ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಳ್ಳಾರಿ: 40 ದಿನದಿಂದ ದೇಶ ವಿದೇಶ ಲಾಕ್‌ಡೌನ್ ಆಗಿದೆ. ಕಳೆದ ವಾರದಿಂದ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲವಾಗುತ್ತಿದೆ. ಕಳೆದ 40 ದಿನಗಳಿಂದ ಇಟಲಿ ಮೂಲದ ಪ್ರವಾಸಿಗನೊಬ್ಬ ಗುಹೆಯಲ್ಲೇ ವಾಸವಾಗಿದ್ದ ಎಂಬ ವಿಚಾರ ಈಗ ಹೊರಬಿದ್ದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ ಪರ್ವತ, ಸಾಣಾಪುರ, ವಿರುಪಾಪುರಗಡ್ಡೆ ಸೇರಿದಂತೆ ಕೆಲ ಪ್ರದೇಶಗಳು ವಿದೇಶಿಯವರ ಆಕರ್ಷಕ ಸ್ಥಳಗಳಲ್ಲಿ ಒಂದು. ಫೆಬ್ರವರಿಯಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಡಳಿತ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸೇರಿಕೊಂಡು ನ್ಯಾಯಾಲಯದ ಆದೇಶದಂತೆ ವಿರೂಪಾಪುರಗಡ್ಡೆಯಲ್ಲಿದ್ದ ಅಕ್ರಮ ರೆಸಾರ್ಟ್‌ಗಳನ್ನು ನೆಲಸಮ ಮಾಡಿ ತೆರವುಗೊಳಿಸಲಾಗಿತ್ತು ಮತ್ತು ಹಂಪಿ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಬರುತ್ತಿದ್ದ ವಿದೇಶಿಯರನ್ನು ಹೊರಹಾಕುವ ಕಾರ್ಯವನ್ನು ನಿರ್ವಹಿಸಿತ್ತು ಬಳಿಕ ವಿದೇಶದವರ ಇಲ್ಲದಂತಾಯಿತು.
ಈ ವೇಳೆ ಇಟಲಿ ದೇಶದ ಪ್ರಜೆ ಮಾರಿಯಾನ್, 2020ರ ಜನವರಿ ತಿಂಗಳಿನಲ್ಲೇ ಹಂಪಿ, ಮತ್ತಿತರ ಸ್ಥಳಗಳನ್ನು ನೋಡಲು ಬಂದಿದ್ದಾನೆ. ಫೆಬ್ರವರಿಯಲ್ಲಿ ರೆಸಾರ್ಟ್ ತೆರವು ವೇಳೆ ಯಾವುದೋ ಸ್ಥಳ ವೀಕ್ಷಣೆಗೆ ಹೋದಾತ ರಾತ್ರಿ ಬಂದಿದ್ದಾನೆ. ನಸುಕಿನ ವೇಳೆಯಲ್ಲಿದ್ದ ಕಟ್ಟಡಗಳೆಲ್ಲ ನೆಲಸಮವಾಗಿವೆ. ಹಾಗಾಗಿ ಮಾರಿಯಾನ್ ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾ ಸರೋವರ, ಗವಿರಂಗನಾಥ, ವಾಲಿ ಕಿಲ್ಲಾ ಮತ್ತಿತರ ಸ್ಥಳಗಳನ್ನು ವೀಕ್ಷಿಸಿ ಇನ್ನೇನು ತಮ್ಮ ದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಹೊರಗಡೆ ಎಲ್ಲೂ ತಿರುಗುವ ಹಾಗಿಲ್ಲ. ಹಾಗಾಗಿ ಋಷಿಮುಖ ಪರ್ವತದ ಗುಹೆ ಪ್ರವೇಶಿದ್ದಾನೆ.
ಈ ಎರಡು ತಿಂಗಳಲ್ಲಿ ಮಾರಿಯಾನ್‌ಗೆ ಮೊದಲಿನಿಂದಲೂ ಆಧ್ಯಾತ್ಮದಲ್ಲಿ ಒಲವಿದ್ದಿದ್ದರಿಂದ ಅಲ್ಲಿನ ಪರಿಸರ ಮತ್ತು ಋಷಿ ಮುನಿಗಳ ಪರ್ವತದಗಳ ನಡುವೆ ಸನ್ಯಾಸಿಯಾಗಿರುವುದು ಗೊತ್ತಾಗಿದೆ. ಕೇಸರಿ ಉಡುಪು ಧರಿಸಿ, ಗಡ್ಡ ಬಿಟ್ಟಿದ್ದಾನೆ. ಇಂತಹ ಸಂದರ್ಭದಲ್ಲಿ ಮಾರಿಯನ್ ಧೈರ್ಯ ಮನಸ್ಸಿನ ನಡುವೆ ಕೊರೋನಾ ಭೀತಿಯಲ್ಲಿ ಮಾರ್ಚ್ ಮತ್ತು ಎಪ್ರಿಲ್ ಎರಡು ತಿಂಗಳು ಗುಹೆಯಲ್ಲಿ ವಾಸವಾಗಿದ್ದಾನೆ ಮತ್ತು ಹಣ್ಣು-ಹಂಪಲಿನಿಂದ ಹೊಟ್ಟೆ ತುಂಬಿಸಿಕೊಂಡಿದ್ದಾನೆ. ದೇಗುಲದ ಪಕ್ಕ ಹರಿಯುತ್ತಿದ್ದ ನೀರಿನ ಸಣ್ಣ ಝರಿಯಿಂದ ದಾಹ ನೀಗಿಸಿಕೊಂಡಿದ್ದಾನೆ.
