಯಾವುದು ಎಂದು ಪ್ರಶ್ನಿಸಿದ್ದಾರೆ.
ಇಂದು ಮುಂಜಾನೆ ರಾಹುಲ್ ಗಾಂಧಿ ಉಜ್ಜಯಿನಿಗೆ ಭೇಟಿ ನೀಡಿದ್ದ ವೇಳೆ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲೆ ಕುಳಿತಿಕೊಂಡ ಚೇಳಿನಂತೆ ಎಂದು ಆರ್ ಎಸ್ ಎಸ್ ನಾಯಕರೊಬ್ಬರು ಹೇಳಿದ್ದಾರೆ ಎಂದು ಪತ್ರಕರ್ತರೊಬ್ಬರು ಹೇಳಿರುವುದಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಬಿಜೆಪಿ ಈ ವಾಗ್ದಾಳಿ ನಡೆಸಿದೆ.
ಈ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿರುವ ಪಾತ್ರ, ರಾಹುಲ್ ತಮ್ಮ ಗೋತ್ರವನ್ನು ತಿಳಿಸಲಿ ಎಂದು ಸವಾಲು ಎಸೆದಿದ್ದಾರೆ.
Discussion about this post