ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವಕ ವಿಜು ವರ್ಗೀಸ್ ಅವರು 60 ದಿನಗಳ ಕಾಲ ದೇಶದ ಅಖಂಡತೆಗಾಗಿ ಶಿವಮೊಗ್ಗದ ನೆಹರೂ ಕ್ರೀಡಾಂಗಣದಿಂದ ಬೈಕ್ ಮೂಲಕ ನೇಪಾಳ, ಭೂತಾನ್‌ವರೆಗೆ ಯಾತ್ರೆ ಕೈಗೊಂಡಿದ್ದು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಕೆ.ಈ. ಕಾಂತೇಶ್ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜಾತಿ, ಧರ್ಮ ಎಂದು ಬಡಿದಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂದು ತೀರ್ಮಾನ ಮಾಡಿ ದೇಶದ ಎಲ್ಲಾ ನದಿಗಳ ಮಣ್ಣು ಮತ್ತು ನೀರನ್ನು ಸಂಗ್ರಹಿಸಿ ತರಲು ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದ ಯುವಕ ವಿಜು ವರ್ಗೀಸ್ ರವರ ಚಿಂತನೆ ಎಲ್ಲರಿಗೂ ಮಾದರಿಯೆಂದು ಕಾಂತೇಶ್ ಹೇಳಿದ್ದಾರೆ.
ಶಿವಮೊಗ್ಗದಿಂದ ಹೊರಟು ಎಲ್ಲಾ ರಾಜ್ಯಗಳನ್ನು ಹಾದು ನೇಪಾಳ, ಭೂತಾನ್‌ಗೆ ಭೇಟಿ ನೀಡುವ 60 ದಿನದ ಈ ಸಾಹಸ ಯಾತ್ರೆ ಎಲ್ಲಾ ಯುವಕರಿಗು ಮಾದರಿಯಾಗಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಕಲಗೋಡು ರತ್ನಾಕರ್, ಶಿವಕುಮಾರ್, ವಿಜು ವರ್ಗೀಸ್ ಅವರ ತಾಯಿ ಹಾಗೂ ಸ್ನೇಹಿತರು ಉಪಸ್ಥಿತರಿದ್ದು, ಬೈಕ್ ಯಾತ್ರೆಗೆ ಶುಭ ಹಾರೈಸಿ ಬೀಳ್ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post