ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಡಿಕೆ ಬೆಳೆಗಾರರು ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ವೈರಾಣುವಿನಿಂದ ಹೊರತಾಗಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಅತಿಯಾದ ತಾಪಮಾನದಿಂದ ಅಡಿಕೆ ಹೀಚುಗಳು ಉದುರುತ್ತಿವೆ. ಮಳೆಗಾಲದ ಕೊಳೆರೋಗ, ಹಿಡಿ ಮಂಡಿ ರೋಗ, ಹಳದಿರೋಗ ಹೀಗೆ ಅನೇಕ ಕಾಯಿಲೆ ಬಾದಿಸಿ ಅಳಿದುಳಿದದ್ದು ರೈತನ ಕೈಗೆ ಎಟಕುತ್ತಿದೆ.
ನಿರ್ಧಿಷ್ಟ ಪ್ರಮಾಣದ ಬೆಲೆ ನಿಗದಿಯಾಗದೇ ಜೂಜಾಟದಂತೆ ಅಡಿಕೆ ಬೆಲೆ ಏರುಪೇರಿನ ಹಾವು ಏಣಿಯಾಟದಿಂದ ರೈತ ದಿಕ್ಕು ತೋಚದೇ ದಿಗ್ಬ್ರಾಂತನಾಗಿದ್ದಾನೆ. ಬೆಲೆ ಯಾವಾಗ ಏರುತ್ತದೆ ಎನ್ನುವುದನ್ನು ಊಹಿಸಲು ರೈತನ ಬುದ್ದಿಮಟ್ಟಕ್ಕೆ ಅಸಾಧ್ಯವೆನಿಸಿದೆ.
ಕಳೆದ ನಾಲ್ಕು ವರ್ಷದಲ್ಲಿ 2020 ಅಲ್ಪ ಬೆಲೆ ಚೇತರಿಕೆ ಕಾಣಿಕೊಳ್ಳುತ್ತಿದ್ದ ವರ್ಷಾರಂಭದಲ್ಲಿ ಅಡಿಕೆ ಬೆಳೆಗಾರರ ಮುಖದಲ್ಲಿ ನಿರೀಕ್ಷೆಯ ಕೂತುಹಲಗಳಿದ್ದವು. ಯಾವಾಗ ಕೊರೋನಾ ಹೆಮ್ಮಾರಿ ತಂದ್ದೊಡಿದ ಮರ್ಮಾಘಾತ ಎಲ್ಲವನ್ನೂ, ಎಲ್ಲರನ್ನೂ ಸ್ಥಬ್ಧ ಮಾಡಿತು. ಅದರ ಪರಿಣಾಮ ಅಡಿಕೆ ಬೆಳೆಗಾರರು ಸಹ ಅನುಭವಿಸಬೇಕಾಗಿದೆ.
ಸರ್ಕಾರ ಬೇರೆ ಎಲ್ಲ ಬೆಳೆಗಾರರಿಗೆ ಹಲವಾರು ರೀತಿಯ ಸಹಾಯ ಮಾಡುತ್ತದೆ. ಅಡಿಕೆ ಬೆಳೆಯಿಂದ ಇಷ್ಟೆಲ್ಲ ಪಜೀತಿಯನ್ನು ಅನುಭವಿಸಿದರೂ ಪರಿಗಣಿಸದಿರುವುದು ತುಂಬ ಶೋಚನೀಯ ಸಂಗತಿ. ಮಲೆನಾಡು ಭಾಗದ ಬಹು ಕುಟುಂಬದ ಮೂಲ ಕೃಷಿ ಅಡಿಕೆಯಾಗಿದ್ದು. ಅಡಿಕೆ ನಾಡಿನಿಂದಲೇ ರಾಜಕೀಯವಾಗಿಯೂ ಹಲವಾರು ಅತಿರಥ ಮಹಾರಥ ನಾಯಕ ಉಗಮಿಸಿದ್ದರೂ ಅಧಿಕಾರ ಪರ್ವಕಾಲದಲ್ಲಿ ಬಹುಶಃ ನಾವು ಮತ್ತು ನಮ್ಮ ಕಷ್ಟಗಳು ಮರೆತೇ ಹೋಗಿರುತ್ತವೆಂದು ಅನಿಸುತ್ತದೆ.
ಸರ್ಕಾರ ದಯಮಾಡಿ ಅಡಿಕೆಗೆ ನಿಗದಿತ ಬೆಲೆ ನೀಡಿ ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಎಲ್ಲ ರೈತರಂತೆಯೇ ಅಡಿಕೆ ಬೆಳೆಗಾರರು ವ್ಯವಸಾಯವನ್ನೇ ಮಾಡುತ್ತಿರುವುದು. ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಅದಷ್ಟು ಬೇಗ ಅಡಿಕೆಗೆ ನಿಗದಿತ ಬೆಲೆ ದೊರೆಯುತಾಗಲಿ.

Get in Touch With Us info@kalpa.news Whatsapp: 9481252093