ಸುಮಾರು ತಿಂಗಳ ಹಿಂದೆ, ಋಷಿಮುಖ ಪರ್ವತದಲ್ಲಿದ್ದ ಈಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಸಾಣಾಪುರ ಗ್ರಾಮಸ್ಥರೊಬ್ಬರು ಆಗಮಿಸಿದಾಗ ಮಾರಿಯಾನ್ ಗುಹೆಯಲ್ಲಿ ಸಿಲುಕಿರುವುದು ಗೊತ್ತಾಗಿದೆ. ಜನರು ಅಲ್ಲಿಗೆ ಬಂದು ಈಶ್ವರನ ಪೂಜೆ ಮಾಡುತ್ತಿದ್ದನ್ನು ಕಂಡು ಮಾರಿಯಾನ್ ಸಹ ನಿತ್ಯ ಪೂಜೆ ಮಾಡುತ್ತಿದ್ದಾನೆ. ಆಗಾಗ ಗ್ರಾಮಸ್ಥರು ಊಟ ಕೊಡುತ್ತಿದ್ದರು.
ಹತ್ತಿರದ ಸಾಣಪುರ ಗ್ರಾಮದ ಮತ್ತು ಕಿರ್ಲೋಸ್ಕರ ಕಂಪನಿಯ ನೌಕರ ಎಂ. ವೆಂಕಟರಮಣರಾವ್ ಎಂಬುವವರು ಅವರನ್ನು ಗಮನಿಸಿ ವಿಚಾರಿಸಿದಾಗ ಸತ್ಯ ಹೊರಬಂದಿದೆ. ಮಾರಿಯಾನ್ ಸಂಕಷ್ಟ ಅರಿತು ಅವರಿಗೆ ಬೇಕಾಗುವ ಆಹಾರದ ದಿನಸಿ ನೀಡಿದ್ದಾರೆ.
ಆ ವೇಳೆ ಲಾಕ್‌ಡೌನ್ ಮತ್ತು ಕೊರೋನಾ ಬಗ್ಗೆ ಮಾರಿಯಾನ್ ವಿಚಾರಿಸಿರುತ್ತಾನೆ ಮತ್ತು ಲಾಕ್‌ಡೌನ್ ಮುಗಿದ ಬಳಿಕ ಇಟಲಿಗೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಾರಿಯಾನ್ ಹಿಂದಿ ಭಾಷೆಯನ್ನು ಸಹ ಮಾತನಾಡುವುದರಿಂದ ಕಳೆದ 20 ವರ್ಷಗಳಿಂದ ಭಾರತದ ಪರಿಚಯವುರುತ್ತದೆ ಎಂದು ತಿಳಿಸಿದರು.
ವಿದೇಶದನಾದ್ದರಿಂದ ಆತನಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ರಿಜಲ್ಟ್ ನೆಗೆಟಿವ್ ಬಂದಿದೆ. ಈಗ ಆತನನ್ನು ಇಟಲಿಗೆ ಕಳಿಸಿಕೊಡಲು ಬರುವುದಿಲ್ಲ. ಲಾಕ್’ಡೌನ್ ಮುಗಿದ ಬಳಿಕ ಸರಕಾರ ಹಾಗೂ ಮೇಲಾಧಿಕಾರಿಗಳ ಆದೇಶ ಮತ್ತು ನಿರ್ದೇಶನದ ಪ್ರಕಾರ ಮುಂದಾಗಲಾಗುವುದು. ಎಂದು ಗಂಗಾವತಿ ತಾಲೋಕಿನ ತಹಶೀಲ್ದಾರ್ ಚಂದ್ರಕಾಂತ್ ತಿಳಿಸಿರುತ್ತಾರೆ ಎಂದು ಗೊತ್ತಾಗುತ್ತದೆ.
ವರದಿ: ಎಂ.ಎಂ. ನಾಡಿಗೇರ್
Get in Touch With Us info@kalpa.news Whatsapp: 9481252093
Discussion about this post