ನಾಯಿ ಕೊಡೆಗಳಂತೆ ತಲೆ ಎತ್ತಿ ನಿಂತಿವೆ ಪೆಟ್ಟಿಗೆ ಅಂಗಡಿಗಳು. ನಮ್ಮ ದೇಶದ ಭವಿಷ್ಯ ನಮ್ಮ ಯುವಜನತೆಯೇ ಇವರ ಬಂಡವಾಳ. ಇಲ್ಲಿ ನಮ್ಮ ಯುವಕರು ತಮ್ಮ ಆರೋಗ್ಯವನ್ನೇ ಹೂಡಿಕೆ ಮಾಡಿರುವರು.
ಬೀಡಾ, ಗುಟ್ಕಾ, ಸಿಗರೇಟ್ ಹೀಗೆ ಟನ್ ಟನ್ ಗಟ್ಟಲೆ ತಂಬಾಕು ದಿನಕ್ಕೆ ವ್ಯಾಪಾರವಾಗುತ್ತದೆ. ಒಂದು ಕಂಪನಿ, ಹೋಟೆಲ್, ಕಚೇರಿ ಶುರುವಾಯ್ತು ಅಂದ್ರೆ ಅಲ್ಲಿ ಕಾಲಿಟ್ಟು ಬಿಡುತ್ತವೆ ಒಂದರ ಹಿಂದೆ ಒಂದರಂತೆ. ಒಂದು ಬೀದಿಗೆ ಠ್ಝಿಛಿಠಿ ಒಂದಾದರೂ ಪೆಟ್ಟಿಗೆ ಅಂಗಡಿ ಪಕ್ಕಾ ಇರುತ್ತೆ.
ಇವರುಗಳಿಗೆ ಯಾವ ರೂಲ್ಸ್ ರೆಗುಲೇಶನ್ಸ್ ಇಲ್ಲಾ.. ದಿನಾ ಮಾಮೂಲಿ ಒಂದು ಕೊಟ್ಟುಬಿಟ್ರೆ ಮುಗೀತು ಇನ್ಯಾವ ಮತ್ಯಾರ ತಂಟೆ ತಕರಾರು ಇವರಿಗಿರದು.
ನಮ್ಮ ಆರೋಗ್ಯ ಇಲಾಖೆಗಳು, ಪರಿಸರ ಸ್ನೇಹಿಗಳು, ಕಾನೂನು ಮತ್ತು ಪೊಲೀಸರುಗಳು ಕೈ ಕಟ್ಟಿ ನಿಂತಿಹರು. ಇವರುಗಳನ್ನು ಹಾಗೆ ತಡೆಹಿಡಿದಿರುವ ಶಕ್ತಿ ಯಾವುದು ತಿಳಿಯದು.
ಸರ್ಕಾರಗಳು ಬರೀ ಬ್ಯಾನರ್ ಜಾಹೀರಾತುಗಳ ಮೂಲಕ ಅರಿವು ಮೂಡಿಸೋದು ಬಿಟ್ಟು ಈ ಮಹಾ ಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಠ್ಝಿಛಿಠಿ ಕಡಿಮೆ ಮಾಡುವ ಹಾದಿಯಲ್ಲಿ ಪ್ರಯತ್ನ ಮಾಡಬೇಕಿದೆ.
ಹೆಗ್ಗಿಲ್ಲದೆ ತಯಾರು ಮಾಡಲು, ಮಾರಾಟ ಮಾಡಲು ಬಿಟ್ಟು, ದೊಡ್ಡದಾಗಿ ಹಾನಿಕರ ಎಂದು ಪುಕ್ಕಟೆ ಹೇಳಿಕೆ ಕೊಡೋದು, ಜಾಹೀರಾತು ನೀಡೋದು ಎಷ್ಟು ಸರಿ. ಇದ್ರಿಂದ ಏನು ತಾನೇ ಪ್ರಯೋಜನ.
ಮಗುವನ್ನೂ ಚಿವುಟಿ ತೊಟ್ಟಿಲು ತೂಗೋ ಕೆಲಸವಲ್ಲದೆ ಮತ್ತೇನು ಇದು. ಕಳ್ಳತನ ಮಾಡುವುದು ತಪ್ಪು ಎಂದು ಬೋರ್ಡ್ ಹಾಕಿಕೊಂಡು ಕಳ್ಳತನ ಮಾಡಿದಂತಲ್ಲವೇ.
ಪಾನ್ ಪರಾಗ್ ಬೀಡಾದಿಂದ ರಸ್ತೆ ಹಾದಿ ಬೀದಿಗಳು ಕೆಂಪೇರಿ.. ಸ್ವಚ್ಛ ಭಾರತದ ಕನಸಿಗೆ ನಾಂದಿ ಹಾಡುತಿಹವು. ಅವ್ರೆನಪ್ಪಾ ತುಪಕ್ ಅಂತಾ ಉಗಿದು ಹೋಗಿ ಬಿಡ್ತಾರೆ.. ಅದಾ ರಸ್ತೇಲಿ ದಿನಾ ಓಡಾಡೋರು ನಾವೇ ಅಲ್ವೇ.
ದುರದೃಷ್ಟವೆಂದರೆ ಸಿಗರೇಟ್ ಸೇದುವರಿಗಿಂತ ಅದರ ಹೊಗೆಯನ್ನು ಕುಡಿವ ಸುತ್ತಮುತ್ತಲ ಜನರಿಗೇನೇ ಆರೋಗ್ಯ ಕೆಡುವುದು ಹೆಚ್ಚು. ಸೇದುವವರೇನು ಸೇದಿ ಹೊರಗೆ ಬಿಡ್ತಾರೆ.. ಅದ ಕೊನೆಗೆ ಕುಡಿವವರು ನಾವಲ್ವಾ ಸ್ವಾಮಿ.
ನಮಗೇನು ಕರ್ಮಾ ರೀ ಇದು.. ಯಾರೋ ಮಾಡೋ ತಪ್ಪಿಗೆ ನಮಗೆಲ್ಲಾ ಯಾತಕೆ ಈ ಶಿಕ್ಷೆ. ಬೇರೆ ಯಾವುದೋ ಕಷ್ಟ ಆದರೆ ಅನುಭವಿಸೋಣ, ಆದ್ರೆ ಈ ಆರೋಗ್ಯ ವಿಷಯದಲ್ಲಿ ರಾಜಿ ಬೇಡ. ಯಾವುದೇ ಅಡೆತಡೆ ಇಲ್ಲದೆ ಹಬ್ಬುತ್ತಿರುವ ಈ ಮಹಾಮಾರಿಗೆ ಕಡಿವಾಣ ಹಾಕಬೇಕಿದೆ.
ಇದರಲ್ಲಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಯಾರೋ ಬಂದು ಎಲ್ಲಾ ಸರಿ ಮಾಡಲಿ ಎಂದು ಕಾಯುತ್ತಾ ಕೂರುವ ಬದಲು ಯುವಜನತೆ ಇದರೆಡೆಗೆ ಆಕರ್ಷಿತರಾಗದೆ ತಮ್ಮ ಫ್ಯಾಮಿಲಿ ಕಡೆ ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೀದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.
-ಪ್ರಜೋದಯ ಕರ್ನಾಟಕ
Discussion about this post