ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್’ಐ) #PFI ಸೇರಿದಂತೆ ಹಲವು ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ.
ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಇಂದು ಮುಂಜಾನೆ ಆದೇಶ ಹೊರಡಿಸಿದ್ದು, ಪಿಎಫ್’ಐ ಸೇರಿದಂತೆ ಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆಗಳು #unlawful_association ಎಂದು ಘೋಷಣೆ ಮಾಡಿದೆ.
ಯಾವೆಲ್ಲಾ ಸಂಘಟನೆ ಬ್ಯಾನ್?
- ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್’ಐ) #PFI
- ರಿಹಬ್ ಇಂಡಿಯಾ ಫೌಂಡೇಶನ್(ಆರ್’ಐಎಫ್) #RIF
- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್’ಐ) #CSF
- ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್(ಎಐಐಸಿ) #AIIC
- ನ್ಯಾಷನಲ್ ಕಾನ್ಫೆಡರೇಶನ್ ಆಪ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್(ಎನ್’ಸಿಎಚ್’ಆರ್’ಒ) #NCHRO
- ನ್ಯಾಷನಲ್ ವುಮೆನ್ಸ್ ಫ್ರಂಟ್
- ಜೂನಿಯರ್ ಫ್ರಂಟ್
- ಎಂಪವರ್ ಇಂಡಿಯಾ ಫೌಂಡೇಶನ್
- ಕೇರಳದ ರಿಹ್ಯಾಬ್ ಫೌಂಡೇಶನ್
ಯಾವ ಕಾಯ್ದೆಯಡಿಯಲ್ಲಿ ನಿಷೇಧ
ಕಾನೂನು ಬಾಹಿರ ಚಟುವಟಿಕೆ(ನಿರ್ಬಂಧ) ಕಾಯ್ದೆಯಡಿಯಲ್ಲಿ (ಯುಎಪಿಎ) ಈ ಎಲ್ಲ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆಗಳು ಎಂದು ಘೋಷಣೆ ಮಾಡಿ ಐದು ವರ್ಷ ನಿಷೇಧ ಹೇರಲಾಗಿದೆ.
ನಿಷೇಧಕ್ಕೆ ಕಾರಣಗಳೇನು?
- ದೇಶ ವಿರೋಧಿ ಚಟುವಟಿಕೆ
- ಉಗ್ರರ ಜೊತೆ ಸಂಬಂಧ
- ಉಗ್ರ ಚಟುವಟಿಕೆಗಳಿಗೆ ಫಂಡ್ ಸಂಗ್ರಹ
- ಯುವಕರಿಗೆ ಉಗ್ರ ಸಂಘಟನೆಗಳಿಗೆ ಸೇರಲು ಪ್ರೇರೇಪಣೆ
- ದೇಶದ ಆಂತರಿಕ ಕ್ಷೋಭೆಗಳಲ್ಲಿ ಬಾಗಿ
- ಹಲವು ಹತ್ಯೆ ಪ್ರಕರಣಗಳಲ್ಲಿ ಕಾರ್ಯಕರ್ತರ ಬಂಧನ
- ಹವಾಲಾ ಹಣ ವರ್ಗಾವಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post