ಅಮೃತ್’ಸರ: ಗುರುವಾರ ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ ಇಡಿಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳುತ್ತಾರೆ ಪಾಕಿಸ್ಥಾನದ ಜೊತೆಯಲ್ಲಿ ಮಾತುಕತೆ ನಡೆಸಬೇಕಂತೆ.
ಹಗಲು ರಾತ್ರಿ ಎನ್ನದೇ ಗಡಿಯಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ನಮ್ಮನ್ನೆಲ್ಲಾ ಕಾಯುತ್ತಿರುವ ನಮ್ಮ ಸಹೋದರ ಯೋಧರು ಗುರುತು ಸಿಗದಂತೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಮ್ಮ ಯೋಧರ ಇಂತಹ ಸ್ಥಿತಿಗೆ ಕಾರಣವಾಗಿರುವುದು ಪಾಕಿಸ್ಥಾನ ಹಾಗೂ ಪಾಕ್ ಪ್ರೇರಿತ ಉಗ್ರರು.
ನಿನ್ನೆ ನಮ್ಮ ಯೋಧರು ಸಾವನ್ನಪ್ಪಿದ ರೀತಿಗೆ ಪ್ರತಿ ಭಾರತೀಯನ ರಕ್ತ ಕುದಿಯುತ್ತಿದೆ. ರಕ್ತಕ್ಕೆ ರಕ್ತ, ಹತ್ಯೆಗೆ ಹತ್ಯೆಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಯೋಧರ ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದಿದ್ದಾರೆ. ಅಲ್ಲದೆ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನೂ ನೀಡಲಾಗಿದೆ ಎಂದಿದ್ದಾರೆ.
ಯಾವ ಕ್ಷಣಕ್ಕೆ ಪಾಕಿಸ್ಥಾನದ ಮೇಲೆ ಭಾರತೀಯ ಸೇನೆ ಮುಗಿಬೀಳಲಿದೆ ಎಂದು ಕಾಯುತ್ತಿದೆ. ಆದರೆ, ಕಾಂಗ್ರೆಸ್’ನ ಈ ಸಚಿವ ನವಜೋತ್ ಸಿಂಗ್ ಸಿಧು ಮಾತ್ರ ಪಾಕ್ ಜೊತೆಯಲ್ಲಿ ಮಾತುಕತೆ ನಡೆಸಿ. ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಆರೋಪ ಮಾಡುವುದು ಸರಿಯಲ್ಲ ದಾಳಿ ನಡೆದದ್ದು ಖಂಡನಾರ್ಹ, ಆದರೆ ಕೆಲವೇ ಜನರು ಮಾಡಿದ ಕೆಲಸಕ್ಕೆ ಒಂದು ರಾಷ್ಟ್ರದ ಮೇಲೆ ಆರೊಪಿಸುವುದು ಸಲ್ಲ.ಇದಕ್ಕೆಲ್ಲಾ ಶಾಂತಿ ಮಾತುಕತೆಯಷ್ಟೇ ಪರಿಹಾರವಾಗಬಲ್ಲದು ಎಂದಿದ್ದಾರೆ.
ನಮ್ಮ ಸಹೋದರರು ಎಷ್ಟು ಭೀಕರವಾಗಿ ಪ್ರಾಣತ್ಯಾಗ ಮಾಡಿದ್ದು, ಅವರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಇಡಿಯ ಪುರುಷರು, ಮಹಿಳೆಯರು ಎಂಬ ಬೇಧವಿಲ್ಲದೆ ಸಕಲ ದೇಶವಾಸಿಗಳ ರಕ್ತ ಕುದಿಯುತ್ತಿದ್ದು, ಪ್ರತೀಕಾರಕ್ಕಾಗಿ ಕಾಯುತ್ತಿದ್ದಾರೆ. ಅಷ್ಟು ಆಕ್ರೋಶ ಸೃಷ್ಠಿಯಾಗಿದೆ ಪಾಕ್ ಮೇಲೆ. ಆದರೆ, ಈ ಸಿಧು ಎಂಬ ಮನುಷ್ಯನಿಗೆ ಇಂತಹ ಸಂದರ್ಭದಲ್ಲೂ ಆಕ್ರೋಶ ಬರುತ್ತಿಲ್ಲ ಎಂದರೆ ಅವನಲ್ಲಿ ಇರುವುದು ರಕ್ತವೋ ಅಥವಾ ಗಟಾರದ ಕೊಚ್ಚೆ ನೀರೋ ಎಂಬ ಅನುಮಾನ ಮೂಡುತ್ತಿದೆ.
Discussion about this post