No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Thursday, March 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಎಲ್ಲಿ ಹೋಯಿತು ಮಳೆ? ತಾಯಿಯ ಕತ್ತು ಕೊಯ್ದು ಮೊಲೆ ಚೀಪಿದರೆ ಹಾಲಾದರೂ ಹೇಗೆ ಬಂದೀತು?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 22, 2019
in Small Bytes, Special Articles
0
ಎಲ್ಲಿ ಹೋಯಿತು ಮಳೆ? ತಾಯಿಯ ಕತ್ತು ಕೊಯ್ದು ಮೊಲೆ ಚೀಪಿದರೆ ಹಾಲಾದರೂ ಹೇಗೆ ಬಂದೀತು?
Share on FacebookShare on TwitterShare on WhatsApp

ಪ್ರತಿ ಮಳೆಗಾಲ ಬಂತೆಂದರೆ ಸಾಕು ಹೋದ ವರ್ಷ ಜಾಸ್ತಿ ಮಳೆಯಾಗಿತ್ತು, ಈ ವರ್ಷ ಕಡಿಮೆ ಮತ್ತೆ ಎಷ್ಟು ತಡವಾಗಿ ಬಂತು ಅಂತ ಮಾತನಾಡುವುದು ಸಾಮಾನ್ಯವಾಗಿಬಿಟ್ಟಿದೆ. ಜೊತೆಗೆ ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ, ಆಗೆಲ್ಲಾ ಆರಿದ್ರಾ ಮಳೆಗೆ ಹಬ್ಬನೇ ಮಾಡ್ತಿದ್ವಿ ಅಂತ ಹೇಳುವ ಹಿರಿಯರು ಇದ್ದೇ ಇರುತ್ತಾರೆ. ಈಗಲೂ ಹಬ್ಬ ಆಚರಿಸ್ತಾರೆ ಮಳೆ ಬರದೇ ಇದ್ದರೂ ಅನ್ನುವುದು ಬೇರೆ ವಿಚಾರ. ಹಾಗಾದರೆ ಮಳೆ ಎಲ್ಲಿ ಹೋಯಿತು?! ಅದೇನು ಗೊತ್ತಿಲ್ಲದ ವಿಷಯ ಏನಲ್ಲ. ತಾಯಿಯ ಕತ್ತು ಕೊಯ್ದು ಮೊಲೆ ಚೀಪಿದರೆ ಹಾಲಾದರೂ ಹೇಗೆ ಬಂದೀತು?

ಮಳೆ ಅಭಾವ ಕಂಡರೂ ಎಚ್ಚೆತ್ತವರು ಕಡಿಮೆ. ಯಾಕೆ ಗೊತ್ತೇ? ಇನ್ನೂ ಅನಿವಾರ್ಯ ಅನ್ನುವ ಪರಿಸ್ಥಿತಿ ಬಂದಿಲ್ಲವಲ್ಲ. ಯಾವಾಗ ಮನೆಯಲ್ಲಿ ಏನೋ ಒಂದು ಪದಾರ್ಥ ಖಾಲಿಯಾದರೆ, ಈ ಕಡೆ ಪಕ್ಕದ ಮನೆಯಲ್ಲಿ ತೆಗೆದುಕೊಳ್ಳುವುದು, ಅದೂ ಖಾಲಿ ಅದರೆ ಆ ಕಡೆ ಪಕ್ಕದ ಮನೆ, ಅದೂ ಆದ ಮೇಲೆ ಎದುರು, ಹಿಂದೆ…. ಊಹೂಂ ಸಾಕಾಗಲಿಲ್ಲ. ಹಾಗಾದರೆ ಇದು ಶಾಶ್ವತ ಪರಿಹಾರವೇ? ಅಲ್ಲ. ಓಹೋ ಆ ಪದಾರ್ಥ ಬಳಸುವುದು ಬಿಡಬೇಕು, ಅದೂ ಆಗಲ್ಲ. ಎಲ್ಲಿಯ ತನಕ ಹೀಗೆ ತುರ್ತುಗಳನ್ನು ಪೂರೈಸುತ್ತಾ, ದೀರ್ಘ ಕಾಲವನ್ನು ತಳ್ಳಲು ಸಾಧ್ಯ? ಕಾವೇರಿ ಬರಿದಾದಳು ಅಂತ ಶರಾವತಿ, ನಂತರ ತುಂಗಭದ್ರಾ ಆಮೇಲೆ ಮತ್ತೊಂದು ಅಂತ ಹೊರಟರೆ ಇಷ್ಟು ವರ್ಷ ನೀರು ಕೊಟ್ಟ ಆ ತಾಯಿಗೆ ಏನು ಕೊಟ್ಟಿರಿ? ಮತ್ತು ಶರಾವತಿ, ತುಂಗಭದ್ರಾ ಅಂತ ಇನ್ನೆಷ್ಟು ಕಾಲ ಮುಂದೂಡುವಿರಿ? ಶಾಶ್ವತ ಪರಿಹಾರ ಎಂದು?

