ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಂದು ಪ್ರಕಟವಾದ ಬಹುತೇಕ ದೈನಿಕಗಳಲ್ಲಿ 110 ಕೆವಿ ಸಾಮರ್ಥ್ಯದ 112 ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ಪ್ರಕಟಗೊಂಡಿರುವುದು ತಪ್ಪು ಮಾಹಿತಿಯಿಂದ ಕೂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಿ’ಎಸ್’ಎನ್’ಎಲ್ ಮೊಬೈಲ್ ಮತ್ತು ಇಂಟರ್‌ನೆಟ್‌ನ ವೇಗ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ಬಿ’ಎಸ್’ಎನ್’ಎಲ್ ಸೇವೆಯ ಜೊತೆಗೆ ಖಾಸಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಇನ್ನಷ್ಟು ಟವರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಖಾಸಗಿ ಕಂಪನಿಗಳಿಗೆ ನೀಡಿರುವ ಗುರಿಯಂತೆ ಈಗಾಗಲೇ ಶೇ.50ರಷ್ಟು ಟವರ್‌ಗಳನ್ನು ನಿರ್ಮಿಸಲಾಗಿದ್ದು, ಉಳಿದವುಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮಲೆನಾಡು ಭಾಗದ ಕೆಲ ಪ್ರದೇಶಗಳಲ್ಲಿನ ಬಿ’ಎಸ್’ಎನ್’ಎಲ್ ಕೇಂದ್ರಗಳಿಗೆ ನಿರಂತರವಾದ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯಗಳಿಂದಾಗಿ ಮೊಬೈಲ್ ಸೇವೆಯಲ್ಲಿಯೂ ವ್ಯತ್ಯಯ ಕಂಡುಬರುತ್ತಿದೆ ಎಂದಿದ್ದಾರೆ.
ಇದಲ್ಲದೇ ಇಂತಹ ಕೆಲವು ಸಣ್ಣಪುಟ್ಟ ಕಾರಣಗಳಿಂದಾಗಿ ಬಿ’ಎಸ್’ಎನ್’ಎಲ್ ಸೇವೆಯಲ್ಲಿ ಅಡಚಣೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರಗಳಿಗೆ ವಿದ್ಯುತ್‌ನ್ನು ಸರಬರಾಜಾಗುವಂತೆ ನೋಡಿಕೊಳ್ಳಲು ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಹರಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಂತರ ಕ್ರಮ ಕೈಗೊಳ್ಳಲಾಗುವುದು. ಇದೇ ಅವಧಿಯಲ್ಲಿ ಮಲೆನಾಡು ಭಾಗದ ಕೆಲವು ತಾಲೂಕುಗಳ ಆಯ್ದ ಸ್ಥಳಗಳಿಗೆ ಹೊಸದಾಗಿ 110 ಕೆ.ವಿ. ಸಾಮರ್ಥ್ಯದ 13 ಘಟಕಗಳು ಮಂಜೂರಾಗಿವೆ ಅಲ್ಲದೆ 02 ಘಟಕಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಿಂದಾಗಿ ಬಿ’ಎಸ್’ಎನ್’ಎಲ್ ಕೇಂದ್ರಗಳಿಗೆ ನಿರಂತರವಾಗಿ ವಿದ್ಯುತ್ ಒದಗಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post