ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆನಂದಪುರಂ: ವರ್ಷತೊಡಕು ಹಬ್ಬದಂದು ಇತಿಹಾಸ ಪ್ರಸಿದ್ಧ ಭಂಗಿ ಭೂತಪ್ಪ ದೇವಾಲಯವನ್ನು ತೆರೆಯದಿದ್ದಕ್ಕೆ ಕಮಿಟಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ದೀಪಾವಳಿಯ ಹಬ್ಬದ ಕೊನೆಯ ದಿನ ವರ್ಷ ತೊಡಕು ಹಬ್ಬ ಇಂದು ನಾಡಿನ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಭಕ್ತರು ತಮ್ಮ ಇಷ್ಟದೇವತೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಸಾಗರ ತಾಲೂಕಿನ ಆನಂದಪುರ ಸಮೀಪದ ಬಸವನಹೊಂಡ ಗ್ರಾಮದ ಶಕ್ತಿಶಾಲಿ ದೇವರಾಗಿರುವ ಭಂಗಿ ಭೂತಪ್ಪ ದೇವಸ್ಥಾನವನ್ನು ಇನ್ನೂ ತೆರೆದಿಲ್ಲ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಕಮಿಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ದೇವಾಲಯದ ಸುತ್ತಮುತ್ತಲಿನ ಗ್ರಾಮಕ್ಕೆ ಅತಿ ಶಕ್ತಿಯುತ ದೇವಾಲಯ ಈ ದೇವರ ವಿಸ್ಮಯ ಪವಾಡಗಳು ಸುತ್ತಮುತ್ತ ಹಳ್ಳಿಗಳಿಗೆ ತಿಳಿದಿರುವುದು ಹಾಗೂ ಹಲವು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ದೇವಾಲಯ.
ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಈ ದೇವರ ದರ್ಶನವನ್ನು ಪಡೆದು ಹಣ್ಣು ಕಾಯಿ ನೈವೇದ್ಯ ನೀಡಲು ಬಂದಿದ್ದಾರೆ. ಆದರೆ, ಭಕ್ತರಿಗೆ ಆಶ್ಚರ್ಯ ಕಾದಿತ್ತು. ಈ ದೇವಾಲಯವೇ ಇಂದು ತೆರೆಯದಿದ್ದ ಕಾರಣ ಭಕ್ತರು ಕಮಿಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದು ಸರಿಯಾದ ಕ್ರಮವಲ್ಲ. ದೀಪಾವಳಿಯ ಕೊನೆಯ ದಿನ ದೇವಾಲಯವನ್ನು ಮುಚ್ಚಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕಮಿಟಿಯ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರಹಾಕಿದರು.










Discussion about this post