ಇಂತಹ ಆಲೋಚನೆಯ ಎಲ್ಲರಿಗಿಂತ ಮೊದಲು ಅರಿತ ಇಮ್ಮಡಿ ಮೋದಿ ಸರ್ಕಾರ ಜಲಶಕ್ತಿ ಇಲಾಖೆಯನ್ನೇ ಹುಟ್ಟು ಹಾಕಿ, ಸಚಿವರನ್ನು ನೇಮಿಸಿತು. ಗಜೇಂದ್ರ ಸಿಂಗ್ ಶೇಖಾವತ್ ಕೇಂದ್ರ ಜಲಶಕ್ತಿ ಸಚಿವರಾಗಿ ಪದಗ್ರಹಣ ಮಾಡಿದ ದಿನದಿಂದ ಹೊಸ ಸಚಿವಾಲಯದ ಕಾರ್ಯದ ಬಗ್ಗೆ ಎಲ್ಲರೂ ದೃಷ್ಟಿ ನೆಟ್ಟಿದ್ದರು. 256 ಜಿಲ್ಲೆಗಳ 1592 ಬ್ಲಾಕ್‌ಗಳಲ್ಲಿ ನೀರಿನ ಸಂರಕ್ಷಣೆ ಮತ್ತು ಸುರಕ್ಷತೆ ಕುರಿತು ಅಭಿಯಾನ ಆರಂಭಿಸಲಾಯಿತು. ಕೇಂದ್ರ ಸರಕಾರದ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ನಾಮ ನಿರ್ದೇಶಿತ ಇಬ್ಬರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಈ ಎಲ್ಲಾ ಗುರುತಿಸಿದ ಪ್ರದೇಶಗಳಿಗೆ ಭೇಟಿ ನೀಡಲಿದೆ‌. ಅಭಿಯಾನವೇ ಜಲಶಕ್ತಿ ಕುರಿತು ಇರುವಾಗ ಆ ಸಮಿತಿಯ ಕಾರ್ಯಗಳು ಹೀಗಿವೆ.

  1. ನೀರಿನ ಸಂರಕ್ಷಣೆ ಮತ್ತು ಮಳೆ ಕೊಯ್ಲು
  2. ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಜಲಮೂಲ ನವೀಕರಣ.
  3. ನೀರಿನ ಪುನರ್‌ ಬಳಕೆ ಮತ್ತು ಬೋರ್ ವೆಲ್‌ಗಳ ಭರ್ತಿ.
  4. ಜಲಾನಯನ ಪ್ರದೇಶಗಳ ಅಭಿವೃದ್ದಿ.
  5. ತೀವ್ರವಾದ ಅರಣ್ಯೀಕರಣ.

    ಏನಿದು? ಎಲ್ಲಾ ಮೊದಲೇ ಇದ್ದ ಅಂಶಗಳು ಎನಿಸಬಹುದು. ಸ್ವಚ್ಛವಾಗಿರಬೇಕು ಎಂಬುದೂ ಗೊತ್ತಿತ್ತು ಆದರೆ ಸ್ವಚ್ಛ ಭಾರತ ಬಂದ ಮೇಲೆ ಅದರ ಪರಿಯೇ ಬದಲಾಯಿತು. ಹಾಗೆಯೇ ಜಲಶಕ್ತಿಯ ಒಂದು ಸಚಿವಾಲಯ ರೂಪುಗೊಂಡು ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ಒಳ ಹೊರಗು ಕುರಿತು ನೋಡಲು ಕುಳಿತರೆ ಅಲ್ಲಿ ಗಮನಾರ್ಹ ಪ್ರಗತಿ ಕಾಣಲು ಸಾಧ್ಯ. ದೂರದೃಷ್ಟಿ ಹೊತ್ತಿರುವ ಜಲಶಕ್ತಿ ಅಭಿಯಾನ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

    ಮಳೆಗಾಲ – ಜುಲೈ 01, 2019 ರಿಂದ ಸೆಪ್ಟೆಂಬರ್ 15, 2019 ರ ವರೆಗೆ.
    ಹೆಚ್ಚುವರಿಯಾಗಿ, ಅಕ್ಟೋಬರ್ 01, 2019 ರಿಂದ ನವೆಂಬರ್ 30, 2019 ರ ತನಕ.

    ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಸಾವಿರಾರು ಅಭಿಯಾನಗಳ ಹೊತ್ತು ತಂದರೂ ಅವುಗಳ ಯಶಸ್ಸು ಇರುವುದು ಜನರ ಕೈಯಲ್ಲಿ. ಹಾಗೆಯೇ ಇಲ್ಲಿ ಕೂಡ ಹಲವಾರು ಸಿನಿಮಾ ಮತ್ತು ಕ್ರೀಡಾ ರಂಗದ ಪ್ರಸಿದ್ಧರು ಈಗಾಗಲೇ ಮೆಚ್ಚುಗೆ ಮಾತುಗಳಾಡಿದ್ದಾರೆ. ಅಂತೆಯೇ ಸಾರ್ವಜನಿಕರಲ್ಲದೇ ಸ್ವಸಹಾಯ ಸಂಘಗಳು, NSS, NCC, ಶಾಲಾ ಕಾಲೇಜುಗಳು, ಪಂಚಾಯಿತಿಗಳು, ಮಾಜಿ ಸೈನಿಕರು ಮತ್ತು ಪಿಂಚಣಿದಾರರಂತಹ ವಲಯದಿಂದ ಹೆಚ್ಚಿನ ಪ್ರಮಾಣದಲ್ಲಿ ಸಹಯೋಗ ನಿರೀಕ್ಷಿಸಲಾಗಿದೆ.

    ಭಾರತದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾದ ನೀರಿನ ಕುರಿತು ಒಂದು ಸದೃಢ ಇಲಾಖೆ ಮತ್ತು ಯೋಜನೆ ಆರಂಭವಾಗಿದೆ. ಅಲ್ಲದೆ ನೇಮಕವಾದ ಸಚಿವರು ಸಹ ಹೆಚ್ಚು ಉತ್ಸಾಹಿಗಳು ಹಾಗೂ ಸಕ್ಷಮರು. ಈ ಯೋಜನೆಯು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕಾರ್ಯ ನಿರ್ವಹಿಸಲಿದ್ದು, ಅಭಿಯಾನವಾಗಿ ರೂಪುಗೊಂಡಿದ್ದು ಹೆಚ್ಚಿನ ಸಾರ್ಥಕತೆ ಹೊಂದಲು ನೆರವಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಈಗಿನ ಮಕ್ಕಳು ಅವರ ಕಾಲಕ್ಕೆ ಆರಿದ್ರಾ ಮಳೆಯ ಹಬ್ಬವನ್ನು ತೋರಿಕೆಗಲ್ಲ, ವಿಜೃಂಭಣೆಯಿಂದ ಆಚರಿಸಬಹುದು.

    ಲೇಖನ: ಸಚಿನ್ ಪಾರ್ಶ್ವನಾಥ್

Tags: DeforestationKannada ArticleRain harvestingRainy SeasonSharavathi RiverSpecial ArticleTunga Bhadra RiverWater power campaignಅರಣ್ಯೀಕರಣಜಲಶಕ್ತಿ ಅಭಿಯಾನತುಂಗಭದ್ರಾಮಳೆ ಕೊಯ್ಲುಮಳೆಗಾಲಶರಾವತಿ
Share196Tweet123Send
Previous Post

ಓಂಕಾರ ಆಶ್ರಮ: ಈ ವಿಶಿಷ್ಟ ದ್ವಾದಶ ಜ್ಯೋರ್ತಿಲಿಂಗ ದೇವಾಲಯಕ್ಕೊಮ್ಮೆ ತಪ್ಪದೇ ಭೇಟಿ ನೀಡಿ

Next Post

ಚಳ್ಳಕೆರೆ ಬಳಿ ಭೀಕರ ಅಪಘಾತ: ಓರ್ವ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚಳ್ಳಕೆರೆ ಬಳಿ ಭೀಕರ ಅಪಘಾತ: ಓರ್ವ ಸಾವು

ಚಳ್ಳಕೆರೆ ಬಳಿ ಭೀಕರ ಅಪಘಾತ: ಓರ್ವ ಸಾವು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL